ಎಸ್‌ಬಿಐ... ಕ್ಲರ್ಕ್ ನಿಂದ ಪಿಒ ಹುದ್ದೆವರೆಗೆ ಬಡ್ತಿ ಪಡೆಯುವುದು ಹೇಗೆ?

ಎಸ್‌ಬಿಐ ಅಲ್ಲಿ ಕ್ಲರ್ಕ್ ಆಗಿದ್ದಾರೋ ಹಾಗೂ ಪಿಒ ಹುದ್ದೆಯ ಆಕಾಂಕ್ಷಿಯಾಗಿದ್ದಾರೋ ಅವರಿಗೆ ಈ ಆರ್ಟಿಕಲ್ ಖಂಡಿತ ಸಹಾಯಕ್ಕೆ ಬರುವುದು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಪ್ರೊಬಷನರಿ ಆಫೀಸರ್, ಕ್ಲರ್ಕ್, ಸ್ಪೇಶಾಲಿಸ್ಟ್ ಆಫೀಸರ್ಸ್ ಹುದ್ದೆಗಳಿಗೆ ಈ ಬ್ಯಾಂಕ್ ನೇಮಕಾತಿಯ ಪ್ರಕಟಣೆ ಹೊರಡಿಸುತ್ತದೆ. ಪ್ರತೀ ವರ್ಷ ಎಸ್‌ಬಿಐ ಆಯೋಜಿಸುವ ಈ ಪರೀಕ್ಷೆಗಳಲ್ಲಿ ಸುಮಾರು 15 ಲಕ್ಷ ಅಭ್ಯರ್ಥಿಗಳು ಪಾಲ್ಗೊಳ್ಳುತ್ತಾರೆ.

ಎಸ್‌ಬಿಐ... ಕ್ಲರ್ಕ್ ನಿಂದ ಪಿಒ ಹುದ್ದೆವರೆಗೆ ಬಡ್ತಿ ಪಡೆಯುವುದು ಹೇಗೆ?

ಹೆಚ್ಚಿನ ಅಭ್ಯರ್ಥಿಗಳು ಎಸ್‌ಬಿಐ ನಡೆಸುವ ಪಿಒ ಹಾಗೂ ಕ್ಲರ್ಕ್ ಪರೀಕ್ಷೆಗೆ ಹಾಜರಾಗಿ ತಮ್ಮ ಲಕ್ ಪರೀಕ್ಷಿಸಿಕೊಳ್ಳುತ್ತಾರೆ. ಇನ್ನು ಎಸ್‌ಬಿಐ ಯಾವುದೇ ಕೆಲಸ ಸಿಗುವುದೆಂದ್ರೂ ಅದು ಸುಲಭದ ಮಾತಲ್ಲ. ಇನ್ನು ಎಸ್‌ಬಿಐ ಪಿಒ ಹಾಗೂ ಕ್ಲರ್ಕ್ ಪರೀಕ್ಷೆಯ ಸಿಲೇಬಸ್ ಹೆಚ್ಚು ಕಡಿಮೆ ಒಂದೇ ರೀತಿಯದ್ದಾಗಿರುತ್ತದೆ.

<strong>ಎಂಬಿಎ ಇನ್ ಫೈನಾನ್ಸ್ ಮಾಡಿದ್ರೆ ಕೆರಿಯರ್ ಹೇಗಿರುತ್ತೆ ಗೊತ್ತಾ?</strong>ಎಂಬಿಎ ಇನ್ ಫೈನಾನ್ಸ್ ಮಾಡಿದ್ರೆ ಕೆರಿಯರ್ ಹೇಗಿರುತ್ತೆ ಗೊತ್ತಾ?

ಎಸ್‌ಬಿಐ ಕ್ಲರ್ಕ್ ನೇಮಕ:

ಎಸ್‌ಬಿಐ ಯಲ್ಲಿ ಯಾರು ಕ್ಲರ್ಕ್ ಹುದ್ದೆಯಲ್ಲಿ ಇರುತ್ತಾರೋ ಅವರಿಗೆ 6ಗಳು ಕಾಲ ಪ್ರೊಬಷಿನ್ ಪಿರೇಡ್ ಇರುತ್ತದೆ. ಕೆಲವೊಮ್ಮೆ ಇದು ಪರ್ಫೋಮೆನ್ಸ್ ಆಧಾರದ ಮೇಲೆ ಮುಂದುವರೆಯಬಹುದು ಕೂಡಾ.

<strong>ಬರೀ ಮೈ ಹುರಿದುಂಬಿಸಲು ಮಾತ್ರವಲ್ಲ...ಫಿಟ್ನೆಸ್ ಫೀಲ್ಡ್‌ನಲ್ಲಿ ಕೆರಿಯರ್ ಕೂಡಾ ರೂಪಿಸಿಕೊಳ್ಳಿ!</strong>ಬರೀ ಮೈ ಹುರಿದುಂಬಿಸಲು ಮಾತ್ರವಲ್ಲ...ಫಿಟ್ನೆಸ್ ಫೀಲ್ಡ್‌ನಲ್ಲಿ ಕೆರಿಯರ್ ಕೂಡಾ ರೂಪಿಸಿಕೊಳ್ಳಿ!

ಯಾರೂ ಈ ಇಂಟರ್ನಲ್ ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಾರೋ, ಅವರಿಗೆ ಬಳಿಕ ಸಂದರ್ಶನ ಹಾಗೂ ಲಿಖಿತ ಪರೀಕ್ಷೆ ಇರುವುದು. ಇದರಲ್ಲಿ ಪಾಸಾದ ಅಭ್ಯರ್ಥಿಗೆ 2 ವರ್ಷ ಟ್ರೈನೀ ಆಫೀಸರ್ ಆಗಿ ಬಡ್ತಿ ನೀಡಲಾಗುವುದು. ಎರಡು ವರ್ಷದ ಬಳಿಕ ಮಿಡಲ್ ಮ್ಯಾನೇಜ್‌ಮೆಂಟ್ ಗ್ರೇಡ್ ಸ್ಕೇಲ್ -2 ಪೋಸ್ಟ್ ಗೆ ಬಡ್ತಿ ನೀಡಲಾಗುತ್ತದೆ.

<strong>ಸೋಶಲ್ ವರ್ಕರ್ ಆಗಿ ಸರ್ಕಾರಿ ಹುದ್ದೆ ನಿಮ್ಮದಾಗಿಸಿಕೊಳ್ಳುವುದು ಹೇಗೆ?</strong>ಸೋಶಲ್ ವರ್ಕರ್ ಆಗಿ ಸರ್ಕಾರಿ ಹುದ್ದೆ ನಿಮ್ಮದಾಗಿಸಿಕೊಳ್ಳುವುದು ಹೇಗೆ?

ಈ ಹುದ್ದೆಗೆ ನೇರನೇಮಕಾತಿ:

ಪ್ರತೀ ವರ್ಷ ಎಸ್‌ಬಿಐ ಸುಮಾರು 2000ಕ್ಕೂ ಅಧಿಕ ಹುದ್ದೆಗೆ ನೇಮಕಾತಿಯ ಪ್ರಕಟಣೆ ಹೊರಡಿಸುತ್ತದೆ. ಯಾರೂ ಎಸ್‌ಬಿಐ ಕ್ಲರ್ಕ್ ಪರೀಕ್ಷೆಯನ್ನ ಪಾಸು ಮಾಡಿರುತ್ತಾರೋ ಅವರು ಕೂಡಾ ಈ ಪರೀಕ್ಷೆಯಲ್ಲಿ ಭಾಗವಹಿಸಬಹುದು. ಇನ್ನು ಎಸ್‌ಬಿಐ ಪಿಒ ಪರೀಕ್ಷೆ ಬಗ್ಗೆ ಅಭ್ಯರ್ಥಿಗಳು ಹೆಚ್ಚು ಜಾಗರೂಕರಾಗಿ, ಓದುತ್ತಾರೆ. ಯಾಕೆಂದ್ರೆ ಈ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಕೂಡಾ ನಿರ್ದಿಷ್ಟ ಮಿತಿ ಎಂಬುವುದಿದೆ. ಮೂಲಗಳ ಪ್ರಕಾರ ಸಾಮಾನ್ಯ ವರ್ಗದ ಅಭ್ಯರ್ಥಿ ಈ ಪರೀಕ್ಷೆಯಲ್ಲಿ 4 ಬಾರಿ ಪಾಲ್ಗೊಳ್ಳಬಹುದು ಹಾಗೆಯೇ ಒಬಿಸಿ ಅಭ್ಯರ್ಥಿಗಳು 7 ಬಾರಿ ಹಾಗೂ ಎಸ್‌ಸಿ /ಎಸ್‌ಟಿ/ ವಿಕಲಚೇತನ ಅಭ್ಯರ್ಥಿಗಳಿಗೆ ಈ ತರಹದ ಯಾವುದೇ ಮಿತಿ ಎಂಬುವುದು ಇರುವುದಿಲ್ಲ.

ಇತರ ಬ್ಯಾಂಕ್‌ಗಳಿಗೆ ಹೋಲಿಸಿದ್ರೆ, ಎಸ್‌ಬಿಐ ಬ್ಯಾಂಕ್‌ನಲ್ಲಿ ಕ್ಲರ್ಕ್ ನಿಂದ ಪ್ರೊಬಷನರಿ ಆಫೀಸರ್ ಹುದ್ದೆಗೆ ಜಂಪ್ ಆಗಲು ಹೆಚ್ಚಿನ ಅವಕಾಶವಿದೆ. ಕಾರಣ ಫಾಸ್ಟ್ ಟ್ರಾಕ್ ಪ್ರೊಮೋಶನ್ ಪ್ರೊಸೆಸ್ ಎಸ್‌ಬಿಐಯಲ್ಲಿ ಚಾಲ್ತಿಯಲ್ಲಿದೆ. ಎಸ್‌ಬಿಐ ಅಲ್ಲಿ ಕ್ಲರ್ಕ್ ಆಗಿ ನೀವು ಸೇರಿದ್ರೆ ಮುಂದೆ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹುದ್ದೆ ವರೆಗೆ ನೀವು ಬಡ್ತಿ ಪಡೆಯಬಹುದು ಅದೇ ರೀತಿ ಪಿಒ ಆಗಿ ನೀವು ನೇಮಕಗೊಂಡರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯಸ್ಥ ಹುದ್ದೆ ವರೆಗೂ ಬಡ್ತಿ ಪಡೆಯಬಹುದು. ಅದಕ್ಕೆ ಬೆಸ್ಟ್ ಉದಾಹರಣೆ ಎಂದ್ರೆ ಆರುಂಧತಿ ಭಟ್ಟಾಚಾರ್ಯ.

<strong>ಇಂಡಿಯನ್ ಏರ್‌ಪೋರ್ಸ್ ನಲ್ಲಿ ಏರ್‌ಮ್ಯಾನ್ ಆಗುವುದು ಹೇಗೆ?</strong>ಇಂಡಿಯನ್ ಏರ್‌ಪೋರ್ಸ್ ನಲ್ಲಿ ಏರ್‌ಮ್ಯಾನ್ ಆಗುವುದು ಹೇಗೆ?

For Quick Alerts
ALLOW NOTIFICATIONS  
For Daily Alerts

English summary
State Bank of India (SBI), the largest public sector bank in the country, released the recruitment notification for Probationary Officers (PO), Clerks and Specialists Officers. Be it Clerk or PO, over 15 lakh candidates annually apply for the recruitment examinations conducted by SBI.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X