IGNOU Re-registration 2022 For July Session : ಮರುನೊಂದಣಿ ಪ್ರಕ್ರಿಯೆ ಅವಧಿ ಸೆ.25ರ ವರೆಗೆ ವಿಸ್ತರಣೆ

ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ 2022ರ ಜುಲೈ ಸೆಶನ್ ಪ್ರವೇಶಾತಿಗೆ ಮರುನೊಂದಣಿ ಪ್ರಕ್ರಿಯೆಯನ್ನು ಆರಂಭ ಮಾಡಿದ್ದು, ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಸೆಪ್ಟೆಂಬರ್ 25,2022ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಇಗ್ನೋ ದಲ್ಲಿ ಪದವಿ,ಸ್ನಾತಕೋತ್ತರ ಪದವಿ, ಪಿಜಿ ಡಿಪ್ಲೋಮಾ ಮತ್ತು ಪಿಜಿ ಸರ್ಟಿಫಿಕೇಟ್ ಕೋರ್ಸ್ ಗಳು ಲಭ್ಯವಿದೆ. ಆಸಕ್ತ ಅಭ್ಯರ್ಥಿಗಳು ನಿಗದಿತ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಿ ಮರು ನೊಂದಣಿಯನ್ನು ಮಾಡಿಕೊಳ್ಳಬಹುದು.

ಇಗ್ನೋ ಪ್ರವೇಶಾತಿ : ಜುಲೈ ಸೆಶನ್ ಗೆ ಮರು ನೊಂದಣಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಪ್ರತಿ ವರ್ಷವು ಇಗ್ನೋ ಪ್ರವೇಶ ಪ್ರಕ್ರಿಯೆಯನ್ನು ಜನವರಿ ಮತ್ತು ಜುಲೈ ನಲ್ಲಿ ನಡೆಸುತ್ತದೆ. ಆಸಕ್ತ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಈ ಮುಂಚೆ ಸೆಪ್ಟೆಂಬರ್ 9,2022ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆಸಕ್ತರು ಇದೀಗ ಅರ್ಜಿಯನ್ನು ಹಾಕಬಹುದು.

ವಿಶ್ವವಿದ್ಯಾನಿಲಯವು ವಿವಿಧ ವಿಭಾಗಗಳಲ್ಲಿ 200ಕ್ಕೂ ಹೆಚ್ಚು ಕೋರ್ಸ್ ಗಳನ್ನು ನೀಡುತ್ತಿದೆ. ಈ ಕೋರ್ಸ್ ಗಳಲ್ಲಿ ಪದವಿಗಳು, ಸ್ನಾತಕೋತ್ತರ ಪದವಿಗಳು, ಪಿಜಿ ಡಿಪ್ಲೊಮಾ ಮತ್ತು ಡಿಪ್ಲೊಮಾ, ಪಿಜಿ ಪ್ರಮಾಣಪತ್ರ ಮತ್ತು ಪ್ರಮಾಣಪತ್ರ ಕೋರ್ಸ್‌ಗಳು ಮತ್ತು ಜಾಗೃತಿ ಮಟ್ಟದ ಕೋರ್ಸ್ ಗಳು ಸೇರಿವೆ. ಕೋರ್ಸ್ ಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು ignouadmission.samarth.edu.in ವೆಬ್‌ಸೈಟ್ ಗೆ ಭೇಟಿ ನೀಡಬಹುದು.
ಆನ್‌ಲೈನ್ ಕೋರ್ಸ್‌ಗಳು :

ಆಸಕ್ತ ಅಭ್ಯರ್ಥಿಗಳು ಇಗ್ನೊ ಆನ್‌ಲೈನ್ ಪೋರ್ಟಲ್ iop.ignouonline.ac.in ಮೂಲಕ ಅಥವಾ ಸಮರ್ಥ ಪೋರ್ಟಲ್ ಮೂಲಕ ಈ ಆನ್‌ಲೈನ್ ಕಾರ್ಯಕ್ರಮಗಳಿಗಾಗಿ ignouiop.samarth.edu.in ನಲ್ಲಿ ನೋಂದಾಯಿಸಿಕೊಳ್ಳಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-09-2022
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: http://ignou.ac.in/

IGNOU ಜುಲೈ 2022 ಸೆಷನ್ : ಮರುನೊಂದಣಿ ಮಾಡುವುದು ಹೇಗೆ ? :

ಸ್ಟೆಪ್ 1: ಅಧಿಕೃತ ವೆಬ್‌ಸೈಟ್‌ ignou.samarth.edu.in ಅಥವಾ ignou.ac.in ಗೆ ಭೇಟಿ ನೀಡಿ.
ಸ್ಟೆಪ್ 2: ಹೋಂ ಪೇಜ್ ನಲ್ಲಿ ಲಭ್ಯವಿರುವ ನೋಂದಣಿ ಲಿಂಕ್ ಅನ್ನು ಕ್ಲಿಕ್ ಮಾಡಿ
ಸ್ಟೆಪ್ 3: ಹೊಸ ಪುಟ ತೆರೆಯುತ್ತದೆ ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ
ಸ್ಟೆಪ್ 4: ನಿಗದಿತ ಪಾವತಿ ವಿಧಾನಗಳ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ
ಸ್ಟೆಪ್ 5: ಅಂತಿಮವಾಗಿ ಪರಿಶೀಲಿಸಿಕೊಂಡು ಸಬ್‌ಮಿಟ್ ಮಾಡಿ.

ಅರ್ಜಿ ನಮೂನೆಯನ್ನು ಸಲ್ಲಿಸಿದ 30 ದಿನಗಳ ನಂತರ ಅಭ್ಯರ್ಥಿಗಳು IGNOU ಮರು-ನೋಂದಣಿ ಅರ್ಜಿಯನ್ನು ಪರಿಶೀಲಿಸಬಹುದು. ವಿಶ್ವವಿದ್ಯಾನಿಲಯವು IGNOU ಜುಲೈ 2022 ಮರು-ನೋಂದಣಿ ಪ್ರಕ್ರಿಯೆಯನ್ನು ಮೇ 20, 2022 ರಂದು ಪ್ರಾರಂಭಿಸಿತು.

For Quick Alerts
ALLOW NOTIFICATIONS  
For Daily Alerts

English summary
IGNOU re-registration 2022 for july session date extended, candidates can apply before september 25,2022.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X