ಬೆಂಗಳೂರು ವಿಶ್ವವಿದ್ಯಾಲಯ ದೂರಶಿಕ್ಷಣದ ವಿವಿಧ ಕೋರ್ಸುಗಳ ದಾಖಲಾತಿ

2017-18 ನೇ ಸಾಲಿನ ಶೈಕ್ಷಣಿಕ ವರ್ಷದ ಅಂಚೆ ತೆರಪು, ದೂರ ಶಿಕ್ಷಣ ಹಾಗೂ ಮುಕ್ತ ವಿಶ್ವವಿದ್ಯಾಲಯ ಯೋಜನೆಗಳಡಿ ಪ್ರಥಮ ವರ್ಷದ ಸ್ನಾತಕ/ಸ್ನಾತಕೋತ್ತರ ಮತ್ತು ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸುಗಳ ದಾಖಲಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ

2017-18 ನೇ ಸಾಲಿನ ಶೈಕ್ಷಣಿಕ ವರ್ಷದ ಅಂಚೆ ತೆರಪು, ದೂರ ಶಿಕ್ಷಣ ಹಾಗೂ ಮುಕ್ತ ವಿಶ್ವವಿದ್ಯಾಲಯ ಯೋಜನೆಗಳಡಿ ವಿವಿಧ ಕೋರ್ಸುಗಳ ಪ್ರಥಮ ವರ್ಷದ ಸ್ನಾತಕ/ಸ್ನಾತಕೋತ್ತರ ಮತ್ತು ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸುಗಳ ದಾಖಲಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯ ದಾಖಲಾತಿ

ಕೋರ್ಸುಗಳ ವಿವರ

ಸ್ನಾತಕ ಕೋರ್ಸುಗಳು

  • ಬಿ.ಎ (ಕನ್ನಡ/ಆಂಗ್ಲ ಮಾಧ್ಯಮ): ಅಂಚೆ ತೆರಪು ಮತ್ತು ಮುಕ್ತ ವಿಶ್ವವಿದ್ಯಾಲಯ ಯೋಜನೆ
  • ಬಿ.ಕಾಂ (ಆಂಗ್ಲ ಮಾಧ್ಯಮ ಮಾತ್ರ): ಅಂಚೆ ತೆರಪು ಮತ್ತು ಮುಕ್ತ ವಿಶ್ವವಿದ್ಯಾಲಯ ಯೋಜನೆ
  • ಬಿ.ಬಿ.ಎ (ಆಂಗ್ಲ ಮಾಧ್ಯಮ ಮಾತ್ರ): ಅಂಚೆ ತೆರಪು ಯೋಜನೆ ಮಾತ್ರ

ಸ್ನಾತಕೋತ್ತರ ಕೋರ್ಸುಗಳು

  • ಎಂ.ಎ : ಕನ್ನಡ, ಇಂಗ್ಲಿಷ್, ತೆಲುಗು, ಉರ್ದು
  • ಎಂ.ಎ: ಇತಿಹಾಸ, ಅರ್ಥಶಾಸ್ತ್ರ, ರಾಜಕೀಯ, ವಿಜ್ಞಾನ, ಸಮಾಜಶಾಸ್ತ್ರ (ಕನ್ನಡ/ಆಂಗ್ಲ ಮಾಧ್ಯಮ), ತತ್ವಶಾಸ್ತ್ರ (ಆಂಗ್ಲ ಮಾಧ್ಯಮ)-ಅಂಚೆ ತೆರಪು ಯೋಜನೆ
  • ಎಂ.ಎ : ಸಂಸ್ಕೃತ ಮತ್ತು ಫ್ರೆಂಚ್ -ಬಾಹ್ಯ ಯೋಜನೆ
  • ಎಂ.ಕಾಂ: (ಆಂಗ್ಲ ಮಾಧ್ಯಮ)
  • ಎಂ.ಎಸ್ಸಿ: ಗಣಿತ (ಆಂಗ್ಲ ಮಾಧ್ಯಮ)

ಸ್ನಾತಕೋತ್ತರ ಡಿಪ್ಲೊಮಾ ಕೋರ್ಸುಗಳು: ಮಾನವ ಸಂಪನ್ಮೂಲ ನಿರ್ವಹಣೆ, ವ್ಯಾಪಾರ ಆಡಳಿತ, ಮಾರಾಟ ಮಾಡುವುದರ ನಿರ್ವಹಣೆ, ಹಿಂದಿ ಭಾಷಾಂತರ

ಡಿಪ್ಲೊಮಾ ಕೋರ್ಸುಗಳು: ಆಂಗ್ಲ ಮಾಧ್ಯಮ- ಅನ್ವಯಿತ ಪೌಷ್ಠಿಕ ಮತ್ತು ಆಹಾರ
ಪ್ರಮಾಣ ಪತ್ರ ಕೋರ್ಸುಗಳು: ಕನ್ನಡ ಮತ್ತು ಅನ್ವಯಿಕ ಪೌಷ್ಠಿಕತೆ ಮತ್ತು ಆಹಾರ ವಿಜ್ಞಾನ (ಆಂಗ್ಲ ಮಾಧ್ಯಮ)

ಕೋರ್ಸುಗಳ ವಿವರ ಮತ್ತು ಅರ್ಹತಾ ನಿಯಮ/ಶುಲ್ಕಗಳ ವಿವರ ಮತ್ತು ಅಗತ್ಯವಾದ ಮಾಹಿತಿಗಳನ್ನು ಅಂತರ್ಜಾಲ (ಆನ್-ಲೈನ್) ವೆಬ್ಸೈಟ್ ವಿಳಾಸ: www.dccbub.in ಅಥವಾ www.bangaloreuniversity.ac.in ರಲ್ಲಿ ಪಡೆಯಬಹುದಾಗಿದೆ.

ಪ್ರವೇಶ ಕೈಪಿಡಿ ಸಲ್ಲಿಕೆ

ಅಂತರ್ಜಾಲ, ಬೆಂಗಳೂರು ಒನ್ ಅಥವಾ ಅಂಚೆ ತೆರಪು ಹಾಗೂ ದೂರ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಜಿ ಶುಲ್ಕ ಪಾವತಿಸಿ ಅರ್ಜಿ ಮತ್ತು ಕೈಪಿಡಿಗಳನ್ನು ಪಡೆಯಬಹುದಾಗಿದೆ.

ಅರ್ಜಿ ಶುಲ್ಕ ರೂ.550/-

ಭರ್ತಿ ಮಾಡಿದ ಅರ್ಜಿಗಳನ್ನು ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ಶುಲ್ಕದ ರಸೀತಿ ಪ್ರತಿಯನ್ನು ಒಳಗೊಂಡಂತೆ ನಿಗದಿತ ದಿನಾಂಕದೊಳಗೆ ಅಂಚೆ ತೆರಪು ಹಾಗೂ ದೂರ ಶಿಕ್ಷಣ ನಿರ್ದೇಶನಾಲಯ, ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು-560056 ಗೆ ಸಲ್ಲಿಸುವುದು.

ಪ್ರಮುಖ ದಿನಾಂಕಗಳು

  • ಅರ್ಜಿ ಫಾರಂಗಳನ್ನು ವಿತರಿಸುವ ದಿನಾಂಕ (ದಂಡ ಶುಲ್ಕವಿಲ್ಲದೆ): 09/10/2017 ರಿಂದ 15/11/2017
  • ಅರ್ಜಿ ಫಾರಂಗಳನ್ನು ವಿತರಿಸುವ ದಿನಾಂಕ (ರೂ.200/- ದಂಡ ಶುಲ್ಕದೊಂದಿಗೆ): 16/11/2017 ರಿಂದ 30/11/2017
  • ಭರ್ತಿ ಮಾಡಿದ ಅರ್ಜಿ ಫಾರಂಗಳನ್ನು ಎಲ್ಲಾ ದಾಖಲಾತಿಗಳೊಂದಿಗೆ ಸಲ್ಲಿಸುವ ಕೊನೆಯ ದಿನಾಂಕ (ದಂಡವಿಲ್ಲದೆ): 08/12/2017

ದಾಖಲಾತಿ ವಿಧಾನ

ಅರ್ಹ ಅಭ್ಯರ್ಥಿಗಳಿಗೆ ಸಂಬಂಧಪಟ್ಟ ಮೂಲ ದಾಖಲಾತಿಗಳನ್ನು ಅಂದರೆ ಅಂಕಪಟ್ಟಿ, ಹುಟ್ಟಿದ ದಿನಾಂಕ, ಪ್ರಮಾಣ ಪತ್ರ, ನಿಗದಿತ ಶುಲ್ಕ, ಇತ್ಯಾದಿಗಳ ಸಹಿತ ತಾವಾಗಿಯೇ ಬಂದು ದಾಖಲಾಗಲು ಸೂಚಿಸಲಾಗುವುದು.

For Quick Alerts
ALLOW NOTIFICATIONS  
For Daily Alerts

English summary
Bangalore university invites application for admission to the first year Bachelor's / Master's and Diploma and Certificate courses in various courses under Post-Graduate, Distance Education and Open University Projects 2017-18.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X