ದಾವಣಗೆರೆ ವಿಶ್ವವಿದ್ಯಾಲದಿಂದ 2017ನೇ ಸಾಲಿನ ಪ್ರವೇಶ ಪ್ರಕಟ

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ವಿವಿಧ ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ಸಂಶೋಧನಾ ಸ್ಥಾನಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ವಿಶ್ವವಿದ್ಯಾಲಯದಲ್ಲಿ 2016-17ನೇ ಸಾಲಿಗೆ ವಿವಿಧ ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ಸಂಶೋಧನಾ ಸ್ಥಾನಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಶಿವಗಂಗೋತ್ರಿಯಲ್ಲಿ ಸ್ನಾತಕೋತ್ತರ ಅಧ್ಯಯನಕ್ಕೆ ಪ್ರವೇಶ

ವಿಶ್ವವಿದ್ಯಾಲಯದ ಈ ಕೆಳಕಂಡ ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ಲಭ್ಯವಿರುವ ಪಿ.ಹೆಚ್.ಡಿ. ಸ್ಥಾನಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಸೂಚನೆಗಳು

ಸಂಶೋಧನೆಗೆ ಸಂಬಂಧಿಸಿದ ತಾತ್ಕಾಲಿಕ ನೋಂದಣಿಯನ್ನು (Ph .D Registration ) ಯುಜಿಸಿ "ಪ್ರವೇಶ ಪರೀಕ್ಷಾ ನಿಯಮಗಳನುಸಾರ ಹಾಗೂ ಅರ್ಹತೆಯ ಆಧಾರದ ಮೇಲೆ ಮಾಡಲಾಗುವುದು. ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾದಲ್ಲಿ ತಾತ್ಕಾಲಿಕ ಪಿ.ಹೆಚ್.ಡಿ.ನೋಂದಣಿಗೆ "ಖಾತ್ರಿ" ಎಂದು ಪರಿಭಾವಿಸಬಾರದು. ನಿಗದಿತ ಅರ್ಜಿ ನಮೂನೆಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪಡೆಯಬಹುದು. ಅಂಚೆ ಮೂಲಕ ಪಡೆಯುವವರು "15*10" ಸೈಜಿನ ಸ್ವ-ವಿಳಾಸದ ಲಕೋಟೆಗೆ ರೂ.60/- ಗಳ ಸ್ಟ್ಯಾಂಪ್ ಅಂಟಿಸಿ ರೂ.1,100/- ಗಳ ಡಿಮ್ಯಾಂಡ್ ಡ್ರಾಫ್ಟ್ ನೊಂದಿಗೆ (ಎಸ್.ಸಿ/ಎಸ್.ಟಿ/ಪ್ರವರ್ಗ-1 ವಿದ್ಯಾರ್ಥಿಗಳು ರೂ.550/- ಗಳ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಜಾತಿ ಪ್ರಮಾಣಪತ್ರದ ಪ್ರತಿಯೊಂದಿಗೆ ಸಲ್ಲಿಸುವುದು)
ಉಪಕುಲಸಚಿವರು ಶೈಕ್ಷಣಿಕ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ, ಶಿವಗಂಗೋತ್ರಿ, ದಾವಣಗೆರೆ-577002 ಇವರಿಂದ ಪಡೆಯಬಹುದು. ನಿಗದಿತ ಮೊತ್ತದ ಡಿ.ಡಿ.ಯನ್ನು "ಹಣಕಾಸು ಅಧಿಕಾರಿಗಳು, ದಾವಣಗೆರೆ ವಿಶ್ವವಿದ್ಯಾನಿಲಯ" ಇವರ ಪದನಾಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ವಿಶ್ವವಿದ್ಯಾಲಯ ಕ್ಯಾಂಪಸ್ ಶಾಖೆ, ಶಿವಗಂಗೋತ್ರಿ ಇಲ್ಲಿ ಸಂದಾಯವಾಗುವಂತೆ ಡಿ.ಡಿ. ಖರೀದಿಸಲು ತಿಳಿಸಲಾಗಿದೆ.ಅರ್ಜಿಗಳನ್ನು ದಿನಾಂಕ 10-02-2017 ರಿಂದ 28-02-2017 ರವರೆಗೂ ವಿತರಿಸಲಾಗುವುದು. ಭರ್ತಿ ಮಾಡಿರುವ ಅರ್ಜಿಗಳನ್ನು ದಿನಾಂಕ 28-02-2017 ರಂದು ಸಂಜೆ 4.00 ರವರೆಗೆ ಸ್ವೀಕರಿಸಲಾಗುವುದು. ಅಲ್ಲದೆ ವಿಶ್ವವಿದ್ಯಾನಿಲಯದ ವೆಬ್ಸೈಟ್ (ಅಂತರ್ಜಾಲದ ಮೂಲಕ) www.davanagereuniversity.ac.in ಮುಖಾಂತರ ಅರ್ಜಿ ನಮೂನೆಗಳನ್ನು ಡೌನ್ಲೋಡ್ ಮಾಡಿಕೊಂಡು ನಿಗದಿತ ಶುಲ್ಕದ ಡಿ.ಡಿ.ಯೊಂದಿಗೆ ಅರ್ಜಿಗಳನ್ನು ನಿಗದಿತ ದಿನಾಂಕದೊಳಗೆ ಸಲ್ಲಿಸಬಹುದಾಗಿದೆ.

ವಿದ್ಯಾರ್ಹತೆ

ಯು.ಜಿ.ಸಿ ಯಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಿಂದ ಸಂಬಂಧಪಟ್ಟ ಸ್ನಾತಕೋತ್ತರ ಪದವಿಗಳಲ್ಲಿ ಶೇ.55 ರಷ್ಟು ಅಂಕಗಳನ್ನು (ಎಸ್.ಸಿ/ಎಸ್.ಟಿ/ಪ್ರವರ್ಗ-1 ರ ವಿದ್ಯಾರ್ಥಿಗಳಿಗೆ ಶೇ.50 ರಷ್ಟು ) ಪಡೆದಿರಬೇಕು ಅಥವಾ ಗ್ರೇಡಿಂಗ್ ಪದ್ದತಿಯಲ್ಲಿ ತತ್ಸಮಾನ ಗ್ರೇಡಿಂಗ್ ಪಡೆದಿರಬೇಕು.

ಪ್ರವೇಶ ಪರೀಕ್ಷೆಯಿಂದ ವಿನಾಯಿತಿ

1. ವಿದೇಶಿಯರು (foriegn)/ ಪ್ರಾಯೋಜಿತರು (sponsored)
2.ಫಿಪ್/ಕಿಪ್ ಯೋಜನೆಯಡಿ ನಿಯೋಜಿತ ಅಧ್ಯಾಪಕರು.
3. ಯುಜಿಸಿ ಸಿಎಸ್ಐಆರ್, ನೆಟ್ ಫಾರ್ ಜೆರ್.ರಿಸರ್ಚ್ ಫೆಲೋಶಿಪ್, ಗೇಟ್/ಗ್ರೇ ಪರೀಕ್ಷೆಗಳಲ್ಲಿ ತೇರ್ಗಡೆಯಾದವರಿಗೆ.
4.ಕೇಂದ್ರ ಸರ್ಕಾರ, ಯುಜಿಸಿ, ರಾಜ್ಯ ಸರ್ಕಾರ ಹಾಗೂ ಇನ್ನಿತರೆ ಸಂಸ್ಥೆಗಳಿಂದ ಮಂಜೂರಾಗಿರುವ ಸಂಶೋಧನಾ ಯೋಜನೆಯಡಿ ಆಯ್ಕೆ ಸಮಿತಿ ಮೂಲಕ ನೇಮಕಾತಿಯಾಗಿದ್ದು ಜೆರ್ಫ್/ಪ್ರಾಜೆಕ್ಟ್ ಫೆಲೋ ಗಳಾಗಿ ಕಾರ್ಯ ನಿರ್ವಹಿಸುತ್ತಿರುವವರು,
5.ಸಹಾಯಕ ಪ್ರಾಧ್ಯಾಪಕರುಗಳಿಗೆ ಅನ್ವಯವಾಗುವ ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ವಿನಾಯಿತಿ ಇದೆ.

For Quick Alerts
ALLOW NOTIFICATIONS  
For Daily Alerts

English summary
Applications are invited from the eligible candidates for enrolment to Ph.D in Davanagere University
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X