ವಾಯುಪಡೆಯಲ್ಲಿ ಎನ್ ಸಿ ಸಿ ಸ್ಪೆಷಲ್ ಎಂಟ್ರಿ ಸ್ಕೀಮ್ ಕೋರ್ಸ್ ಗೆ ಅರ್ಜಿ ಆಹ್ವಾನ

Posted By:

ಭಾರತೀಯ ವಾಯುಪಡೆಯು 2018ರ ಜನವರಿಯಿಂದ ಆರಂಭವಾಗಲಿರುವ ಎನ್ಸಿಸಿ ಸ್ಪೆಷಲ್ ಎಂಟ್ರಿ ಸ್ಕೀಮ್ ಕೋರ್ಸ್ ಗೆ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಅಭ್ಯರ್ಥಿಗಳು ಮೇ 20ರಿಂದ ಜೂನ್ 15ರ ತನಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಫ್ಲೈಯಿಂಗ್ ಬ್ರಾಂಚ್ ಗೆ ಈ ನೇಮಕ ನಡೆಯುತ್ತಿದ್ದು, ಪರ್ಮನೆಂಟ್ ಕಮೀಷನ್ ನಡಿಯಲ್ಲಿ ನಡೆಯಲಿರುವ ಕೋರ್ಸ್ ಗೆ ಪುರುಷರೂ ಹಾಗೂ ಶಾರ್ಟ್ ಸವೀರ್ಸ್ ಕಮೀಷನ್ ನಡಿಯಲ್ಲಿ ನಡೆಯಲಿರುವ ಕೋರ್ಸ್ ಗೆ ಪುರುಷರು ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹತೆ

 • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಶೇಕಡಾ 60 ಅಂಕಗಳೊಂದಿಗೆ ಪದವಿ ತೇರ್ಗಡೆಯಾಗಿರಬೇಕು
 • ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯುಸಿ ತೇರ್ಗಡೆಯಾಗಿರಬೇಕು
 • ಎನ್ಸಿಸಿ ಏರ್ ವಿಂಗ್ ಸೀನಿಯರ್ ಡಿವಿಷನ್ 'ಸಿ' ಸರ್ಟಿಫಿಕೇಟ್ ಹೊಂದಿರಬೇಕು.

ಎನ್ ಸಿ ಸಿ ಸ್ಪೆಷಲ್ ಎಂಟ್ರಿ ಸ್ಕೀಮ್ ಕೋರ್ಸ್ ಗೆ ಅರ್ಜಿ ಆಹ್ವಾನ

  ವಯೋಮಿತಿ

  1994ರ ಜನವರಿ 2 ಮತ್ತು 1998ರ ಜನವರಿ 1 ರ ನಡುವೆ ಜನಿಸಿರಬೇಕು.

  ಅರ್ಜಿ ಸಲ್ಲಿಕೆ

  ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು ಮೇ 20ರಿಂದ ಜೂನ್ 15 ರವರೆಗೂ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

  ನೇಮಕ ಪ್ರಕ್ರಿಯೆ

  • ಅರ್ಹ ಅಭ್ಯರ್ಥಿಗಳು ಏರ್ಫೋರ್ಸ್ ಸೆಲೆಕ್ಷನ್ ಬೋರ್ಡ್ ನೇಮಕ ಪ್ರಕ್ರಿಯೆ ನಡೆಸುತ್ತದೆ.
  • ರಾಜ್ಯದ ಬೆಂಗಳೂರು, ಮೈಸೂರು ಸೇರಿದಂತೆ ಡೆಹರಾಡೂನ್ ಹಾಗೂ ವಾರಣಸಿಯಲ್ಲಿ ವಿವಿಧ ಹಂತದ ನೇಮಕ ಪ್ರಕ್ರಿಯೆಗಳು ನಡೆಯಲಿವೆ. ಕೊನೆಯ ಹಂತದ ವೈದ್ಯಕೀಯ ಪರೀಕ್ಷೆಯು ಬೆಂಗಳೂರು ಹಾಗೂ ದೆಹಲಿಯಲ್ಲಿ ಮಾತ್ರ ನಡೆಯುತ್ತದೆ. ಅಂತಿಮವಾಗಿ ಆಯ್ಕೆಗೊಂಡ ಅಭ್ಯರ್ಥಿಗಳು 74 ವಾರಗಳ ತರಬೇತಿ ಪಡೆದ ಮೂಲಕ ಆಫೀಸರ್ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
  • ಜನವತಿ 2018 ರಿಂದ ಕೋರ್ಸ್ ಆರಂಭವಾಗುವುದು.

  ಹೆಚ್ಚಿನ ವವಿವರಗಳಿಗೆ careerairforce.nic.in ಗಮನಿಸಿ

  English summary
  As an Air Wing Senior Division ’C’ Certificate holder of the National Cadet Corps, you can apply to the Flying Branch of the Indian Air Force.

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia