ಕನ್ನಡ ವಿಶ್ವವಿದ್ಯಾಲಯ ಹಂಪಿ ರೆಗ್ಯಲರ್ ಕೋರ್ಸ್ ಗಳಿಗಾಗಿ ಪ್ರವೇಶ

Posted By:

2017-18ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರೆಗ್ಯುಲರ್ ಕೋರ್ಸ್ ಗಳು ಪ್ರವೇಶಾತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹಂಪಿಯ ವಿದ್ಯಾರಣ್ಯ ಆವರಣ ಮತ್ತು ವಿಶ್ವವಿದ್ಯಾಲಯದ ವಿಸ್ತರಣಾ ಕೇಂದ್ರಗಳಾದ ಕುಪ್ಪಳ್ಳಿ, ರಾಯಚೂರು ಜಿಲ್ಲೆಯ ದೇವದುರ್ಗಗಳಲ್ಲಿ ಅಧ್ಯಯನ ಮಾಡಬಹುದಾದ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸುವವರು ಜುಲೈ 19 ರೊಳಗೆ ಅರ್ಜಿಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ಕನ್ನಡ ವಿಶ್ವವಿದ್ಯಾಲಯ ಪ್ರವೇಶಾತಿ

ವಿದ್ಯಾರಣ್ಯ ಆವರಣ

ಎಂ.ಎ.ಪಿಹೆಚ್.ಡಿ ಸಂಯೋಜಿತ ಸ್ನಾತಕೋತ್ತರ ಪದವಿ ಕೋರ್ಸುಗಳು

ಕನ್ನಡ ಸಾಹಿತ್ಯ, ಮಹಿಳಾ ಅಧ್ಯಯನ, ಇತಿಹಾಸ ಮತ್ತು ಪುರಾತತ್ವ, ಸಮಾಜಶಾಸ್ತ್ರ, ಕನ್ನಡ ಮತ್ತು ಜಾನಪದ, ಗ್ರಾಮೀಣಭಿವೃದ್ಧಿ.

ಸ್ನಾತಕೋತ್ತರ ಪದವಿ ಕೋರ್ಸ್ ಗಳು

ಎಂ.ಎ ಪತ್ರಿಕೋದ್ಯಮ ಮತ್ತು ಸಂಹವನ ಮಾಧ್ಯಮ, ಎಂ.ಮ್ಯೂಸಿಕ್ (ಹಿಂದೂಸ್ಥಾನಿ ಗಾಯನ), ಎಂ.ವಿ.ಎ(ಚಿತ್ರಕಲೆ)

ಸ್ನಾತಕ ಪದವಿ: ಬಿ.ಮ್ಯೂಸಿಕ್ (ಹಿಂದೂಸ್ಥಾನಿ ಗಾಯನ)

ಸ್ನಾತಕೋತ್ತರ ಡಿಪ್ಲೊಮಾ ಕೋರ್ಸುಗಳು

ಕನ್ನಡ ಭಾಷಾಧ್ಯಯನ, ದ್ರಾವಿಡ ಭಾಷಾವಿಜ್ಞಾನ, ಹಸ್ತಪ್ರತಿಶಾಸ್ತ್ರ, ಭಾಷಾಂತರ, ಜಾನಪದ ಅಧ್ಯಯನ, ಬುಡಕಟ್ಟು ಅಧ್ಯಯನ, ಶಾಸನಶಾಸ್ತ್ರ, ಪತ್ರಿಕೋದ್ಯಮ

ಸ್ನಾತಕ ಡಿಪ್ಲೊಮಾ ಕೋರ್ಸ್

ಪಂಚಾಯತ್ ರಾಜ್, ನಾಟಕ ಕಲೆ ಡಿಪ್ಲೊಮಾ

ಅರ್ಜಿಗಳನ್ನು ವಿಶ್ವವಿದ್ಯಾಲಯದಲ್ಲಿ ಪಡೆದು ಸಲ್ಲಿಸುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19-07-2017
ಹೆಚ್ಚಿನ ಮಾಹಿತಿಗಾಗಿ www.kannadauniversity.org ಗಮನಿಸಿ

ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಸಂಪರ್ಕ ವಿಳಾಸ

ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ - 583 276, ಹೊಸಪೇಟೆ(ತಾಲ್ಲೂಕು), ಬಳ್ಳಾರಿ (ಜಿಲ್ಲೆ),
ಕರ್ನಾಟಕ (ರಾಜ್ಯ), ಭಾರತ
ದೂ: (08394) 241337, 241464, 241335 Fax: (08394) 241334, 241335
ಇ-ಮೇಲ್ : kannadauniversity@gmail.com

ಹಂಪಿ ಕನ್ನಡ ವಿಶ್ವವಿದ್ಯಾಲಯ

"ವಿದ್ಯಾರಣ್ಯ" ಕನ್ನಡ ವಿಶ್ವವಿದ್ಯಾಲಯಕ್ಕೆ ಇಟ್ಟ ಸಾರ್ಥಕನಾಮ. ಪ್ರಾಕೃತಿಕವಾಗಿ ಮೋಹಕವಾಗಿದ್ದು ತನ್ನ ತಗ್ಗು ದಿಣ್ಣೆಗಳಿಂದ ಕಣ್ಮನ ಸೆಳೆಯುವ ಸುಮಾರು 700 ಎಕರೆಗಳ ವಿಸ್ತಾರವಾದ ಆವರಣವಿದು. ಇಲ್ಲಿಯ ಕಟ್ಟಡಗಳು ವಿಜಯನಗರ ಕಾಲದ ಮಂಟಪಗಳ ವಿಶಿಷ್ಟತೆಯಲ್ಲಿ ರೂಪುಗೊಂಡಿದೆ.

ವಿಶ್ವವಿದ್ಯಾಲಯದ ಮುಂಭಾಗಗಳಲ್ಲಿರುವ 'ಅಕ್ಷರ'ದಲ್ಲಿ ಗ್ರಂಥಾಲಯ ಮತ್ತು ವಸ್ತುಸಂಗ್ರಹಾಲಯಗಳಿವೆ. "ಕ್ರಿಯಾಶಕ್ತಿ'' ಆಡಳಿತದ ಕೇಂದ್ರ. ಸಾಂಸ್ಕೃತಿಕ ಚಟುವಟಿಕೆಗಳ ತಾಣ. 'ಭುವನ ವಿಜಯ'. ವಿವಿಧ ನಿಕಾಯಗಳ ವಿವಿಧ ವಿಭಾಗಗಳು 'ತ್ರಿಪದಿ', 'ಕೂಡಲಸಂಗಮ', 'ತುಂಗಭದ್ರ', 'ಘಟಿಕಾಲಯ', 'ಕೇಶೀರಾಜ', 'ಹರಿಹರ', 'ನಾಗವರ್ಮ', 'ಅಕ್ಕ', 'ಅಲ್ಲಮ', 'ನಾದಲೀಲೆ', 'ಕಂಠಪತ್ರ', 'ಜಕ್ಕಣ ಮಂಟಪ' ಮುಂತಾದ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

English summary
Hampi kannada university invites applications for the undergraduation and post graduation courses for the academic year 2017-18

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia