ಬೆಂಗಳೂರು ವಿಶ್ವವಿದ್ಯಾಲಯ ಅಂಚೆ ತೆರಪು ಹಾಗೂ ದೂರ ಶಿಕ್ಷಣ ಮುಕ್ತ ವಿಶ್ವವಿದ್ಯಾಲಯ ಯೋಜನೆಗಳಡಿ ದಾಖಲಾತಿ

ಬೆಂಗಳೂರು ವಿಶ್ವವಿದ್ಯಾಲಯ 2016 -17ನೇ ಸಾಲಿನ ಶೈಕ್ಷಣಿಕ ವರ್ಷದ ಅಂಚೆ ತೆರಪು ಹಾಗೂ ದೂರ ಶಿಕ್ಷಣ ಮುಕ್ತ ವಿಶ್ವವಿದ್ಯಾಲಯ ಯೋಜನೆಗಳಡಿ ದಾಖಲಾತಿ ಅಧಿಸೂಚನೆ

2016 -17 ನೇ ಸಾಲಿನ ಶೈಕ್ಷಣಿಕ ವರ್ಷದ ಅಂಚೆ ತೆರಪು ಹಾಗೂ ದೂರ ಶಿಕ್ಷಣ ಮುಕ್ತ ವಿಶ್ವವಿದ್ಯಾಲಯ ಯೋಜನೆಗಳಡಿ ವಿವಿಧ ಕೋರ್ಸುಗಳ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ಸ್ನಾತಕ ಮತ್ತು ಪ್ರಥಮ ಮತ್ತು ದ್ವಿತೀಯ ವರ್ಷದ ಸ್ನಾತಕೋತ್ತರ ಕೋರ್ಸುಗಳಿಗೆ ಹಾಗೂ ಸ್ನಾತಕೋತ್ತರ ಡಿಪ್ಲೋಮ, ಡಿಪ್ಲೋಮ ಕೋರ್ಸು ಮತ್ತು ಪ್ರಮಾಣ ಪತ್ರಗಳ ಕೋರ್ಸುಗಳ ದಾಖಲಾತಿಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ದೂರ ಶಿಕ್ಷಣ ಅಧ್ಯಯನ ದಾಖಲಾತಿ
1 . ಬಿ.ಎ (ಕನ್ನಡ/ಆಂಗ್ಲ ಮಾಧ್ಯಮ) - ಅಂಚೆ ತೆರಪು ಮತ್ತು ಮುಕ್ತ ವಿಶ್ವವಿದ್ಯಾಲಯ ಯೋಜನೆ
ಬಿ.ಕಾಮ್ (ಆಂಗ್ಲ ಮಾಧ್ಯಮ ಮಾತ್ರ)-ಅಂಚೆ ತೆರಪು ಮತ್ತು ಮುಕ್ತ ವಿಶ್ವವಿದ್ಯಾಲಯ ಯೋಜನೆ
ಬಿ.ಬಿ.ಎಂ (ಆಂಗ್ಲ ಮಾಧ್ಯಮ ಮಾತ್ರ)-ಅಂಚೆ ತೆರಪು ಯೋಜನೆ ಮಾತ್ರ
2 . ಎಂ.ಎ : ಕನ್ನಡ, ಇಂಗ್ಲಿಷ್, ಹಿಂದಿ, * ತೆಲುಗು, * ಉರ್ದು
ಎಂ.ಎ: ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ,ಸಮಾಜಶಾಸ್ತ್ರ (ಕನ್ನಡ/ಆಂಗ್ಲ ಮಾಧ್ಯಮ)*, ತತ್ವಶಾಸ್ತ್ರ (ಆಂಗ್ಲಾ ಮಾಧ್ಯಮ)
*ಅಂಚೆ ತೆರಪು ಯೋಜನೆ ಮಾತ್ರ
3 . ಎಂ.ಎ: * ಸಂಸ್ಕೃತ ಮತ್ತು ಫ್ರೆಂಚ್ -ಬಾಹ್ಯ ಯೋಜನೆ
4 . ಎಂ.ಕಾಂ: (ಆಂಗ್ಲ ಮಾಧ್ಯಮ)
5 . ಎಂ.ಎಸ್ಸಿ: ಗಣಿತ (ಆಂಗ್ಲ ಮಾಧ್ಯಮ)
6 . ಸ್ನಾತಕೋತ್ತರ ಡಿಪ್ಲೋಮ ಕೋರ್ಸುಗಳು: ಮಾನವ ಸಂಪನ್ಮೂಲ ನಿರ್ವಹಣೆ, ವ್ಯಾಪಾರ ಆಡಳಿತ ನಿರ್ವಹಣೆ, ಮಾರ್ಕೆಟಿಂಗ್ ಆಡಳಿತ, * ಹಿಂದಿ ಭಾಷಾಂತರ
7 . ಡಿಪ್ಲೋಮ ಕೋರ್ಸುಗಳು: (ಆಂಗ್ಲ ಮಾಧ್ಯಮ) * ಅನ್ವಯಿಕ ಪೌಷ್ಟಿಕತೆ ಮತ್ತು ಆಹಾರ
8 . ಪ್ರಮಾಣ ಪತ್ರಗಳು ಕೋರ್ಸುಗಳು: ಅನ್ವಯಿಕ ಪೌಷ್ಟಿಕತೆ ಮತ್ತು ಆಹಾರ ವಿಜ್ಞಾನ (ಆಂಗ್ಲ ಮಾಧ್ಯಮ) ಮತ್ತು *ಕನ್ನಡ.

ಸೂಚನೆ

1 .ಈ ಮೇಲ್ಕಾಣಿಸಿರುವ *ಕೋರ್ಸುಗಳಿಗೆ ಕನಿಷ್ಠ 20 ಅರ್ಜಿಗಳು ಪ್ರವೇಶ ದಾಖಲಾತಿ ನೋಂದಾವಣಿ ಮಾಡಿದ್ದಲ್ಲಿ ಸದರಿ ಕೋರ್ಸುಗಳನ್ನು ಮುಂದುವರಿಸಲಾಗುವುದು. ಕನಿಷ್ಠ ಸಂಖ್ಯೆಯ ಅರ್ಜಿಗಳು ಪ್ರವೇಶ ನೋಂದಾವಣಿ ಮಾಡಿದ್ದಲ್ಲಿ ಅಂತಹ ಕೋರ್ಸುಗಳನ್ನು ರದ್ದು ಮಾಡಿ ನೋಂದಾವಣಿ ಮಾಡಿದ ಅಭ್ಯರ್ಥಿಗಳಿಗೆ ದಾಖಲಾತಿ ಮೊತ್ತದಲ್ಲಿ ಅರ್ಜಿ ವೆಚ್ಚ ಮತ್ತು ಮಾಹಿತಿ ಪುಸ್ತಕದ ವೆಚ್ಚವನ್ನು ಕಟಾಯಿಸಿ ಉಳಿದ ಹಣವನ್ನು ಪ್ರವೇಶ ದಾಖಲಾತಿ ಕೊನೆಯ ದಿನಾಂಕದ ನಂತರ ಪರುಪಾವತಿಸಲಾಗುವುದು.
2 . ಕೋರ್ಸುಗಳ ವಿವರ ಮತ್ತು ಅರ್ಹತಾ ನಿಯಮ/ ಶುಲ್ಕಗಳ ವಿವರ ಮತ್ತು ಅಗತ್ಯವಾದ ಮಾಹಿತಿಗಳನ್ನು ವೆಬ್ಸೈಟ್ ವಿಳಾಸ bangaloreuniversity.ac.in ರಲ್ಲಿ ಪಡೆಯಬಹುದಾಗಿದೆ.
ಪ್ರವೇಶ ಕೈಪಿಡಿಯ ಸಹಿತ ಅರ್ಜಿ ಶುಲ್ಕ ರೂ.550 /- (ಪ.ಜಾ-ಪ.ಪಂ. ವಿದ್ಯಾಥಿಗಳಿಗೆ ರೂ.250 /-) ಅನ್ನು ಅಭ್ಯರ್ಥಿಗಳು ವಿಶ್ವವಿದ್ಯಾಲಯದ ಉಳಿತಾಯ ಖಾತೆ ಸಂಖ್ಯೆ : 64062451218 ಸ್ಟೇಟ್ ಬ್ಯಾಂಕ್ ಆಫ್ ಮೈಸೂರು,ನಾಗರಭಾವಿ ಶಾಖೆ, ಬೆಂಗಳೂರು ಅಥವಾ ಚಾಲ್ತಿ ಖಾತೆ ಸಂಖ್ಯೆ: 917020020468197 , ಆಕ್ಸಿಸ್ ಬ್ಯಾಂಕ್ ರಾಜಾಜಿ ನಗರ , ಬೆಂಗಳೂರು, ಈ ಖಾತೆಗಳಿಗೆ ಅಂತರ್ಜಾಲದ ಮೂಲಕ ಜಮೆ ಮಾಡಿ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಸಲ್ಲಿಸಬಹುದು.

ಅಥವಾ

ಪ್ರವೇಶ ಕೈಪಿಡಿ ಸಹಿತ ಅರ್ಜಿಗಳನ್ನು ನಿಗದಿತ ಶುಲ್ಕ ರೂ.550 /- (ಪ.ಜಾ-ಪ.ಪಂ. ವಿದ್ಯಾಥಿಗಳಿಗೆ ರೂ.250 /-) ಅನ್ನು ವಿತ್ತಾಧಿಕಾರಿಗಳು, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ರವರ ಹೆಸರಿನಲ್ಲಿ ಪಡೆದ ಬ್ಯಾಂಕ್ ಡಿಮ್ಯಾಂಡ್ ಡ್ರಾಫ್ಟ್ ಅನ್ನು ವಿತ್ತಾಧಿಕಾರಿಗಳ ಕಚೇರಿ, ಜ್ಞಾನಭಾರತಿ ಆವರಣ, ಬೆಂಗಳೂರು-560056 . ವಿಶ್ವವಿದ್ಯಾಲಯ ಇವರಿಗೆ ಅವರಿಂದ ಪಡೆದ ರಸೀದಿಯನ್ನು ಸಲ್ಲಿಸಿ, ಅಂಚೆ ತೆರಪು ಹಾಗೂ ದೂರ ಶಿಕ್ಷಣ ನಿರ್ದೇಶನಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು-560056 ಇಲ್ಲಿ ಪಡೆಯಬಹುದು.

ಅಭ್ಯರ್ಥಿಗಳು ಅರ್ಜಿ ಮತ್ತು ಪ್ರವೇಶ ಕೈಪಿಡಿಯನ್ನು ಅಂಚೆ ಮೂಲಕ ಪಡೆಯಲು ಇಚ್ಚಿಸಿದಲ್ಲಿ, ಅವರುಗಳು ಒಂದು ಸ್ವವಿಳಾಸ ಇರುವ 30 ಸೆಂ.ಮೀX25 ಸೆಂ.ಮೀ . ಅಳತೆಯ ಲಕೋಟೆಯನ್ನು " ನಿರ್ದೇಶಕರು, ಅಂಚೆ ತೆರಪು ಹಾಗೂ ದೂರ ಶಿಕ್ಷಣ ನಿರ್ದೇಶನಾಲಯ ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು-560056 " ಇವರಿಗೆ ರೂ.200 /- ರ ಅಂಚೆ ಚೀಟಿಗಳುಳ್ಳ ಲಕೋಟೆಯೊಂದಿಗೆ, ವಿತ್ತಾಧಿಕಾರಿಗಳು ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ರವರ ಹೆಸರಲ್ಲಿ ಪಡೆದ ರೂ.550 /- (ಪ.ಜಾ-ಪ.ಪಂ. ವಿದ್ಯಾಥಿಗಳಿಗೆ ರೂ.250 /-) ರ ಬ್ಯಾಂಕ್ ನ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಕಳುಹಿಸಿ ಪಡೆಯಬಹುದು. ಈ ರೀತಿಯ ಮನವಿಗಳನ್ನು ನಿಗದಿಪಡಿಸಿದ ದಿನಾಂಕಕ್ಕಿಂತ ಸಾಕಷ್ಟು ಮುಂಚಿತವಾಗಿ ತಲುಪಿಸಬೇಕು.

ಅರ್ಜಿಗಳನ್ನು ಪಡೆಯುವ ಸ್ಥಳ:

1 . ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ನಾಗರಭಾವಿ ಶಾಖೆ, ಬೆಂಗಳೂರು.
2 . ಅಂಚೆ ತೆರಪು ಹಾಗೂ ದೂರ ಶಿಕ್ಷಣ ನಿರ್ದೇಶನಾಲಯ, ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು-560056
3 . ಭರ್ತಿ ಮಾಡಿದ ಅರ್ಜಿಗಳನ್ನು ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ಶುಲ್ಕದ ರಶೀತಿ ಪ್ರತಿಯನ್ನು ಒಳಗೊಂಡಂತೆ ನಿಗದಿತ ದಿನಾಂಕದೊಳಗೆ ಅಂಚೆ ತೆರಪು ಹಾಗೂ ದೂರ ಶಿಕ್ಷಣ ನಿರ್ದೇಶನಾಲಯ, ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು-560056 ಇಲ್ಲಿಗೆ ಸಲ್ಲಿಸುವುದು.

ದಾಖಲಾತಿ ಅರ್ಜಿಗಳನ್ನು ನೀಡುವ ಮತ್ತು ಸ್ವೀಕರಿಸುವ ಪ್ರಕಟಿತ ದಿನಾಂಕಗಳು

* ಅರ್ಜಿ ಫಾರಂಗಳನ್ನೂ ವಿತರಿಸುವ ಕೊನೆಯ ದಿನಾಂಕ (ದಂಡವಿಲ್ಲದೆ): 06 -03 -2017
* ಅರ್ಜಿ ಫಾರಂಗಳನ್ನೂ ಪಡೆಯಲು ಕೊನೆಯ ದಿನಾಂಕ (ರೂ.200 /- ದಂಡ ಶುಲ್ಕದೊಂದಿಗೆ): 15 -03 -2017
* ಭರ್ತಿ ಮಾಡಿದ ಅರ್ಜಿ ಫಾರಂಗಳನ್ನೂ ಎಲ್ಲಾ ದಾಖಲಾತಿಗಳೊಂದಿಗೆ ಸಲ್ಲಿಸುವ ಕೊನೆಯ ದಿನಾಂಕ: 20 -03 -2017

ಸೂಚನೆ

ಈ ಅಧಿಸೂಚನೆಯು ಇತರ ಯಾವುದೇ ಅಧ್ಯಯನ ಕೇಂದ್ರಗಳಿಗೆ ಅನ್ವಯವಾಗುವುದಿಲ್ಲ.

For Quick Alerts
ALLOW NOTIFICATIONS  
For Daily Alerts

English summary
BANGALORE UNIVERSITY: DIRECTORATE OF CORRESPONDENCE COURSES & DISTANCE EDUCATION admissions for 2016-17 academic year
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X