ಪಿಯುಸಿ: ಪ್ರವೇಶ ಪಡೆಯಲು ಜುಲೈ 31 ಕೊನೆಯ ದಿನ

ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಳಂಬ ದಾಖಲಾತಿ ರೂ.504 ದಂಡ ಶುಲ್ಕದೊಂದಿಗೆ ದಿನಾಂಕ 31-07-2017 ರವರೆಗೆ ದಾಖಲಾಗಲು ಅವಕಾಶ ಕಲ್ಪಿಸಲಾಗಿದೆ.

ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪಿಯು ಕಾಲೇಜುಗಳಲ್ಲಿ ಪ್ರಥಮ ಪಿಯುಗೆ ದಂಡ ಶುಲ್ಕದೊಂದಿಗೆ ಪ್ರವೇಶ ಪಡೆಯುವ ದಿನಾಂಕವನ್ನು ಜುಲೈ 31 ರವೆರೆಗೆ ವಿಸ್ತರಿಸಲಾಗಿದೆ.

2017-18 ನೇ ಶೈಕ್ಷಣಿಕ ಸಾಲಿಗೆ ಪ್ರಥಮ ಪಿಯುಸಿ ತರಗತಿಗೆ ಮಾರ್ಚ್ ತಿಂಗಳಿನಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ದಿನಾಂಕ 25-07-2017 ರವರೆಗೆ ದಂಡ ಶುಲ್ಕದೊಂದಿಗೆ ದಾಖಲಾತಿಗೆ ಕೊನೆಯ ದಿನಾಂಕವನ್ನು ತಿಳಿಸಲಾಗಿತ್ತು ಹಾಗೂ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಒಂದು ವಾರದ ವರೆಗೆ ದಾಖಲಾಗಲು ಅನುಮತಿಯನ್ನು ನೀಡಲಾಗಿತ್ತು.

ಪಿಯುಸಿ ಪ್ರವೇಶಾತಿಗೆ ಜುಲೈ 31 ಕೊನೆ ದಿನ

ನಿಗದಿ ಪಡಿಸಿದ್ದ ದಿನಾಂಕದೊಳಗೆ ಪ್ರವೇಶ ಪಡೆಯಲು ಬಹಳಷ್ಟು ಮಂದಿಗೆ ಸಾಧ್ಯವಾಗಿರಲಿಲ್ಲ. ಆದ್ದರಿಂದ ದಾಖಲಾತಿ ದಿನಾಂಕವನ್ನು 31-07-2017 ರವರೆಗೆ ಮುಂದೂಡಲಾಗಿದೆ.

ವಿವರ

  • ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಳಂಬ ದಾಖಲಾತಿ ರೂ.504 ದಂಡ ಶುಲ್ಕದೊಂದಿಗೆ ದಿನಾಂಕ 31-07-2017 ರವರೆಗೆ ದಾಖಲಾಗಲು ಅವಕಾಶ ಕಲ್ಪಿಸಲಾಗಿದೆ.
  • 2017 ರ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ದಂಡ ಶುಲ್ಕ ರೂ.2184/- ದಂಡ ಶುಲ್ಕದೊಂದಿಗೆ ದಿನಾಂಕ 31-07-2017 ರವರೆಗೆ ದಾಖಲಾಗಲು ಅವಕಾಶ ಕಲ್ಪಿಸಲಾಗಿದೆ.

ದಾಖಲಾತಿಗೆ ಸಲ್ಲಿಸಬೇಕಾದ ದಾಖಲೆಗಳು

  • ಇಲಾಖೆ ನಿಗದಿ ಪಡಿಸಿದ ಭರ್ತಿ ಮಾಡಿದ ಅರ್ಜಿ.
  • ಶಾಲೆಯ ಮುಖ್ಯಸ್ಥರು ದೃಢೀಕರಿಸಿದ ಎಸ್‍ಎಸ್‍ಎಲ್‍ಸಿ/ ತತ್ಸಮಾನವಾದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಂಕಪಟ್ಟಿ
  • ಮೂಲ ವರ್ಗಾವಣೆ ಪತ್ರ
  • ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ 6 ಭಾವಚಿತ್ರಗಳು.
  • ಶುಲ್ಕ ವಿನಾಯಿತಿ ಪಡೆಯಲು ಅರ್ಹರಿರುವ ವಿದ್ಯಾರ್ಥಿಗಳು ಸಕ್ಷಮ ಪ್ರಾಧಿಕಾರದಿಂದ ಪಡೆದಿರುವ ಚಾಲ್ತಿಯಲ್ಲಿರುವ ಜಾತಿ ಪ್ರಮಾಣ ಪತ್ರ ಹಾಗೂ ಅದಾಯ ಪ್ರಮಾಣ ಪತ್ರಗಳು.
  • ವಿಕಲಚೇತನಕ್ಕೆ ಸಂಬಂಧ ಪಟ್ಟಂತೆ ಸೌಲಭ್ಯ ಪಡೆಯಲು ವಿದ್ಯಾರ್ಥಿಗಳು ಸಕ್ಷಮ ಪ್ರಾಧಿಕಾರವು ನೀಡಿರುವ ಪ್ರಮಾಣ ಪತ್ರವನ್ನು ದೃಢೀಕರಿಸಿದ ದಾಖಲೆಗಳು.
  • ಕರ್ನಾಟಕ ರಾಜ್ಯದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇತರೆ ವಿದ್ಯಾರ್ಥಿಗಳು ಮೂಲ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
  • ಆಧಾರ್‍ಕಾರ್ಡ್ ನಕಲು ಪ್ರತಿ.
  • ಬ್ಯಾಂಕ್ ಪಾಸ್‍ಬುಕ್ ನಕಲು ಪ್ರತಿ.

ಮೇಲ್ಕಂಡ ಎಲ್ಲಾ ದಾಖಲೆಗಳನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ನೀಡಬೇಕು.

For Quick Alerts
ALLOW NOTIFICATIONS  
For Daily Alerts

English summary
Date Extended For admission of 1st PUC Students. Admission date extended to July 31 with fine of rupees 504 for supplementary exam passed students and rupees 2184 for Students who passed in March exam.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X