IGNOU Launch Masters In Visual Arts : ಇನ್ಮುಂದೆ ಇಗ್ನೋದಲ್ಲಿ ಲಲಿತಕಲೆಯಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ಲಭ್ಯ

ಲಲಿತಕಲೆಯಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ಲಾಂಚ್ ಮಾಡಿದ ಇಗ್ನೋ

ಸ್ಕೂಲ್ ಆಫ್ ಪರ್ಫಾರ್ಮಿಂಗ್ ಅಂಡ್ ವಿಷುಯಲ್ ಆರ್ಟ್ಸ್ (ಸೊಪ್ವಾ), ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ಇಗ್ನೌ) ಡ್ರಾಯಿಂಗ್ ಮತ್ತು ಪೇಂಟಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಅಥವಾ ಎಂಎಡಿಪಿ ಕೋರ್ಸ್ ಅನ್ನು ಲಾಂಚ್ ಮಾಡಿದೆ. ಲಲಿತಕಲೆಯಲ್ಲಿ ಆಸಕ್ತವುಳ್ಳವರು ದೂರಶಿಕ್ಷಣದ ಮೂಲಕ ಈ ಕೋರ್ಸ್ ಅನ್ನು ಅಧ್ಯಯನ ಮಾಡಬಹುದು ಎಂದು ತಿಳಿಸಿದೆ.

 

ಲಲಿತಕಲೆಯನ್ನು ಸಾಂಪ್ರದಾಯಿಕವಾಗಿ ಕಲಿಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.

ಯಾರೆಲ್ಲಾ ಈ ಕೋರ್ಸ್ ಅಧ್ಯಯನ ಮಾಡಬಹುದು ?:

ಕಲೆಯಲ್ಲಿ ಪದವಿ -ಡ್ರಾಯಿಂಗ್ ಮತ್ತು ಪೇಂಟಿಂಗ್, ಫೈನ್ ಆರ್ಟ್ಸ್, ವಿಷುಯಲ್ ಆರ್ಟ್ಸ್ ಅಥವಾ ಅನಿಮೇಷನ್, ವಿನ್ಯಾಸ, ಫ್ಯಾಷನ್, ತಂತ್ರಜ್ಞಾನ, ಜವಳಿ ಅಥವಾ ಯಾವುದೇ ಸಂಬಂಧಿತ ವಿಷಯಗಳಲ್ಲಿ ಪದವಿ ವಿದ್ಯಾರ್ಹತೆಯನ್ನು ಪಡೆದವರು ಈ ಕೋರ್ಸ್ ಗೆ ಅರ್ಜಿ ಸಲ್ಲಿಸಬಹುದು.

ಕೋರ್ಸ್ ನ ಅವಧಿ ಮತ್ತು ಬೋಧನಾ ಮಾಧ್ಯಮ ?:

ಈ ಕೋರ್ಸ್ ನ ಅವಧಿ ಎರಡು ವರ್ಷಗಳು ಮತ್ತು ಬೋಧನಾ ಮಾಧ್ಯಮವು ಹಿಂದಿಯಲ್ಲಿರುತ್ತದೆ. ಮಾಧ್ಯಮವು ಇಂಗ್ಲಿಷ್ ಆಗಿದ್ದರೂ, ವಿದ್ಯಾರ್ಥಿಗಳಿಗೆ ತಮ್ಮ ಹುದ್ದೆ ಮತ್ತು ಪರೀಕ್ಷೆಗಳನ್ನು ಹಿಂದಿಯಲ್ಲಿ ಪೂರ್ಣಗೊಳಿಸಲು ಅವಕಾಶ ನೀಡಲಾಗುವುದು ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ಕೋರ್ಸ್ ನ ಶುಲ್ಕದ ವಿವರ:

ಈ ಕೋರ್ಸ್ ಅನ್ನು ಅಧ್ಯಯನ ಮಾಡಲು ಒಟ್ಟಾರೆ 16,500/-ರೂ ಶುಲ್ಕ ತಗುಲುತ್ತದೆ. ಈ ಶುಲ್ಕವನ್ನು ಎರಡು ಕಂತುಗಳಲ್ಲಿ ಪಾವತಿಸಬಹುದಾಗಿದ್ದು, ಅಭ್ಯರ್ಥಿಗಳು ಮೊದಲ ವರ್ಷ 8,250/-ರೂ ಶುಲ್ಕವನ್ನು ಪಾವತಿಸಬೇಕಿರುತ್ತದೆ.

 

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

ಇಗ್ನೋ 2021ರ ಜುಲೈ ಸೆಷನ್ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದೆ. ಓಪನ್ ಮತ್ತು ಡಿಸ್ಟೆನ್ಸ್ ಮೋಡ್ (ಒಡಿಎಲ್) ಮೂಲಕ ನೀಡುವ ಕಾರ್ಯಕ್ರಮಗಳಿಗೆ ಮತ್ತು ಆನ್‌ಲೈನ್‌ನಲ್ಲಿ ನೀಡುವ ಕಾರ್ಯಕ್ರಮಗಳಿಗೆ ಆಸಕ್ತರು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ http://ignou.ac.in/ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.

For Quick Alerts
ALLOW NOTIFICATIONS  
For Daily Alerts

English summary
The programme has been launched by ignou with an aim to provide students who do not have access to study fine arts through conventional systems.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X