ಬಿ.ಇಡಿ. ಕೋರ್ಸ್‍ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ

ಬಿ.ಇಡಿ. ಕೋರ್ಸಿನ ವ್ಯಾಸಂಗಕ್ಕಾಗಿ ರಾಜ್ಯದ ಎಲ್ಲಾ ಶಿಕ್ಷಣ ಮಹಾವಿದ್ಯಾಲಯಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

2017-18 ನೇ ಸಾಲಿನ ಎರಡು ವರ್ಷಗಳ ಬಿ.ಇಡಿ. ಕೋರ್ಸ್‍ಗೆ ಸರ್ಕಾರಿ ಕೋಟಾದ ಸೀಟುಗಳಿಗೆ ಪ್ರವೇಶ ಮತ್ತು ಹಂಚಿಕೆಗೆ ಅರ್ಜಿ ಆಹ್ವಾನಿಸಲಾಗಿದೆ.

ಬಿ.ಇಡಿ. ಕೋರ್ಸಿನ ವ್ಯಾಸಂಗಕ್ಕಾಗಿ ರಾಜ್ಯದ ಎಲ್ಲಾ ಶಿಕ್ಷಣ ಮಹಾವಿದ್ಯಾಲಯಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಬಿ.ಇಡಿ. ಕೋರ್ಸ್‍ ಪ್ರವೇಶಾತಿ

ಅರ್ಹತೆಗಳು

  1. ಸರ್ಕಾರಿ ಸೀಟುಗಳಿಗೆ ಅಭ್ಯರ್ಥಿಯು ಭಾರತದ ಪ್ರಜೆಯಾಗಿದ್ದು, ಕರ್ನಾಟಕದ ಅಭ್ಯರ್ಥಿಯಾಗಿರಬೇಕು.
  2. 10+2+3 (ಎಸ್.ಎಸ್.ಎಲ್.ಸಿ + 2 ವರ್ಷದ ಪಿ.ಯು.ಸಿ + 3 ವರ್ಷದ ಪದವಿ) ಕ್ರಮದ ವಿದ್ಯಾರ್ಹತೆಯನ್ನು ಹೊಂದಿರಬೇಕು.

ವಿ.ಸೂ:- 2012ರ ಒಳಗಡೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ (KSOU) ಪದವಿ/ಸ್ನಾತಕೋತ್ತರ ಪದವಿಗೆ ದಾಖಲಾದ ಅಭ್ಯರ್ಥಿಗಳು ಮಾತ್ರ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಯು.ಜಿ.ಸಿ. ಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳು ನಡೆಸುವ ಪದವಿ/ ಸ್ನಾತಕೋತ್ತರ ಪದವಿ ಅಥವಾ ಯಾವುದೇ ತತ್ಸಮಾನ ವಿದ್ಯಾರ್ಹತೆಯ ಎಲ್ಲಾ ವರ್ಷಗಳಲ್ಲಿ / ಸೆಮಿಸ್ಟರ್‍ಗಳಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಪ್ರವರ್ಗ-1 ಮತ್ತು ವಿಕಲಚೇತನ ಅಭ್ಯರ್ಥಿಗಳು ಆಂತರಿಕ ಅಂಕಗಳು ಸೇರಿ ಸರಾಸರಿ ಕನಿಷ್ಠ ಶೇ. 45 ಅಂಕಗಳನ್ನು ಮತ್ತು ಇತರೆ ಅಭ್ಯರ್ಥಿಗಳು ಆಂತರಿಕ ಅಂಕಗಳು ಸೇರಿ ಸರಾಸರಿ ಕನಿಷ್ಠ ಶೇ. 50 ಅಂಕಗಳನ್ನು ಗಳಿಸಿರಬೇಕು.

ಇಂಜಿನಿಯರಿಂಗ್ ಪದವೀದರರು ಪದವಿಯಲ್ಲಿ ಗಣಿತ ಮತ್ತು ವಿಜ್ಞಾನವನ್ನು ಐಚ್ಚಿಕ ವಿಷಯವನ್ನಾಗಿ ವ್ಯಾಸಂಗ ಮಾಡಿ ಕನಿಷ್ಠ ಶೇ.55% ಅಂಕಗಳನ್ನು ಪಡೆದಿರಬೇಕು.

ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು ವೆಬ್‍ಸೈಟ್ "ONLINE APPLICATION FOR ADMISSION TO TWO YEAR B.Ed. COURSE FOR THE YEAR 2017-18" ಎಂಬುದನ್ನು ಕ್ಲಿಕ್ ಮಾಡಿದಾಗ ಭಿತ್ತರಿಸಲಾಗುವ "WEB HOME PAGE" ನಲ್ಲಿ "NEW REGISTRATION " ನ್ನು ಕ್ಲಿಕ್ ಮಾಡಿ, ಮಾಹಿತಿ ತುಂಬಿ LOGIN ಮಾಡಿ, ನಂತರ MY APPLICATION ತೆರೆದುಕೊಳ್ಳುವುದು.

ಅಭ್ಯರ್ಥಿಗಳು "ONLINE" ಮೂಲಕ ಅರ್ಜಿಗಳನ್ನು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಭರ್ತಿ ಮಾಡತಕ್ಕದ್ದು. ಕೊನೆಯ ದಿನಾಂಕದವರೆಗೆ ಕಾಯದೇ ಮುಂಚಿತವಾಗಿ ಅರ್ಜಿಗಳನ್ನು ಭರ್ತಿ ಮಾಡುವುದು.

"ONLINE" ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕೇ ಹೊರತು ಬೇರೆ ಯಾವುದೇ ರೀತಿಯಲ್ಲಿ ಅರ್ಜಿ ಸಲ್ಲಿಸುವುದನ್ನು ನಿಷೇಧಿಸಲಾಗಿದೆ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ದಿನಾಂಕಗಳು

  • "ONLINE" ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 20-11-2017 ರಾತ್ರಿ 12.00 ಘಂಟೆಯವರೆವಿಗೆ.
  • "ONLINE" ಅರ್ಜಿಗಳನ್ನು ಸಲ್ಲಿಸಲು ಪೂರ್ವ ಮುದ್ರಿತ ಚಲನ್‍ನಲ್ಲಿ ಎಸ್.ಬಿ.ಐ. ಬ್ಯಾಂಕ್‍ನ ಯಾವುದೇ ಶಾಖೆಯಲ್ಲಿ ಪಾವತಿಸಲು ಕೊನೆಯ ದಿನಾಂಕ 22-11-2017 ಅಪರಾಹ್ನ 02-30 ಘಂಟೆಯವರೆವಿಗೆ.

ಅರ್ಜಿ ಶುಲ್ಕ

1 ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗ, ಪ್ರವರ್ಗ-1 ರೂ. 120-00/-
2 ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಿದೆ.
3 ಇತರೆ ಅಭ್ಯರ್ಥಿಗಳು ರೂ.320-00/-

ಅಭ್ಯರ್ಥಿಗಳಿಂದ ಸ್ವೀಕೃತಿಯಾದ ಎಲ್ಲಾ ಆನ್‍ಲೈನ್ ಅರ್ಜಿಗಳನ್ನು ವಿಶೇಷಾಧಿಕಾರಿಗಳ ಕಛೇರಿಯಲ್ಲಿ ಪರಿಶೀಲಿಸಲಾಗುವುದು. ಅಭ್ಯರ್ಥಿಗಳು ಅರ್ಜಿಗಳಲ್ಲಿ ನೀಡಿರುವ ಮಾಹಿತಿಯ ಆಧಾರದ ಮೇಲೆ ಮೆರಿಟ್ ಮತ್ತು ಮೀಸಲಾತಿ ಮತ್ತು ಆದ್ಯತೆಯ ಅನ್ವಯ ಸಂಸ್ಥೆ ಹಂಚಿಕೆ ಸಹಿತ ಆಯ್ಕೆ ಪಟ್ಟಿ, ಅರ್ಹತಾ ಪಟ್ಟಿ ಮತ್ತು ತಿರಸ್ಕøತ ಪಟ್ಟಿ ಹಾಗೂ ಅಭ್ಯರ್ಥಿಗಳ ರ್ಯಾಂಕ್ ಪಟ್ಟಿಗಳನ್ನು ನಿಗದಿತ ದಿನಾಂಕದಂದು ಎಲ್ಲಾ ವ್ಯವಸ್ಥಾಪಕ ಕೇಂದ್ರಗಳಲ್ಲಿ ಹಾಗೂ ಇಲಾಖಾ ವೆಬ್‍ಸೈಟ್ www.schooleducation.kar.nic.in ರಲ್ಲಿ ಪ್ರಕಟಿಸಲಾಗುವುದು.

For Quick Alerts
ALLOW NOTIFICATIONS  
For Daily Alerts

English summary
Online Application Form for Two Years B.Ed Course Admissions for the year 2017-18. Date for submission of online Applications 31th October 2017 to 20th November 2017, Last date for paying the fee at bank 22nd November 2017
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X