ಬಿ.ಎಸ್ಸಿ ಆನರ್ಸ್ 2017-18 ನೇ ಸಾಲಿಗೆ ಪ್ರವೇಶಾತಿ ಪ್ರಾರಂಭ

ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್‌ ಎಕನಾಮಿಕ್ಸ್‌ ಬಿ.ಎಸ್ಸಿ ಆನರ್ಸ್ ಗೆ 2017-18ನೇ ಸಾಲಿನ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪ್ರಥಮ ವರ್ಷದ ಬಿ.ಎಸ್ಸಿ (ಆನರ್ಸ್) ಎಕನಾಮಿಕ್ಸ್‌ ಕೋರ್ಸ್‌ ಆರಂಭಿಸಲಾಗುತ್ತಿದೆ. 50 ಸೀಟುಗಳು ಇವೆ. ಇದರಲ್ಲಿ 25 ಸೀಟುಗಳನ್ನು ಕರ್ನಾಟಕದ ವಿದ್ಯಾರ್ಥಿಗಳಿಗೆ ಮತ್ತು 25 ಸೀಟುಗಳನ್ನು ದೇಶದ ಇತರೆ ಭಾಗದ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ ಹಾಗೂ ಪುಣೆ, ಕೋಲ್ಕತ್ತ, ಚೆನ್ನೈ ಹಾಗೂ ದೆಹಲಿಯಲ್ಲಿ ಪ್ರವೇಶ ಪರೀಕ್ಷೆ ನಡೆಸಲಿದೆ.

ಬಿ.ಎಸ್ಸಿ ಆನರ್ಸ್ ಪ್ರವೇಶಾತಿ

 

ಪ್ರವೇಶ ಪರೀಕ್ಷೆ ವಿವರ

ಪ್ರವೇಶ ಪರೀಕ್ಷೆಯು ನೂರು ಅಂಕಗಳನ್ನು ಒಳಗೊಂಡಿದ್ದು, ಉತ್ತರಿಸಲು 120 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಪತ್ರಿಕೆಯು ರೀಸನಿಂಗ್, ಕ್ವಾಂಟಿಟೇಟಿವ್, ಇಂಗ್ಲಿಷ್, ಜನರಲ್ ಅವೇರ್ನೇಸ್ ವಿಷಯಗಳನ್ನೊಳಗೊಂಡಿರುತ್ತದೆ.

ವಿಷಯಪ್ರಶ್ನೆಗಳುಅಂಕಗಳು
ರೀಸನಿಂಗ್3030
ಕ್ವಾಂಟಿಟೇಟಿವ್3030
ಇಂಗ್ಲಿಷ್2020
ಜನರಲ್ ಅವೇರ್ನೆಸ್2020

ಪ್ರಮುಖ ದಿನಾಂಕಗಳು

 • ಅರ್ಜಿ ಸಲ್ಲಿಸಲು ಕೊನೆಯ ದಿನ: 18-07-2017

 • ಪ್ರವೇಶ ಪತ್ರಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು: 24-07-2017
 • ಪ್ರವೇಶ ಪರೀಕ್ಷೆ: 30-07-2017
 • ಕೀ ಆನ್ಸರ್ ಪ್ರಕಟ: 03-08-2017

 • ಫಲಿತಾಂಶ ಪ್ರಕಟ: 07-08-2017
 • ಸೀಟು ಹಂಚಿಕೆ ಕೌನ್ಸೆಲಿಂಗ್: 12-08-2017
 • ತರಗತಿ ಪ್ರಾರಂಭ: 23-08-2017
 • ಅರ್ಜಿ ಸಲ್ಲಿಕೆ

  ಅರ್ಜಿಗಳನ್ನು ಆನ್-ಲೈನ್ ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು cetonline.karnataka.gov.in ಕ್ಲಿಕ್ ಮಾಡಿ.

  ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.500/-
  • ಎಸ್.ಸಿ/ಎಸ್.ಟಿ/ಪ್ರ-1 ರ ಅಭ್ಯರ್ಥಿಗಳಿಗೆ ರೂ.300/-

   ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್‌ ಎಕನಾಮಿಕ್ಸ್‌ (ಬೇಸ್)

   ಬೇಸ್ ಒಂದು ಸಂಪೂರ್ಣ ವಸತಿ ಶಿಕ್ಷಣ ಸಂಸ್ಥೆಯಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಮತ್ತು ಸಂಶೋಧನಾರ್ಥಿಗಳು ಕಡ್ಡಾಯವಾಗಿ ಕ್ಯಾಂಪಸ್ ನಲ್ಲಿರುವ ವಿದ್ಯಾರ್ಥಿನಿಲಯದಲ್ಲೇ ನೆಲಸಬೇಕಾಗಿದೆ.

   ಸಂಸ್ಥೆಯ ವೈಶಿಷ್ಟ್ಯ ಮತ್ತು ಸೌಲಭ್ಯಗಳು ಬೇಸ್ ಅನ್ನು ಶ್ರೇಷ್ಠ ಶೈಕ್ಷಣಿಕ ಸಂಸ್ಥೆಯಾಗಿ ರೂಪಿಸಲು ಹಾಗೂ ವಿಶ್ವದರ್ಜೆಯ ಸಂಸ್ಥೆಗಳ ಬೋಧನಾ ಗುಣಮಟ್ಟವನ್ನು ಖಾತರಿಪಡಿಸುವ ಸಲುವಾಗಿ, ದೇಶ ಹಾಗೂ ವಿದೇಶಗಳ ಉತ್ತಮ ಪ್ರಾಧ್ಯಾಪಕರುಗಳನ್ನು ಆಹ್ವಾನಿಸಿ ಸಂಸ್ಥೆಯಲ್ಲಿ ಬೋಧಿಸಲು ಉದ್ದೇಶಿಸಿದೆ.

   ಆಸಕ್ತ ಅಭ್ಯರ್ಥಿಗಳು ರಾಜ್ಯ ಮಂಡಳಿಗಳ/ಸಿಬಿಎಸ್ಇ/ಐಸಿಎಸ್ಇಗಳಿಂದ ಗಣಿತ ಒಂದು ವಿಷಯವಾಗಿಸಿಕೊಂಡು 10+2 ಅನ್ನು ಪೂರ್ಣಗೊಳಿಸಿರಬೇಕು ಹಾಗೂ ಕನಿಷ್ಠ ಸರಾಸರಿ ಶೇ.65 ಅಂಕ (ಪ.ಜಾ/ಪ.ಪಂ ದವರಿಗೆ ಶೇ.60) ಗಳಿಸಿದವರನ್ನು ಪರಿಗಣಿಸಲಾಗುವುದು.

   ಪ್ರಶಂಸನೀಯ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಕರ್ನಾಟಕ ಸರ್ಕಾರ ನಿರ್ಧರಿಸಿದಂತೆ ಸೀಟುಗಳ ಮೀಸಲಾತಿಯನ್ನು ಅಳವಡಿಸಿಕೊಳ್ಳಲಾಗುವುದು.

   ಶೆ.50ರಷ್ಟು ಸೀಟುಗಳ ಕರ್ನಾಟಕದ ಸ್ಥಳೀಯರಿಗೆ ಮತ್ತು ಉಳಿದ ಶೇ.50ರಷ್ಟು ದೇಶದ ಇತರೆ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ.

   For Quick Alerts
   ALLOW NOTIFICATIONS  
   For Daily Alerts

   English summary
   Applications are invited from eligible candidates of India to first year B.SC (Honours) for the academic year 2017-18 in Bengaluru Dr.B.R.Ambedkar School of Economics.
   --Or--
   Select a Field of Study
   Select a Course
   Select UPSC Exam
   Select IBPS Exam
   Select Entrance Exam
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X