ಜಿಕೆವಿಕೆ ಡಿಪ್ಲೊಮಾ ಕೋರ್ಸುಗಳ ಪ್ರವೇಶ ಪ್ರಕಟ

Posted By:

ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಅಧೀನದಲ್ಲಿರುವ ಕೃಷಿ ಮಹಾವಿದ್ಯಾಲಯ ವಿ.ಸಿ ಫಾರಂ ಮಂಡ್ಯ 2017 -18 ನೇ ಸಾಲಿನ ಎರಡು ವರ್ಷಗಳ ಡಿಪ್ಲೊಮಾ (ಕೃಷಿ-4 ಸೆಮಿಸ್ಟರ್) ಕೋರ್ಸಿಗೆ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಬೋಧನಾ ಕ್ರಮ ಮತ್ತು ಮಾಧ್ಯಮ

ಡಿಪ್ಲೊಮಾ (ಕೃಷಿ)ಯನ್ನು ಕನ್ನಡ ಮಾಧ್ಯಮದಲ್ಲಿ ಸೆಮಿಸ್ಟರ್ ಪದ್ಧತಿಯಲ್ಲಿ ಬೋಧಿಸಲಾಗುವುದು.

ಪ್ರವೇಶ ಅರ್ಹತೆ

ಕೃಷಿ ವಿಶ್ವವಿದ್ಯಾಲಯದಲ್ಲಿ ಡಿಪ್ಲೊಮಾ (ಕೃಷಿ) ಕೋರ್ಸ್ ಪ್ರವೇಶ ಕೋರುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ಪಠ್ಯವನ್ನು ಭಾಷೆಯಾಗಿ ಅಭ್ಯಸಿಸಿ ಕನಿಷ್ಠ ಶೇ.45 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. (ಪ.ಜಾ/ಪ.ಪಂ/ವರ್ಗ-1 ರ ಅಭ್ಯರ್ಥಿಗಳು ಶೇ.40 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು)

ಕೃಷಿ ಡಿಪ್ಲೊಮಾ ಪ್ರವೇಶ ಪ್ರಕಟ

ವಯೋಮಿತಿ

ದಿನಾಂಕ: 30-04-2017 ರಂದು ಅಭ್ಯರ್ಥಿಗಳ ವಯಸ್ಸು 19 ಮೀರಿರಬಾರದು.

ರೈತ ಕುಟುಂಬಕ್ಕೆ ಮೀಸಲಾತಿ

ರೈತರ ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ.40 ರಷ್ಟು ಸೀಟುಗಳನ್ನು ಮೀಸಲಿರಿಸಲಾಗಿದೆ.

ಅರ್ಜಿ ಸಲ್ಲಿಕೆ

  • ಪ್ರವೇಶ ಬಯಸುವ ಅಭ್ಯರ್ಥಿಗಳು ಅರ್ಜಿಯನ್ನು ದಿನಾಂಕ: 08-05-2017 ರಿಂದ 31-05-2017 ರವರೆಗೆ ಖುದ್ದಾಗಿ ಅಥವಾ ಅಂಚೆ ಮೂಲಕ ನಿಗದಿತ ಅರ್ಜಿ ಶುಲ್ಕವನ್ನು ಡಿ.ಡಿ ಮೂಲಕ ಪಾವತಿಸಿ ಕುಲಸಚಿವರ ಕಛೇರಿ ಮಂಡ್ಯ-571405 ಇವರಿಂದ ಪಡೆಯಬಹುದು.
  • ಅರ್ಜಿ ಹಾಗೂ ಮಾಹಿತಿ ಪುಸ್ತಕವನ್ನು ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆ ಬೆಂಗಳೂರು-560065 ವೆಬ್ಸೈಟ್ ನಲ್ಲಿ ದಿನಾಂಕ ದಿನಾಂಕ: 08-05-2017 ರಿಂದ 31-05-2017 ರವರೆಗೆ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
  • ವೆಬ್ಸ್ಠೈಟ್ ಮುಖಾಂತರ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ, ಅರ್ಜಿಯ ನಿಗದಿತ ಶುಲ್ಕವನ್ನು ಡಿ.ಡಿ ರೂಪದಲ್ಲಿ ದಿನಾಂಕ: 31-05-2017 ರೊಳಗೆ ಲಗತ್ತಿಸಿ ಕಳುಹಿಸಿಕೊಡಬೇಕು.
  • ದಿನಾಂಕ 31-05-2017 ರ ನಂತರ ಡಿ.ಡಿಯನ್ನು ಪಡೆದು ಅರ್ಜಿ ಸಲ್ಲಿಸಿದರೆ ಅಂತಹ ಅಭ್ಯರ್ಥಿಗಳ ಅರ್ಜಿಯನ್ನು ತಿರಸ್ಕರಿಸಲಾಗುವುದು.

ಅರ್ಜಿ ಶುಲ್ಕ

  • ಸಮಾನ್ಯ ಮತ್ತು ವರ್ಗದ ಅಭ್ಯರ್ಥಿಗಳಿಗೆ ರೂ.400/-
  • ಪ.ಜಾ/ಪ.ಪಂ/ವರ್ಗ-1 ಅಭ್ಯರ್ಥಿಗಳಿಗೆ ರೂ.200/-

ಡಿ.ಡಿಯನ್ನು comptroller.UAS, GKVK, ಬೆಂಗಳೂರು-560065 ಇವರ ಹೆಸರಿನಲ್ಲಿ ಪಡೆದು ಅರ್ಜಿಯನ್ನು ಪಡೆಯಬಹುದು. ಅಥವಾ ಆಯಾ ಕೇಂದ್ರಗಳಲ್ಲಿ ಇರುವ ಬ್ಯಾಂಕ್ ಮೂಲಕ ಹಣ ಪಾವತಿಸಿ ಡಿ,ಡಿ ಪಡೆದು ಖುದ್ದಾಗಿ ಅರ್ಜಿಗಳನ್ನು ಪಡೆಯಬಹುದು.

ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಕುಲಸಚಿವರು, ಕೃಷಿ ವಿಶ್ವವಿದ್ಯಾನಿಲಯ ಜಿ.ಕೆ.ವಿ.ಕೆ ಬೆಂಗಳೂರು-560065 ಅಥವಾ ಪ್ರಾಂಶುಪಾಲರು ಕೃಷಿ ವಿಶ್ವವಿದ್ಯಾಲಯ ವಿ.ಸಿ ಫಾರಂ ಮಂಡ್ಯ-571405 ಇಲ್ಲಿಗೆ ದಿನಾಂಕ 31-05-2017 ರ ಒಳಗೆ ತಲುಪುವಂತೆ ಅರ್ಜಿ ಸಲ್ಲಿಸತಕ್ಕದ್ದು.

ಪ್ರವೇಶ ಮತ್ತು ಆಯ್ಕೆ ವಿಧಾನ

  • ಸರ್ಕಾರದ ಆದೇಶಗಳ ಅನ್ವಯ ಉತ್ತರಗಳನ್ನು ಭರ್ತಿ ಮಾಡಲಾಗುವುದು.
  • ಅರ್ಹ ಅಭ್ಯರ್ಥಿಗಳು ಮೆರಿಟ್ ಆಧಾರದ ಮೇಲೆ ರೋಸ್ಟರ್ ಪದ್ಧತಿಯನ್ನು ಅಳವಡಿಸಿ ಪ್ರವೇಶಕ್ಕೆ ಆಯ್ಕೆ ಮಾಡಿ, ಆಯ್ಕೆಯಾದ ಅಭ್ಯರ್ಥಿಗಳಿಗೆ ಪತ್ರ ಹಾಗೂ ವೆಬ್ಸೈಟ್ ಮೂಲಕ ತಿಳಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ www.uasbangalore.edu.in ಗಮನಿಸಿ

English summary
2017-18 Diploma admissions are open at GKVK Mandya. Interested candidates can apply before 31st may.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia