ವಿಶ್ವ ಪರಿಸರ ದಿನ 2020: ಪರಿಸರ ವಿಜ್ಞಾನ ಕೋರ್ಸ್ ಮಾಡಿ ಕೈ ತುಂಬಾ ಸಂಪಾದನೆ ಮಾಡಬಹುದು!

ಇಂದು ವಿಶ್ವ ಪರಿಸರ ದಿನ. ಇನ್ನು ಜೂನ್ ತಿಂಗಳು ಪ್ರಾರಂಭವಾದರೆ ಸಾಕು ಎಲ್ಲಾ ಕಡೆ ಪರಿಸರ ದಿನಾಚರಣೆಯ ಆಚರಣೆ ಕಾಣಸಿಗುತ್ತದೆ

By Kavya

ಇಂದು ವಿಶ್ವ ಪರಿಸರ ದಿನ. ಇನ್ನು ಜೂನ್ ತಿಂಗಳು ಪ್ರಾರಂಭವಾದರೆ ಸಾಕು ಎಲ್ಲಾ ಕಡೆ ಪರಿಸರ ದಿನಾಚರಣೆಯ ಆಚರಣೆ ಕಾಣಸಿಗುತ್ತದೆ. ಶಾಲೆಗಳಲ್ಲಿ ವನಮಹೋತ್ಸವ ಆಚರಿಸುವ ಮೂಲಕ ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಆದ್ರೆ ಈ ಆಚರಣೆ ಬರೀ ಒಂದು ದಿನಕ್ಕೆ ಮಾತ್ರ ಸ್ಥೀಮಿತವಾಗಬಾರದು. ಇಂದು ನೆಟ್ಟ ಗಿಡಕ್ಕೆ ಪ್ರತಿದಿನ ನೀರು, ಗೊಬ್ಬರ ಹಾಕಿ ಬೆಳೆಸುವುದು ಪ್ರತಿಯೊಬ್ಬ ಗಿಡ ನೆಟ್ಟವನ ಕರ್ತವ್ಯ ಇನ್ನು ಪರಿಸರದ ಬಗ್ಗೆ ನಿಮಗೆ ಆಳವಾಗಿ ಅಧ್ಯಯನ ಮಾಡಬೇಕೆಂದರೆ ನೀವು ಪರಿಸರ ವಿಜ್ಞಾನದ ಕೋರ್ಸ್ ಮಾಡುವುದು ಬೆಸ್ಟ್.

ವಿಶ್ವ ಪರಿಸರ ದಿನ... ಪರಿಸರ ವಿಜ್ಞಾನ ಕೋರ್ಸ್ ಮಾಡಿ ಕೈ ತುಂಬಾ ಸಂಪಾದನೆ ಮಾಡಬಹುದು!

ಮಳೆಕಾಡಿನಲ್ಲಿ ಇರುವ ಎಲ್ಲಾ ಮರಗಳನ್ನ ಕಡಿದ್ರೆ ಏನಾಗುತ್ತದೆ... ನದಿ, ಸರೋವರಕ್ಕೆ ಅಪಾಯಕಾರಿ ರಾಸಾಯನಿಕ ಸೇರಿದರೆ ಏನಾಗುತ್ತದೆ ಮುಂತಾದ ಪ್ರಶ್ನೆಗಳಿಗೆ ನಿಮಗೆ ಪರಿಸರ ವಿಜ್ಞಾನದಲ್ಲಿ ಉತ್ತರ ಸಿಗುತ್ತದೆ.

ಪರಿಸರ ವಿಜ್ಞಾನ ಕೋರ್ಸ್ ಪರಿಸರ ಇಂಜಿನೀಯರಿಂಗ್ ಎಂದು ಕೂಡಾ ಫೇಮಸ್. ಈ ಕೋರ್ಸ್ ಮಾಡಲು ಏನೆಲ್ಲಾ ಅರ್ಹತೆಗಳು ಇರಬೇಕು, ಯಾವ ಯಾವ ಕಾಲೇಜಿನಲ್ಲಿ ಈ ಕೋರ್ಸ್ ಲಭ್ಯವಿದೆ ಅಷ್ಟೇ ಅಲ್ಲ ಈ ಕೋರ್ಸ್ ನಲ್ಲಿ ಕೆರಿಯರ್ ಅವಕಾಶ ಹೇಗಿದೆ ಎಂದೆಲ್ಲಾ ಮಾಹಿತಿ ಇಲ್ಲಿದೆ ಮುಂದಕ್ಕೆ ಓದಿ.

ಕೆರಿಯರ್ ಸ್ಕೋಪ್:

ಖಾಸಾಗಿ ಹಾಗೂ ಸರ್ಕಾರಿ ವಿಭಾಗಗಳಲ್ಲಿ ಪರಿಸರ ವಿಜ್ಞಾನ ವಿಷಯದಲ್ಲಿ ಪದವಿ ಪಡೆದವರಿಗೆ ತುಂಬಾ ಉದ್ಯೋಗವಕಾಶವಿದೆ. ಈ ಕೋರ್ಸ್ ಮಾಡಿದವರು ಸರ್ಕಾರಿ ಸಂಸ್ಥೆಗಳಲ್ಲಿ ರಿಸರ್ಚ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಇನ್ನು ಪರಿಸರ ವಿಜ್ಞಾನದಲ್ಲಿ ಎಂಎಸ್ಸಿ ಪದವಿ ಪಡೆದ ಅಭ್ಯರ್ಥಿಗಳಿಗೆ ಭಾರತ ಮಾತ್ರವಲ್ಲದೇ ಹೊರದೇಶದಲ್ಲೂ ವಿಫುಲ ಉದ್ಯೋಗವಕಾಶವಿದೆ.

ಕೋರ್ಸ್ ಗಳು:

ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ, ಪಿಹೆಚ್ ಡಿ ಸೇರಿದಂತೆ ಹಲವಾರು ಸರ್ಟಿಫಿಕೇಟ್‌ಗಳು ಈ ಕೋರ್ಸ್ ನಿಂದ ನಿಮಗೆ ಸಿಗಲಿದೆ. ಪರಿಸರ ವಿಜ್ಞಾನದಲ್ಲಿ ಯುಜಿ ಕೋರ್ಸ್ ಮಾಡಬೇಕೆಂದಾದರೆ, ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ 12ನೇ ತರಗತಿ ಪಾಸಾಗಿರಬೇಕು. ಇನ್ನು ಪಿಜಿ ಕೋರ್ಸ್ ಮಾಡಬೇಕೆಂದಿದ್ದರೆ, ವಿದ್ಯಾರ್ಥಿಗಳು ಸೇಮ್ ಫೀಲ್ಡ್‌ನಲ್ಲಿ ಪದವಿ ಪಡೆದಿರಬೇಕು.

ಸರ್ಟಿಫಿಕೇಟ್ ಕೋರ್ಸ್ ಗಳು:

  • ಸರ್ಟಿಫಿಕೇಟ್ ಇನ್ ಎನ್‌ವಿರನ್ಮೆಂಟಲ್ ಸೈನ್ಸ್ (ಸಿಇಎಸ್)
  • ಸರ್ಟಿಫಿಕೇಟ್ ಕೋರ್ಸಸ್ ಇನ್ ಎನ್‌ವಿರನ್ಮೆಂಟಲ್ ಸೈನ್ಸ್

ಡಿಪ್ಲೋಮಾ ಕೋರ್ಸ್ ಗಳು:

  • ಡಿಪ್ಲೋಮಾ ಇನ್ ಎನ್‌ವಿರನ್ಮೆಂಟಲ್ ಸೈನ್ಸ್
  • ಡಿಪ್ಲೋಮಾ ಇನ್ ಎನ್‌ವಿರನ್ಮೆಂಟಲ್ ಲಾ
  • ಡಿಪ್ಲೋಮಾ ಇನ್ ಎನ್‌ವಿರನ್ಮೆಂಟಲ್ ಪ್ರೊಟೆಕ್ಷನ್

ಪದವಿ ಕೋರ್ಸ್ ಗಳು:

  • ಬ್ಯಾಚುಲರ್ ಆಫ್ ಸೈನ್ಸ್ ಇನ್ ಎನ್‌ವಿರನ್ಮೆಂಟಲ್ ಸೈನ್ಸ್
  • ಬ್ಯಾಚುಲರ್ ಆಫ್ ಎನ್‌ವಿರನ್ಮೆಂಟಲ್ ಮ್ಯಾನೇಜ್‌ಮೆಂಟ್
  • ಬ್ಯಾಚುಲರ್ ಆಫ್ ಸೈನ್ಸ್ ಇನ್ ಎನ್‌ವಿರನ್ಮೆಂಟಲ್ ಸೈನ್ಸ್ ಮತ್ತು ವಾಟರ್ ಮ್ಯಾನೇಜ್‌ಮೆಂಟ್

ಮಾಸ್ಟರ್ ಕೋರ್ಸಸ್:

  • ಮಾಸ್ಟರ್ ಆಫ್ ಫಿಲೋಸಫಿ ಇನ್ ಎನ್‌ವಿರನ್ಮೆಂಟಲ್ ಸೈನ್ಸ್
  • ಸ್ನಾತಕೋತ್ತರ ಪದವಿ ಇನ್ ಎನ್‌ವಿರನ್ಮೆಂಟ್
  • ಮಾಸ್ಟರ್ ಆಫ್ ಸೈನ್ಸ್ ಇನ್ ಎನ್‌ವಿರನ್ಮೆಂಟಲ್ ಸೈನ್ಸ್

ಪಿಹೆಡ್ ಡಿ ಕೋರ್ಸ್ ಗಳು:

  • ಡಾಕ್ಟರ್ ಆಫ್ ಫಿಲೋಸಫಿ ಇನ್ ಎನ್‌ವಿರನ್ಮೆಂಟಲ್ ಸೈನ್ಸ್
  • ಡಾಕ್ಟರ್ ಆಫ್ ಫಿಲೋಸಫಿ ಇನ್ ಅರ್ಥ್ ಸೈನ್ಸ್

ಪ್ರವೇಶ ಮತ್ತು ಅರ್ಹತೆ:

  • ಪದವಿ ಕೋರ್ಸ್ ಗೆ ಪ್ರವೇಶ ಪಡೆಯಬೇಕೆಂದಿದ್ದರೆ, ವಿದ್ಯಾರ್ಥಿಗಳು ಬಯಾಲಾಜಿ, ಮ್ಯಾಥಮ್ಯಾಟಿಕ್ಸ್ ಹಾಗೂ ಕೆಮೆಸ್ಟ್ರಿ ಕಾಂಬಿನೇಶನ್‌ನ ವಿಜ್ಞಾನ ವಿಭಾಗದಲ್ಲಿ 12ನೇ ತರಗತಿ ಪಾಸಾಗಿರಬೇಕು.
  • ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಬೇಕೆಂದಿದ್ದರೆ, ವಿಜ್ಞಾನ ವಿಭಾಗದಲ್ಲಿ ಸಂಬಂಧಪಟ್ಟ ಸಬ್‌ಜೆಕ್ಟ್ ನಲ್ಲಿ ಪದವಿ ಪಡೆದಿರಬೇಕು

ಪರಿಸರ ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಕೋರ್ಸ್ ಗಳನ್ನ ನೀಡುವ ಪ್ರತಿಷ್ಟಿತ ಕಾಲೇಜುಗಳು:

  • ಯೂನಿವರ್ಸಿಟಿ ಆಫ್ ದೆಹಲಿ, ದೆಹಲಿ
  • ಅಲಿಘರ್ ಮುಸ್ಲಿಂ ಯೂನಿವರ್ಸಿಟಿ, ಜೌನ್ಪುರ್
  • ನ್ಯಾಷನಲ್ ಎನ್‌ವಿರನ್ಮೆಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್, ನಾಗ್‌ಪುರ್
  • ಅಮಿಟಿ ವಿಶ್ವವಿದ್ಯಾನಿಲಯ, ನೊಯಿಡಾ
  • ಫಾರೆಸ್ಟ್ ರಿಸರ್ಚ್ ಇನ್‌ಸ್ಟಿಟ್ಯೂಟ್, ಡೆಹ್ರಡೂನ್
  • ಜವಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲ, ದೆಹಲಿ

ಪರಿಸರ ವಿಜ್ಞಾನ ಕೋರ್ಸ್ ಮಾಡಿದ್ರೆ ಯಾವೆಲ್ಲಾ ಜಾಬ್ ನಿಮ್ಮದಾಗಿಸಿಕೊಳ್ಳಬಹುದು:

  • ಎನ್‌ವಿರನ್ಮೆಂಟಲ್ ಸೈಂಟಿಸ್ಟ್
  • ಎನ್‌ವಿರನ್ಮೆಂಟಲ್ ಕನ್ಸಲ್ಟೆಂಟ್
  • ಎನ್‌ವಿರನ್ಮೆಂಟಲ್ ಸೈನ್ಸ್ ಮ್ಯಾನೇಜರ್
  • ಲೆಕ್ಚರರ್
  • ವೈಲ್ಡ್‌ಲೈಫ್ ಫಿಲ್ಮ್ ಮೇಕರ್
  • ಎನ್‌ವಿರನ್ಮೆಂಟಲ್ ಫೋಟೋಗ್ರಾಫರ್
  • ಎನ್‌ವಿರನ್ಮೆಂಟ್ ಜರ್ನಲಿಸ್ಟ್
  • ಕಂಸರ್ರ್ವೇಶನ್ ಹೈಡ್ರಾಲಾಜಿಸ್ಟ್
  • ಡೈರೆಕ್ಟರ್ ಆಫ್ ವೇಸ್ಟ್ ಮ್ಯಾನೇಜ್‌ಮೆಂಟ್
For Quick Alerts
ALLOW NOTIFICATIONS  
For Daily Alerts

English summary
Environmental Science is a branch of science which studies the effects of physical, chemical and biological conditions of environment and their effect on organisms. Environmental Science is also deal with Ecology. Ecology is the study of how organisms interact with our environment.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X