CUK UG Admission 2022 : ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯ ; ಸಿಯುಇಟಿ ಮೂಲಕ ಯುಜಿ ಪ್ರವೇಶಾತಿ ಶೀಘ್ರದಲ್ಲೇ ಆರಂಭ

CUK UG ಪ್ರವೇಶ 2022 : ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯವು ಈಗ ಸಾಮಾನ್ಯ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆ (CUET) ಅಂಕಗಳನ್ನು ಬಳಸಿಕೊಂಡು ಶೀಘ್ರದಲ್ಲೇ ಪದವಿಪೂರ್ವ ಕಾರ್ಯಕ್ರಮಗಳಿಗೆ ಪ್ರವೇಶ ಪ್ರಕ್ರಿಯೆಯನ್ನು ಪ್ರಾರಂಭಿಸಲಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನೊಂದಾಯಿಸಿಕೊಂಡು ನಂತರ ಪ್ರವೇಶ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು.

CUET UG 2022 ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಮತ್ತು ಮುಂದೆ ಪ್ರವೇಶಾತಿ ಪಡೆಯಲು ಸಿದ್ಧರಿರುವ ಅಭ್ಯರ್ಥಿಗಳು SAMARTH ಪ್ರವೇಶ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. CUK-SAMARTH ಪೋರ್ಟಲ್ ನ ಲಿಂಕ್ CUK ವೆಬ್‌ಸೈಟ್‌ cuk.ac.in. ನಲ್ಲಿ ಶೀಘ್ರದಲ್ಲೇ ಸಕ್ರಿಯವಾಗಿರುತ್ತದೆ.

 ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯ : ಸಿಯುಇಟಿ 2022 ಮೂಲಕ ಯುಜಿ ಪ್ರವೇಶಾತಿ ಶೀಘ್ರದಲ್ಲೇ ಆರಂಭ

ಅರ್ಜಿ ಶುಲ್ಕಗಳ ವಿವರ :

ಸಾಮಾನ್ಯ, ಇತರೆ ಹಿಂದುಳಿದ ಜಾತಿ (OBC) ಮತ್ತು ಆರ್ಥಿಕವಾಗಿ ದುರ್ಬಲ ವರ್ಗ (EWS) ವರ್ಗದ ಅಭ್ಯರ್ಥಿಗಳು 500/- ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮಹಿಳಾ ವರ್ಗದ ಅಭ್ಯರ್ಥಿಗಳು ರೂ 250/-ರೂ ಪಾವತಿಸಬೇಕಿರುತ್ತದೆ. ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಅಂಗವಿಕಲ ವ್ಯಕ್ತಿ (PwD) ವರ್ಗದ ಅಭ್ಯರ್ಥಿಗಳು ಅರ್ಜಿ 100/-ರೂಗಳನ್ನು ಪಾವತಿಸಬೇಕಾಗುತ್ತದೆ.

ಅಧಿಕೃತ ಅಧಿಸೂಚನೆಯಲ್ಲಿ ವಿಶ್ವವಿದ್ಯಾನಿಲಯವು, "ನಿಗದಿತ ನೋಂದಣಿ ಶುಲ್ಕದೊಂದಿಗೆ ಅರ್ಜಿಗಳನ್ನು ಸ್ವೀಕರಿಸಿದ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾಗುತ್ತದೆ. ಪ್ರಕಟಿತ ಮೆರಿಟ್ ಪಟ್ಟಿಯ ಅನುಸಾರ ಮಾತ್ರ ಪ್ರವೇಶ ಪ್ರಕ್ರಿಯೆ ನಡೆಯಲಿದೆ. ಅಭ್ಯರ್ಥಿಗಳಿಗೆ ಅರ್ಹತೆ ಮತ್ತು ರೋಸ್ಟರ್ ಆಧಾರದ ಮೇಲೆ ಪ್ರವೇಶಾತಿ ನೀಡಲಾಗುವುದು. ಘೋಷಿತ ಮೆರಿಟ್ ಪಟ್ಟಿ ಅಂತ್ಯಗೊಳ್ಳುವವರೆಗೆ ರೋಸ್ಟರ್ ಅನುಸರಿಸಿ ಅರ್ಹತೆಯ ಆಧಾರದ ಮೇಲೆ ಅಗತ್ಯವಿರುವ ಸೀಟುಗಳನ್ನು ಭರ್ತಿ ಮಾಡುವವರೆಗೆ ಪ್ರವೇಶಗಳನ್ನು ಪರಿಶೋಧಿಸಲಾಗುವುದು.

ಸಿಯುಕೆ ಯುಜಿ ಕೋರ್ಸ್‌ಗಳು :

ಸಿಯುಕೆ ಆರು UG ಕೋರ್ಸ್‌ಗಳನ್ನು ನೀಡುತ್ತಿದ್ದು, ಪ್ರತಿ ಕೋರ್ಸ್‌ಗಳಿಗೆ 40 ಅಭ್ಯರ್ಥಿಗಳಿಗೆ ಪ್ರವೇಶ ನೀಡುತ್ತದೆ. CUK ಯಲ್ಲಿನ UG ಕಾರ್ಯಕ್ರಮಗಳಲ್ಲಿ BSc (ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ), BSc (ಜೀವ ವಿಜ್ಞಾನ ಮತ್ತು ಭೂವಿಜ್ಞಾನ), BSc (ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನ), BSc ಅಥವಾ BA (ಮನೋವಿಜ್ಞಾನ ಮತ್ತು ಇಂಗ್ಲಿಷ್), BSc ಅಥವಾ BA (ಭೂಗೋಳಶಾಸ್ತ್ರ ಮತ್ತು ಇತಿಹಾಸ) ಮತ್ತು BA (ಅರ್ಥಶಾಸ್ತ್ರ ಮತ್ತು ಸಮಾಜ ಕಾರ್ಯ) ಸೇರಿವೆ.

For Quick Alerts
ALLOW NOTIFICATIONS  
For Daily Alerts

English summary
Central university of karnataka begins ug admission through CUET 2022. Here is application fee and course details.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X