ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ: ಸ್ನಾತಕೋತ್ತರ ಅಧ್ಯಯನಕ್ಕೆ ಪ್ರವೇಶಾತಿ

Posted By:

ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸುಗಳಿಗಾಗಿ 2017-18 ನೇ ಶೈಕ್ಷಣಿಕ ಸಾಲಿಗಾಗಿ ಪ್ರವೇಶಾತಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸ್ನಾತಕೋತ್ತರ ಕೇಂದ್ರ ವಿಜಯಪುರ ಮತ್ತು ಬಾಗಲಕೋಟೆ ಹಾಗೂ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸಂಯೋಜಿತ ಮಹಾವಿದ್ಯಾಲಯಗಳು ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ವಿವಿಧ ಸ್ನಾತಕೋತ್ತರ ಅಧ್ಯಯನ ವಿಭಾಗಗಳು ಇದರಲ್ಲಿ ಸೇರಿವೆ.

ಬೆಳಗಾವಿ ವಿಶ್ವವಿದ್ಯಾಲಯ ಪ್ರವೇಶಾತಿ

ಅರ್ಜಿ ಸಲ್ಲಿಕೆ

ಪ್ರವೇಶಾತಿ ಅಧಿಸೂಚನೆ ಹಾಗೂ ಪ್ರವೇಶಾತಿ ಅರ್ಜಿಗಳನ್ನು ವಿಶ್ವವಿದ್ಯಾಲಯದ ವೆಬ್ಸೈಟ್ ನಲ್ಲಿ ಪಡೆಯಬಹುದಾಗಿದ್ದು, ಡೌನ್ಲೋಡ್ ಮಾಡಿದ ಅರ್ಜಿಯನ್ನು ಭರ್ತಿ ಮಾಡಿ ಎಲ್ಲಾ ಶೈಕ್ಷಣಿಕ ದಾಖಲೆಗಳೊಂದಿಗೆ ಸಂಬಂಧಿಸಿದ ಅಧ್ಯಯನ ವಿಭಾಗಗಳಲ್ಲಿ ಕೊನೆಯ ದಿನಾಂಕದಂದು ಖುದ್ಧಾಗಿ ಬಂದು ಸಲ್ಲಿಸತಕ್ಕದ್ದು.

ಪ್ರಮುಖ ದಿನಾಂಕಗಳು
ದಂಡ ರಹಿತವಾಗಿ ಭರ್ತಿ ಮಾಡಿದ ಪ್ರವೇಶಾತಿ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 10-07-2017
ದಂಡ ಶುಲ್ಕದೊಂದಿಗೆ ಭರ್ತಿ ಮಾಡಿದ ಪ್ರವೇಶಾತಿ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 12-07-2017
ಪ್ರವೇಶ ಪರೀಕ್ಷೆ (ಸಮಾಜಕಾರ್ಯ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ): 14-07-2017 (ಒಂದು ವೇಳೆ ಪರೀಕ್ಷೆ ನಡೆಸಲು ನಿರ್ಧರಿಸಿದಲ್ಲಿ)
ಮೆರಿಟ್ ಲಿಸ್ಟ್ ಪ್ರಕಟಿಸುವ ದಿನಾಂಕ: 15-07-2017
ಮೆರಿಟ್ ಯಾದಿಯ ಆಕ್ಷೇಪಣೆಗಳನ್ನು ಸಲ್ಲಿಸುವ ಕೊನೆಯ ದಿನಾಂಕ:18-07-2017
ಅಂತಿಮ ಮೆರಿಟ್ ಲಿಸ್ಟ್ ಪ್ರಕಟಿಸವ ದಿನಾಂಕ: 19-07-2017
ಕೌನ್ಸಲಿಂಗ್ ಪ್ರಾರಂಭವಾಗುವ ದಿನಾಂಕ: 21-07-2017

ಅರ್ಹತೆ

  • ಸಂಬಂಧಪಟ್ಟ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಶೇ.45 ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿರಬೇಕು. (ಎಸ್.ಸಿ/ಎಸ್.ಟಿ/ಪ್ರ-1 ಅಭ್ಯರ್ಥಿಗಳಿಗೆ ಶೇ.40)
  • ಅಂತಿಮ ವರ್ಷದಲ್ಲಿ ವ್ಯಾಸಂಗ ನಡೆಸುತ್ತಿದ್ದು, ಫಲಿತಾಂಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ rcub.ac.in ಗಮನಿಸಿ

English summary
Belagavi Rani Chennamma University invites application to the post graduation courses for the academic year 2017-18.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia