ಭಾರತೀಯ ರಾಷ್ಟ್ರೀಯ ಮಿಲಿಟರಿ ಕಾಲೇಜ್ ನಲ್ಲಿ 8ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ

ಉತ್ತರಾಖಂಡ ರಾಜ್ಯದ ಡೆಹ್ರಾಡೂನ್‍ನಲ್ಲಿರುವ ಭಾರತೀಯ ರಾಷ್ಟ್ರೀಯ ಮಿಲಿಟರಿ ಕಾಲೇಜ್ ನಲ್ಲಿ 8ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಅಹ್ವಾನಿಸಲಾಗಿದೆ.

ಮಿಲಿಟರಿ ಶಾಲೆಗೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

 


ಮಿಲಿಟರಿ ಶಾಲೆಯಲ್ಲಿ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ ಬಾಲಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಪ್ರವೇಶ ಪರೀಕ್ಷೆ ಬೆಂಗಳೂರು ಕೇಂದ್ರದಲ್ಲಿ ಜೂನ್ 1 ಹಾಗೂ 2 ರಂದು ನಡೆಯಲಿದೆ. 7ನೇ ತರಗತಿಯಲ್ಲಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ ಬಾಲಕರು ಮಾತ್ರ ಪ್ರವೇಶ ಪರೀಕ್ಷೆಗೆ ಅರ್ಹರಾಗಿರುತ್ತಾರೆ.

ವಯೋಮಿತಿ

ಪ್ರವೇಶ ಪರೀಕ್ಷೆ ಬಯಸುವವರು ದಿನಾಂಕ: 01-01-2018 ರಂತೆ 11 ವರ್ಷದಿಂದ 13 ವರ್ಷದೊಳಗಿನವರಾಗಿರಬೇಕು.

ಅರ್ಜಿ ಸಲ್ಲಿಸುವ ವಿಧಾನ

ವಿವರಣ ಪತ್ರ ಹಾಗೂ ಹಳೇ ಪ್ರಶ್ನೆ ಪತ್ರಿಕೆಗಳನ್ನೊಳಗೊಂಡ ಅರ್ಜಿ ನಮೂನೆಯನ್ನು, ನಿರ್ದೇಶಕರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಭವನ, ನಂ.58 ಫಿಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ರಸ್ತೆ, ಬೆಂಗಳೂರು-560025 ಇವರ ಹೆಸರಿಗೆ ರೂ.550 ಡಿಮಾಂಡ್ ಡ್ರಾಪ್ಟ್ ಸಲ್ಲಿಸಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ದ್ವಿಪ್ರತಿಯಲ್ಲಿ ಮಾರ್ಚ್-31 ರೊಳಗೆ ನಿರ್ದೇಶಕರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಬೆಂಗಳೂರು ವಿಳಾಸಕ್ಕೆ ಸಲ್ಲಿಸಬೇಕು

ಭಾರತೀಯ ರಾಷ್ಟ್ರೀಯ ಮಿಲಿಟರಿ ಕಾಲೇಜು

1922 ರಲ್ಲಿ ಆಂತರಿಕ ಸೇವೆಗಾಗಿ ಸ್ಥಾಪನೆಯಾಗಿದ್ದು, ಇದರ ಕೇಂದ್ರ ಕಾರ್ಯಾಲಯವು ನವದೆಹಲಿಯಲ್ಲಿದೆ. ಬ್ರಿಟಿಷರಿಂದ ಸ್ಥಾಪನೆಗೊಂಡ ಡೆಹ್ರಾಡೂನ್ ಈ ಮಿಲಿಟರಿ ಕಾಲೇಜು ಗರ್ಹಿ ಹಳ್ಳಿಗೆ ಹೊಂದಿಕೊಂಡಂತಿರುವ ಸುಮಾರು 138 ಎಕರೆ ವಿಸ್ತಾರದ ಬೃಹತ್ ಹಸಿರು ಕ್ಯಾಂಪಸ್ ಹೊಂದಿದೆ. ಭಾರತೀಯ ಯುವಕರಿಗೆ ಸೂಕ್ತ ಶಿಕ್ಷಣ ನೀಡಿ ಉನ್ನತ ಹುದ್ದೆ ಅಲಂಕರಿಸಲು ತರಬೇತಿ ನೀಡುವ ಉದ್ದೇಶದಿಂದ ಈ ಕಾಲೇಜನ್ನು ಸ್ಥಾಪಿಸಲಾಗಿದೆ. ಈ ಕಾಲೇಜಿನಲ್ಲಿ ಹನ್ನೊಂದುವರೆ ವರ್ಷದಿಂದ ಹದಿನೆಂಟು ವರ್ಷದ ಬಾಲಕರಿಗೆ ಶಿಕ್ಷಣ ನೀಡಲಾಗುತ್ತದೆ, ಇಲ್ಲಿ ಶಿಕ್ಷಣ ಪಡೆದ ಬಾಲಕರನ್ನು ಎನ್ಡಿಎ/ ಎನ್ಎವಿಎಸಿ ಗೆ ಕಳುಹಿಸಲಾಗುತ್ತದೆ.

ಪ್ರವೇಶ ಪ್ರಕ್ರಿಯೆ

ಪ್ರತಿ ಆರು ತಿಂಗಳಿಗೆ 25 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ಅಭ್ಯರ್ಥಿಯು ಹನ್ನೊಂದುವರೆ ವರ್ಷಕ್ಕಿಂತ ಕಡಿಮೆ ಅಥವಾ ಹದಿಮೂರು ವರ್ಷಕ್ಕಿಂತ ಹೆಚ್ಚಿನ ಪ್ರಾಯದವರಾಗಿರಬಾರದು. ಕೇವಲ 8 ನೇ ತರಗತಿಗೆ ಮಾತ್ರ ಪ್ರವೇಶದ ಅವಕಾಶವಿರುತ್ತದೆ. ಏಳನೇ ತರಗತಿ ತೇರ್ಗಡೆ ಹೊಂದಿದ ಬಾಲಕರು ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿಗಳನ್ನು ಸಂಬಂಧಪಟ್ಟ ರಾಜ್ಯ ಸರ್ಕಾರಕ್ಕೆ ಸಲ್ಲಿಸತಕ್ಕದ್ದು.

ಪ್ರವೇಶ ಪರೀಕ್ಷೆ

ವಿದ್ಯಾರ್ಥಿಗಳ ಆಯ್ಕೆಯನ್ನು ಸ್ಪರ್ಧಾತ್ಮಕ ಪರೀಕ್ಷೆ, ಸಂದರ್ಶನ ಮತ್ತು ದೈಹಿಕ ಪರೀಕ್ಷೆ ಮೂಲಕ ಮಾಡಿಕೊಳ್ಳಲಾಗುವುದು. ಪ್ರಶ್ನೆಪತ್ರಿಕೆಯು ಇಂಗ್ಲಿಷ್ (125 ಅಂಕಗಳು), ಗಣಿತ (200 ಅಂಕ) ಹಾಗು ಸಾಮಾನ್ಯ ಜ್ಞಾನ (75 ಅಂಕ ) ಹೊಂದಿರುತ್ತದೆ. ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ೫೦ ಅಂಕಗಳ ಮೌಖಿಕ ಪರೀಕ್ಷೆ ನಡೆಸಲಾಗುತ್ತದೆ. ಮೌಖಿಕ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ನಡಿಸಿ ಆಯ್ಕೆ ಮಾಡಿಕೊಳ್ಳಲಾಗುವುದು.

For Quick Alerts
ALLOW NOTIFICATIONS  
For Daily Alerts

    English summary
    Admissions for Rashtriya Indian Military College, Dehradun

    ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
    Kannada Careerindia

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more