ಬೈಸೆಪ್: 2017-18ನೇ ಸಾಲಿನ ಪ್ರವೇಶಾತಿ ಪ್ರಾರಂಭ

ಬೈಸೆಪ್ ಮೂಲಕ ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಉದ್ಯೋಗ-ಸನ್ನದ್ಧರಾದ ಮಾನವ ಸಂಪನ್ಮೂಲವನ್ನು ಒದವಗಿಸುವ ವೃತ್ತಿಪರವಾದ ಒಂದು ವರ್ಷ ಅವಧಿಯ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಇದಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಎಲ್ಎಸ್ಎಸ್‌ಡಿಸಿ, ಸಿಎಸ್ಐರ್-ಐಐಸಿಟಿ ಮತ್ತು ಎಬಿಎಲ್ಇ ಸಹಭಾಗಿತ್ವದ ಬೈಸೆಪ್ ನ ಬಯೋಟೆಕ್ ವೃತ್ತಿಪರ ಕೋರ್ಸ್ ಪ್ರವೇಶಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

2018ರ ಗಣರಾಜ್ಯೋತ್ಸವಕ್ಕೆ ಭಾಷಣದ ಸಿದ್ಧತೆ ಹೀಗಿರಲಿ2018ರ ಗಣರಾಜ್ಯೋತ್ಸವಕ್ಕೆ ಭಾಷಣದ ಸಿದ್ಧತೆ ಹೀಗಿರಲಿ

ಬೈಸೆಪ್ ಮೂಲಕ ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಉದ್ಯೋಗ-ಸನ್ನದ್ಧರಾದ ಮಾನವ ಸಂಪನ್ಮೂಲವನ್ನು ಒದವಗಿಸುವ ವೃತ್ತಿಪರವಾದ ಒಂದು ವರ್ಷ ಅವಧಿಯ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಇದಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಭಾರತೀಯ ನೌಕಾಪಡೆಯಲ್ಲಿ 38 ಹುದ್ದೆಗಳ ನೇಮಕಾತಿಭಾರತೀಯ ನೌಕಾಪಡೆಯಲ್ಲಿ 38 ಹುದ್ದೆಗಳ ನೇಮಕಾತಿ

ಬೈಸೆಪ್ ಪ್ರವೇಶಾತಿ ಪ್ರಾರಂಭ

ಕೋರ್ಸುಗಳು

ಬಯೋಇನ್ಫರ್ಮ್ಯಾಟಿಕ್ಸ್ ಮತ್ತು ಬಿಗ್ ಡೇಟಾ ಅನಾಲಿಟಿಕ್ಸ್, ಬಯೋಫಾರ್ಮಾಸ್ಯುಟಿಕಲ್ ಟೆಕ್ನಾಲಜಿ, ಸೆಲ್ಯುಲಾರ್ ಮತ್ತು ಮಾಲಿಕ್ಯುಲಾರ್ ಡಯಾಗ್ನಸ್ಟಿಕ್ಸ್ ಕ್ಲಿನಿಕಲ್ ರಿಸರ್ಚ್ ಹಾಗೂ ಡೇಟಾ ಮ್ಯಾನೇಜ್ಮೆಂಟ್, ಫರ್ಮೆಂಟೇಷನ್ ಮತ್ತು ಬಯೋಪ್ರೋಸೆಸಿಂಗ್, ಮಲ್ಟಿ-ಓಮಿಕ್ಸ್ ಟೆಕ್ನಾಲಜಿ, ನ್ಯೂಟ್ರಾಸ್ಯುಟಿಕಲ್ ಮತ್ತು ಆಹಾರ ಸಂಸ್ಕರಣೆ ಪ್ಲಾಂಟ್ ಜಿನೆಟಿಕ್ ಇಂಜಿನಿಯರಿಂಗ್ ಮತ್ತು ಪ್ರೊಟೀನ್ ಎಕ್ಸ್‌ಪ್ರೆಷನ್ ಹಾಗೂ ಸ್ಕೇಲ್-ಅಪ್

ಕೋರ್ಸ್ ಅವಧಿ

ಒಂದು ವರ್ಷ (ಆರು ತಿಂಗಳು ಶೈಕ್ಷಣಿಕ ತರಬೇತಿ ಹಾಗೂ ಆರು ತಿಂಗಳು ಕ್ಷೇತ್ರದಲ್ಲಿ ಆಂತರಿಕ ತರಬೇತಿ)

ಫಲೋಷಿಪ್

ತಿಂಗಳಿಗೆ ರೂ.10000/- ಗಳ ಫೆಲೋಷಿಪ್ ನೀಡಲಾಗುವುದು.

ಶೈಕ್ಷಣಿಕ ಅರ್ಹತೆ

ಬಯೋಟೆಕ್/ಮೈಕ್ರೋಬಯಾಲಜಿ/ಬಯೋಕೆಮಿಸ್ಟ್ರಿ/ಬಯೋಇನ್ಫರ್ಮ್ಯಾಟಿಕ್ಸ್ ಅಥವಾ ಇನ್ಯಾವುದೇ ಜೀವ ವಿಜ್ಞಾನಗಳಿಗೆ ಸಂಬಂಧಿಸಿದ ಕೋರ್ಸುಗಳಲ್ಲಿ ಎಂ.ಎಸ್ಸಿ.ಪದವಿ ಅಥವಾ ಬಿ.ಇ/ಬಿ.ಟೆಕ್ (ಬಯೋಟೆಕ್/ಬಯೋಇನ್ಫರ್ಮ್ಯಾಟಿಕ್ಸ್) ಅಥವಾ ಬಿ.ಫಾರ್ಮ/ಬಿ.ಎಸ್ಸಿ (ಕೃಷಿ)/ ಬಿ.ವಿ.ಎಸ್ಸಿ ಅಥವಾ ಜೀವ ವಿಜ್ಞಾನ ಮತ್ತು ವಿಷಯಗಳುಳ್ಳ ಇನ್ಯಾವುದೇ ನಾಲ್ಕು ವರ್ಷಗಳ ಪದವಿ ಕೋರ್ಸ್ ಜೊತೆಗೆ ತೇರ್ಗಡೆ ಹೊಂದುವ ಪದವಿ ಪರೀಕ್ಷೆಯಲ್ಲಿ ಕನಿಷ್ಠ ಶೇ.೫೦ ಅಂಕಗಳೊಂದಿಗೆ (ಎಸ್ಸಿ/ಎಸ್ಟಿ ವರ್ಗಗಳ ವಿದ್ಯಾರ್ಥಿಗಳಿಗೆ ಕನಿಷ್ಠ ಶೇ.೪೦ ಅಂಕ ಅನ್ವಯ)

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಆನ್-ಲೈನ್ ಮೂಲಕ ಸಲ್ಲಿಸಲು ಅವಕಾಶವಿರುತ್ತದೆ.

ಆಯ್ಕೆ

ಆನ್-ಲೈನ್ ಪ್ರವೇಶ ಪರೀಕ್ಷೆ ಮೂಲಕ ಕರ್ನಾಟಕ ಬಯೋಟೆಕ್ನಾಲಜಿ ಯೋಗ್ಯತಾ ಪರೀಕ್ಷೆ (ಕೆ-ಬ್ಯಾಟ್) ಮತ್ತು ಆಪ್ತ ಸಮಾಲೋಚನೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೈಸೆಪ್-ಬಯೋಟೆಕ್ನಾಲಜಿ ಸ್ಕಿಲ್ ಎನ್ಹಾನ್ಸ್ಮೆಂಟ್ ಪ್ರೊಗ್ರಾಂ

ಜೈವಿಕ ಉದ್ಯಮ ಹಾಗೂ ಶಿಕ್ಷಣ ಕ್ಷೇತ್ರಗಳ ನಡುವೆ ಇರುವ ಕಂದರಕ್ಕೆ ಸೇತುವಾಗಲು ಮಾನವ ಸಂಪನ್ಮೂಲಕ್ಕೆ ಶಿಕ್ಷಣ ಒದಗಿಸಿ ಸಶಕ್ತರನ್ನಾಗಿಸುವುದನ್ನು ಮುಂದುವರಿಸುವ ಗುರಿ ಹೊಂದಿದೆ. ಇದೊಂದು ಭಾರತದ ವಿಶಿಷ್ಟ ಉಪಕ್ರಮವಾಗಿದ್ದು, ಕರ್ನಾಟಕ ರಾಜ್ಯದ ಎಂಟು ಜಿಲ್ಲೆಗಳಲ್ಲಿರುವ ಹದಿನೆಂಟು ಪ್ರತಿಷ್ಠಿತ ಸ್ನಾತಕೋತ್ತರ ಶಿಕ್ಷಣ ಸಂಸ್ಥೆಗಳಲ್ಲಿ ಒಂಬತ್ತು ಬಯೋಟೆಕ್ ವಲಯಗಳನ್ನು ಒಳಗೊಳ್ಳುತ್ತದೆ.

For Quick Alerts
ALLOW NOTIFICATIONS  
For Daily Alerts

English summary
KBITS, a registered society under the Department of Information Technology and Biotechnology is facilitating and promoting the IT and BT sectors in the State by organizing as well as participating in Trade shows, Conferences, Symposia, Seminars held at National and International levels etc. invites applications to admission for 2018 batch.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X