ಕರ್ನಾಟಕ ಸಂಗೀತ ಡಿಪ್ಲೊಮಾ ಕೋರ್ಸ್ ಪ್ರವೇಶಾತಿ

Posted By:

ಚೆನ್ನೈನ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯು ಕರ್ನಾಟಕ ಸಂಗೀತ (ಗಾಯನ) ಡಿಪ್ಲೊಮಾ ಕೋರ್ಸ್‌ನ ಪ್ರಥಮ ವರ್ಷದ ತರಗತಿಗಳಿಗೆ ಪ್ರವೇಶ ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ.

ಮೂರು ವರ್ಷಗಳ ಈ ಕೋರ್ಸ್‌ಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರುವ ಹಾಗೂ 18ರಿಂದ 35 ವರ್ಷದೊಳಗಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ವರ್ಣಂ ಮತ್ತು ಕೃತಿ ಜತೆಗೆ ಮನೋಧರ್ಮ ಸಂಗೀತದ ಕನಿಷ್ಠ ಜ್ಞಾನವನ್ನು ಅಭ್ಯರ್ಥಿಗಳು ಹೊಂದಿರುವುದು ಅವಶ್ಯ.

ಕೋರ್ಸ್ ವಿವರ

ಈ ಕೋರ್ಸ್‌ನಲ್ಲಿ ಪ್ರತಿ ವರ್ಷ ಎರಡು ಸೆಮಿಸ್ಟರ್‌ಗಳಿರುತ್ತವೆ. ಮೊದಲ ಸೆಮಿಸ್ಟರ್ ಅವಧಿ ಜುಲೈನಿಂದ ನವೆಂಬರ್, ಎರಡನೇ ಸೆಮಿಸ್ಟರ್ ಅವಧಿ ಜನವರಿಯಿಂದ ಜೂನ್. ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 8ರಿಂದ ಮಧ್ಯಾಹ್ನ 12.30 ಗಂಟೆಯವರೆಗೆ ತರಗತಿಗಳಿರುತ್ತವೆ. ಜುಲೈ 19ರಿಂದ ತರಗತಿಗಳು ಆರಂಭವಾಗಲಿವೆ.10 ಅಭ್ಯರ್ಥಿಗಳನ್ನು ಮಾತ್ರ ಡಿಪ್ಲೊಮಾ ತರಗತಿಗೆ ಆಯ್ಕೆ ಮಾಡಲಾಗುವುದು.

ಸಂಗೀತ ಡಿಪ್ಲೊಮಾ ಕೋರ್ಸ್ ಪ್ರವೇಶಾತಿ

ಅಕಾಡೆಮಿಯ ನಿರ್ದೇಶಕಿ ಆರ್. ವೇದವಲ್ಲಿ, ಪ್ರೊ. ರೀಟಾ ರಾಜನ್ (ಸಂಯೋಜಕಿ), ಡಾ.ಆರ್‌.ಎಸ್‌. ಜಯಲಕ್ಷ್ಮಿ, ಪಿ.ಎಸ್.ನಾರಾಯಣ ಸ್ವಾಮಿ, ಸುಗುಣಾ ವರದಾಚಾರಿ, ನೇವೇಲಿ ಸಂತಾನಗೋಪಾಲನ್, ಎಸ್. ಸೌಮ್ಯಾ, ಶ್ಯಾಮಲಾ ವೆಂಕಟೇಶ್ವರನ್‌, ಶ್ರೀರಾಮ್‌ ಪರಶುರಾಮ್‌ ಅವರು ಸಂಗೀತ ಕಲಿಸಿಕೊಡುವರು.

ಅರ್ಜಿ ಸಲ್ಲಿಕೆ

ಸಂಗೀತ ಜ್ಞಾನ ಮತ್ತು ಅದರಲ್ಲಿ ಪಡೆದ ತರಬೇತಿ ಕುರಿತು ಸಮಗ್ರ ಮಾಹಿತಿಯನ್ನು ಒಳಗೊಂಡ ವ್ಯಕ್ತಿಗತ ವಿವರ (ಬಯೋಡಾಟಾ) ಮತ್ತು ಭರ್ತಿ ಮಾಡಿದ ಅರ್ಜಿಯನ್ನುಇ-ಮೇಲ್ ಮೂಲಕ ಮತ್ತು ಅಂಚೆ ಮೂಲಕ ತಲುಪಿಸಬಹುದಾಗಿದೆ.

ಇ-ಮೇಲ್ ವಿಳಾಸ: music@musicacademymadras.com, pappuvenu@gmail.com

ಅಂಚೆ ವಿಳಾಸ: 

ದಿ ಮ್ಯೂಸಿಕ್ ಅಕಾಡೆಮಿ,
ಮದ್ರಾಸ್, (ಹಳೆಯ ಸಂಖ್ಯೆ- 306), ಹೊಸ ಸಂಖ್ಯೆ 168,
ಟಿ.ಟಿ.ಕೆ. ರಸ್ತೆ, ರಾಯ್‌ಪೇಟಾ,
ಚೆನ್ನೈ 600 014.

ಅರ್ಜಿ ಸಲ್ಲಿಸಲು ಜೂನ್ 30, 2017 ಕೊನೆಯ ದಿನಾಂಕ.

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳ ವಿವರವನ್ನು ಪರಿಶೀಲಿಸಿ ಆಯ್ಕೆ ಮಾಡಿಕೊಳ್ಳಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಕರೆಯಲಾಗುತ್ತದೆ. ಅಕಾಡೆಮಿಯ ಆಯ್ಕೆ ಸಮಿತಿ ಸದಸ್ಯರು ಅಭ್ಯರ್ಥಿಗಳ ಸಂದರ್ಶನ ನಡೆಸಲಿದ್ದಾರೆ.

ಹೆಚ್ಚಿನ ವಿವರಗಳಿಗೆ 

  • ದೂರವಾಣಿ ಸಂಖ್ಯೆ: 044- 2811 2231/2811 5162
  • ಇಮೇಲ್‌- music@musicacademymadras.com, pappuvenu@gmail.com

ಮದ್ರಾಸ್ ಮ್ಯೂಸಿಕ್ ಅಕಾಡೆಮಿ

ಮದ್ರಾಸ್ ಮ್ಯೂಸಿಕ್ ಅಕಾಡೆಮಿಯು ಭಾರತದ ಪ್ರಧಾನ ಸಂಗೀತ ಸಂಘಟನೆಯಾಗಿದ್ದು, ಸಂಗೀತ ಮತ್ತು ನೃತ್ಯದ ಶಾಸ್ತ್ರೀಯ ಲಲಿತಕಲೆಗಳನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. 88 ವರ್ಷಗಳ ಇತಿಹಾಸವಿರುವ ಈ ಸಂಸ್ಥೆಯು 1928 ರಲ್ಲಿ ಸ್ಥಾಪನೆಯಾಯಿತು. ಸಂಗೀತದ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ಉನ್ನತ ಮಟ್ಟದ ಶ್ರೇಷ್ಠತೆಯನ್ನು ಕಾಯ್ದುಕೊಳ್ಳಲು ಶ್ರಮಿಸುತ್ತಿದೆ.

English summary
Admission opens for carnatic music diploma in the music academy chennai, june 30 is the last date to submit applications.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia