ಇಗ್ನೋ: 2018 ರ ಪ್ರವೇಶ ಪ್ರಕ್ರಿಯೆ ಪ್ರಾರಂಭ

Posted By:

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ಇಗ್ನೋ) ಜನವರಿ 2018 ರ ಶೈಕ್ಷಣಿಕ ಅವಧಿಗೆ ದೂರ ಶಿಕ್ಷಣ ಕಾರ್ಯಕ್ರಮಗಳ ಪ್ರವೇಶವನ್ನು ಪ್ರಕಟಿಸಿದೆ.

ಡಿಗ್ರಿ, ಮಾಸ್ಟರ್ ಡಿಗ್ರಿ ಕೋರ್ಸ್ ಗಳಿಗೆ ಅವಕಾಶವಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿತ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದಾಗಿದೆ.

ಇಗ್ನೋ ಪ್ರವೇಶಾತಿ

ಕೋರ್ಸುಗಳ ವಿವರ

ಬ್ಯಾಚುಲರ್ ಡಿಗ್ರಿ ಪ್ರೋಗ್ರಾಮ್ಸ್

 • ಇಂಗ್ಲಿಶ್, ಹಿಂದಿ, ರಾಜ್ಯ ಶಾಸ್ತ್ರ, ಅರ್ಥಶಾಸ್ತ್ರ
 • ಪಬ್ಲಿಕ್ ಅಡ್ಮಿನಿಸ್ಟ್ರೇಶನ್ , ತತ್ವಶಾಸ್ತ್ರ, ಮನಃಶಾಸ್ತ್ರ
 • ಸಮಾಜಶಾಸ್ತ್ರ, ಸೋಶಿಯಲ್ ವರ್ಕ್‌, ವಾಣಿಜ್ಯ ಶಾಸ್ತ್ರ, ಇತಿಹಾಸ
 • ಟೂರಿಸಂ ಸ್ಟಡೀಸ್, ಕಂಪ್ಯೂಟರ್ ಅಪ್ಲಿಕೇಶನ್ಸ್
 • ಲೈಬ್ರರಿ ಅಂಡ್ ಇನಫರ್ಮೇಶನ್ ಸೈನ್ಸ್
 • ಬ್ಯಾಚುಲರ್ ಪ್ರಿಪರೇಟರಿ ಪ್ರೋಗ್ರಾಂ, ಅಸೋಸಿಯೇಟ್ ಪ್ರೋಗ್ರಾಮ್, ಅಡ್ವಾನ್ಸ್ ಸರ್ಟಿಪಿಕೇಟ್ ಪ್ರೋಗ್ರಾಮ್, ಅಂಡ್ ಅಪ್ರಿಶಿಯೇಶನ್ ಪ್ರೊಗ್ರಾಮ್ ಆನ್ ಎನ್ವಿರಾನ್ಮೆಂಟ್, ಡಿಪ್ಲೊಮಾ/ಪಿಜಿ ಡಿಪ್ಲೊಮಾ ಪ್ರೋಗ್ರಾಮ್

ಮಾಸ್ಟರ್ ಡಿಗ್ರಿ ಪ್ರೋಗ್ರಾಮ್ಸ್

 • ರೂರಲ್ ಡೆವೆಲಪ್ಮೆಂಟ್ , ಟೂರಿಸಂ ಮ್ಯಾನೇಜ್ಮೆಂಟ್
 • ಇಂಗ್ಲಿಷ್, ಹಿಂದಿ, ತತ್ವಶಾಸ್ತ್ರ, ಎಜುಕೇಶನ್
 • ಪಬ್ಲಿಕ್ ಅಡ್ಮಿನಿಸ್ಟ್ರೇಶನ್, ಅರ್ಥಶಾಸ್ತ್ರ, ಇತಿಹಾಸ
 • ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಮನಃಶಾಸ್ತ್ರ
 • ಜೆಂಡರ್ ಅಂಡ್ ಡೆವೆಲಪ್ಮೆಂಟ್ ಸ್ಟಡೀಸ್
 • ಡಿಸ್ಟನ್ಸ್ ಎಜುಕೇಶನ್, ಸೋಶಿಯಲ್ ವರ್ಕ್ಸ್
 • ಕಂಪ್ಯೂಟರ್ ಅಪ್ಲಿಕೇಶನ್, ವಾಣಿಜ್ಯ ಶಾಸ್ತ್ರ
 • ಲೈಬ್ರರಿ ಅಂಡ್ ಇನ್ಫರ್ಮೇಶನ್ ಸೈನ್ಸ್
 • ಮಾನವಶಾಸ್ತ್ರ

ಪಿಜಿಡಿಎಚ್ಎಚ್ಎಂ, ಪಿಜಿಡಿಜಿಎಂ ಮತ್ತು ಎಂಎ (ಎಜಿಕೇಷನ್) ನಂತಹ ಆಫ್ಲೈನ್ ಮೆರಿಟ್ ಆಧಾರಿತ ಪ್ರೋಗ್ರಾಮ್ಗಳಿಗಾಗಿ ಅರ್ಜಿಯನ್ನು ಪ್ರಾದೇಶಿಕ ಕೇಂದ್ರಕ್ಕೆ ನಿಗದಿತ ಶುಲ್ಕದೊಂದಿಗೆ ಸಲ್ಲಿಸಬೇಕು.

ಐಸಿಎಐ, ಐಸಿಡಬ್ಯೂಎಐ ಮತ್ತು ಐಸಿಎಸ್ಐ ದ ವಿದ್ಯಾರ್ಥಿಗಳು ಮಾತ್ರ ವಿಶೇಷ ಬಿ.ಕಾಂ/ಎಂ..ಕಾಂ ಗೆ ಅರ್ಜಿ ಸಲ್ಲಿಸಬಹುದಾಗಿದೆ. ಹಾಗೂ ಪ್ರಾಸ್ಪೆಕ್ಟಸ್ ಶುಲ್ಕ 750/- ಇರುತ್ತದೆ. (ಪೋಸ್ಟ್ ಮೂಲಕ ಸ್ವೀಕರಿಸಲು ರೂ.800/-)

ಐಜಿಎನ್ಓಯು, ಬೆಂಗಳೂರು ಇವರ ಹೆಸರಿನಲ್ಲಿ ಡಿಮ್ಯಾಂಡ್ ಡ್ರಾಫ್ಟ್ ಪಡೆದು ಅದರ ಜೊತೆಗೆ ಇಂದಿನ ಪೋಸ್ಟಲ್ ವಿಳಾಸವನ್ನು ಪಿನ್ ಕೋಡ್ ನೊಂದಿಗೆ ಪ್ರಾದೇಶಿಕ ಕೇಂದ್ರಕ್ಕೆ ಸಲ್ಲಿಸತಕ್ಕದ್ದು.

ಜನವರಿ 2018 ರಿಂದ ಮೇಲ್ಪಟ್ಟು (ಪಿಜಿಡಿಐಎಎಂ), ಹ್ಯೂಮನ್ ರಿಸೋರ್ಸ್ ಮ್ಯಾನೇಜ್ಮೆಂಟ್ (ಪಿಜಿಡಿಎಚ್ಆರ್ಎಂ), ಫೈನಾನ್ಸಿಯಲ್ ಮ್ಯಾನೇಜ್ಮಮೆಂಟ್, ಆಪರೇಷನ್ಸ್ ಮ್ಯಾನೇಜ್ಮೆಂಟ್, ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ ಮತ್ತು ಫೈನಾನ್ಸಿಯಲ್ ಮಾರ್ಕೆಟ್ಸ್ ಪ್ರಾಕ್ಟಿಸ್ ಈ ತೆರನಾದ ಮ್ಯಾನೇಜ್ಮೆಂಟ್ನಲ್ಲಿ ಪಿಜಿ ವಿಶೇಷ ಡಿಪ್ಲೊಮಾ ಓಪನ್ ಮ್ಯಾಟ್ ಪ್ರವೇಶ ಪರೀಕ್ಷೆ ಹಾಜರಾಗುವ ಅಗತ್ಯವಿಲ್ಲದೆ ನೇರ ಪ್ರವೇಶಾವಕಾಶಗಳಡಿಯಲ್ಲ್ಲಿ ಇರುತ್ತದೆ.

ಪ್ರತ್ಯೇಕ ಎಂಬಿಎ ಯನ್ನು ಮುಂದುರೆಸಲು ಬಯಸುವವರು ಪ್ರಾದೇಶಿಕ ಕೇಂದ್ರದಿಂದ ರೂ.1000/- ನಗದು ಪಾವತಿಸಿ ಪ್ರತ್ಯೇಕ ಪ್ರಾಸ್ಪೆಕ್ಟಸ್ ಅನ್ನು ಪಡೆಯಬೇಕು. ನಂತರ ಓಪನ್ ಮ್ಯಾಟ್ ಪ್ರವೇಶ ಪರೀಕ್ಷೆಗೆ ಅನ್ವಯಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-12-2017

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
IGNOU Announces Admission for January-2018 session. Degree, Master Degree Courses are permitted and interested candidates can apply with a prescribed fee.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia