ಹಂಪಿ ವಿಶ್ವವಿದ್ಯಾಲಯ: ದೂರಶಿಕ್ಷಣ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

ಅರ್ಜಿಯನ್ನು ಉಚಿತವಾಗಿ ವೆಬ್ಸೈಟ್ ಅಥವಾ ಕಛೇರಿಯಲ್ಲಿ ಪಡೆದು,ಭರ್ತಿ ಮಾಡಿದ ಅರ್ಜಿಯನ್ನು ಹಿಂದಿರುಗಿಸಲು ಯಾವುದೇ ದಂಡ ಶುಲ್ಕವಿಲ್ಲದೆ ಅಕ್ಟೋಬರ್ 30 ಕೊನೆಯ ದಿನವಾಗಿರುತ್ತದೆ. ರೂ.200/- ದಂಡದೊಂದಿಗೆ ಡಿಸೆಂಬರ್ 30,2017 ಕೊನೆಯ ದಿನವಾಗಿದೆ.

ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯದ ಮೂಲಕ 2017-18 ಸಾಲಿಗೆ ನಡೆಯುವ ಸ್ನಾತಕೋತ್ತರ ಮತ್ತ ಡಿಪ್ಲೊಮಾಗಳ ಕೋರ್ಸ್ ಗಳ ಅಧ್ಯಯನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕೋರ್ಸ್ ವಿವರ

ಎಂ.ಎ ಕೋರ್ಸ್ ಗಳು
ಕನ್ನಡ, ಚರಿತ್ರೆ, ಸಮಾಜಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ
ಕೋರ್ಸ್ ಅವಧಿ: ಎರಡು ವರ್ಷ
ಶೈಕ್ಷಣಿಕ ಅರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ

ಹಂಪಿ ವಿಶ್ವವಿದ್ಯಾಲಯ ದೂರಶಿಕ್ಷಣ

ಸ್ನಾತಕೋತ್ತರ ಡಿಪ್ಲೊಮಾ ಮತ್ತು ಡಿಪ್ಲೊಮಾ ಕೋರ್ಸ್ ಗಳು
ಪುರಾತತ್ವ ಸಂಸ್ಕೃತಿ ಮತ್ತು ಪ್ರವಾಸೋದ್ಯಮ, ಪತ್ರಿಕೋದ್ಯಮ ಅಧ್ಯಯನ, ನಾಟಕ ಕಲೆ, ಕನ್ನಡ ಸಾಹಿತ್ಯ
ಕೋರ್ಸ್ ಅವಧಿ: ಒಂದು ವರ್ಷ
ಶೈಕ್ಷಣಿಕ ಅರ್ಹತೆ: ಸ್ನಾತಕೋತ್ತರ ಡಿಪ್ಲೊಮಾ ಅಧ್ಯಯನಕ್ಕೆ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಮತ್ತು ಡಿಪ್ಲೊಮಾ ಅಧ್ಯಯನಕ್ಕೆ ಎಸ್ ಎಸ್ ಎಲ್ ಸಿ

ಪ.ಜಾ/ಪ್ರ ವರ್ಗದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಶುಲ್ಕ ಪಡೆಯಲು ಅವಕಾಶ ಇರುತ್ತದೆ.

ಅರ್ಜಿಯನ್ನು ಉಚಿತವಾಗಿ ವೆಬ್ಸೈಟ್ ಅಥವಾ ಕಛೇರಿಯಲ್ಲಿ ಪಡೆದು,ಭರ್ತಿ ಮಾಡಿದ ಅರ್ಜಿಯನ್ನು ಹಿಂದಿರುಗಿಸಲು ಯಾವುದೇ ದಂಡ ಶುಲ್ಕವಿಲ್ಲದೆ ಅಕ್ಟೋಬರ್ 30, 2017 ಕೊನೆಯ ದಿನವಾಗಿರುತ್ತದೆ. ರೂ.200/- ದಂಡದೊಂದಿಗೆ ಡಿಸೆಂಬರ್ 30,2017 ಕೊನೆಯ ದಿನವಾಗಿದೆ.

ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಮೂಲಕ ಡಿಡಿ ಪಡೆದು ಹೊಸಪೇಟೆಯ ರಾಷ್ಟ್ರೀಕೃತ ಬ್ಯಾಂಕ್ ಶಾಖೆಗೆ ಪಾವತಿಯಾಗುವುಂತೆ ಹಣಕಾಸು ಅಧಿಕಾರಿ ವಿಶ್ವವಿದ್ಯಾಲಯ, ಹಂಪಿ ಹೆಸರಿಗೆ ಡಿಡಿ ಪಡೆಯಬೇಕು.

ಸೂಚನೆ

  • ಭರ್ತಿ ಮಾಡಿದ ಅರ್ಜಿಯ ಜೊತೆಗೆ ಶುಲ್ಕ ಪಾವತಿಸಿದ ಚಲನ್/ಡಿಡಿ, ಸಂಬಂಧಿಸಿದ ನೆರಳಚ್ಚು ಪ್ರತಿಗಳು (ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಿರಬೇಕು)
  • ಸ್ಟ್ಯಾಂಪ್ ಅಳತೆಯ ಮೂರು ಭಾವಚಿತ್ರಗಳನ್ನು ಅವುಗಳಲ್ಲಿ ಒಂದು ಭಾವಚಿತ್ರವನ್ನು ಪ್ರವೇಶ ಅರ್ಜಿಯ ಮೇಲೆ ಅಂಟಿಸಬೇಕು. ಉಳಿದ ಎರಡು ಭಾವಚಿತ್ರಗಳ ಹಿಂದುಗಡೆ ಅಭ್ಯರ್ಥಿಯ ಹೆಸರು, ಅರ್ಜಿ ಸಂಖ್ಯೆ, ಶಿಕ್ಷಣಕ್ರಮ ಇವುಗಳನ್ನು ಬರೆದು ಲಕೋಟೆಯೊಂದಕ್ಕೆ ಹಾಕಿ ಅರ್ಜಿಯ ಜೊತೆ ನಿರ್ದೇಶಕರು, ದೂರಶಿಕ್ಷಣ ನಿರ್ದೇಶನಾಲಯ, ಕನ್ನಡ ವಿಶ್ವವಿದ್ಯಾಲಯ, ಹಂಪಿ 583 276 ಈ ವಿಳಾಸಕ್ಕೆ ನೋಂದಾಯಿತ ಅಂಚೆ/ಕೊರಿಯರ್/ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬೇಕು ಅಥವಾ ಖುದ್ದಾಗಿ ಸಲ್ಲಿಸಬೇಕು.
  • ಅಧ್ಯಯನ ಕೇಂದ್ರಗಳಲ್ಲಿ ಪ್ರವೇಶ ಪಡೆಯುವ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ದ್ವಿಪ್ರತಿಯಲ್ಲಿ ಸಂಬಂಧಪಟ್ಟ ಅಧ್ಯಯನ ಕೇಂದ್ರದ ಸಂಯೋಜಕರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಗಮನಿಸಿ www.kannadauniversity.org

For Quick Alerts
ALLOW NOTIFICATIONS  
For Daily Alerts

English summary
Hampi kannada university invites application for the distance education. Interested candidates can apply by getting applications from website or by directly from the university.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X