ಜೆ ಎನ್ ಯು ಪ್ರವೇಶ ಪ್ರಕ್ರಿಯೆ ಪ್ರಾರಂಭ

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವು 2017 ನೇ ಸಾಲಿನ ಎಂಟೆಕ್ ಬಯೋಟೆಕ್ನಾಲಜಿ, ಎಂಎಸ್ಸಿ ಬಯೋಟೆಕ್ನಾಜಿ ಮತ್ತು ಎಂಎಸ್ಸಿ ಬಯೋಟೆಕ್ನಾಲಜಿ (ಅಗ್ರಿ) ಮತ್ತು ಎಂವಿಎಸ್ ವಿಷಯಗಳ ಪ್ರವೇಶಾತಿಗೆ ಅಧಿಸೂಚನೆ ಹೊರಡಿಸಿದೆ.

ಕಂಬೈನ್ಡ್ ಎಂಟ್ರೆನ್ಸ್ ಎಕ್ಸಾಮ್ ಫಾರ್ ಬಯೋಟೆಕ್ನಾಲಜಿ (ಸಿಇಇಬಿ)2017 ಪ್ರವೇಶ ಪರೀಕ್ಷೆ ಮೂಲಕ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು ಏಪ್ರಿಲ್ 05 , 2017 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.

ಪ್ರವೇಶ ಪ್ರಕ್ರಿಯೆ ಪ್ರಾರಂಭ

 

ಅಭ್ಯರ್ಥಿಗಳ ಗಮನಕ್ಕೆ

  • ಅಭ್ಯರ್ಥಿಗಳು ಜೆಎನ್ ಯು ಅಧಿಕೃತ ವೆಬ್ಸೈಟ್ ವಿಳಾಸದ ಮೂಲಕ ಲಾಗಿನ್ ಆಗಬೇಕು
  • ಲಾಗಿನ್ ಪಾಸ್ವರ್ಡ್ ಅನ್ನು ಮರೆಯಬಾರದು
  • ಅರ್ಜಿ ಸಲ್ಲಿಸುವ ಮುನ್ನ ಕೊಟ್ಟಿರುವ ಸೂಚನೆಗಳನ್ನು ಸರಿಯಾಗಿ ಗಮನಿಸಬೇಕು
  • ಸ್ಕ್ಯಾನ್ ಮಾಡಿದ ಫೋಟೋ ಮತ್ತು ಸಹಿಯನ್ನು ಕೇಳಿರುವ ಮಾದರಿಯಲ್ಲಿ ಅಪ್-ಲೋಡ್ ಮಾಡಬೇಕು
  • ಸರಿಯಾದ ಮಾಹಿತಿಯನ್ನು ಅರ್ಜಿಯಲ್ಲಿ ತುಂಬಬೇಕು.

ವೆಬ್ಸೈಟ್ ವಿಳಾಸ www.admissions.jnu.ac.in

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.1000 /-
  • ಎಸ್.ಸಿ/ಎಸ್.ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ರೂ.500 /-
  • ವಿದೇಶಿ ಅಭ್ಯರ್ಥಿಗಳಿಗೆ ರೂ.2640 /- (ಯುಎಸ್ $40)

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಏಪ್ರಿಲ್ 05 , 2017

ಜೆಎನ್ ಯು

ನೆಹರು ವಿಶ್ವವಿದ್ಯಾಲಯ ಎಂದೂ ಪರಿಚಿತವಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವು ಭಾರತದ ರಾಜಧಾನಿ ನವ ದೆಹಲಿಯಲ್ಲಿ ನೆಲೆಗೊಂಡಿದೆ. ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ಹೆಸರನ್ನೇ ಹೊಂದಿರುವ ಈ ವಿಶ್ವವಿದ್ಯಾಲಯವು ಭಾರತದ ಪ್ರಮುಖ ವಿಶ್ವವಿದ್ಯಾಲಯಗಳ ಪೈಕಿ ಒಂದೆನಿಸಿದೆ. ಜಿ. ಪಾರ್ಥಸಾರಥಿಯವರನ್ನು ಈ ವಿಶ್ವವಿದ್ಯಾಲಯದ ಮೊದಲ ಉಪಕುಲಪತಿಯೆಂದು ನೇಮಿಸಲಾಗಿತ್ತು.

ರಾಷ್ಟ್ರೀಯ ಪರೀಕ್ಷೆ ಮತ್ತು ಮಾನ್ಯತಾ ಪ್ರಕಾರ 2012 ರಲ್ಲಿ ವಿಶ್ವವಿದ್ಯಾಲಯಕ್ಕೆ 4 ಕ್ಕೆ 3 .9 ಅಂಕಗಳನ್ನು ನೀಡಲಾಗಿದೆ, ಅತ್ಯುನ್ನತ ದರ್ಜೆ ಪಡೆಯುವುದರ ಮೂಲಕ ದೇಶದ ಶೈಕ್ಷಣಿಕ ಸಂಸ್ಥೆಯಾಗಿ ಇದು ಗುರುತಿಸಿಕೊಂಡಿದೆ. ರಾಷ್ಟ್ರೀಯ ಸಾಂಸ್ಥಿಕ ರ್ಯಾಂಕಿಂಗ್ ಫ್ರೇಮ್ವರ್ಕ್ ಪ್ರಕಾರ ಮೂರನೇ ಶ್ರೇಯಾಂಕ ಪಡೆದಿರುವುದು ಕೂಡ ಈ ವಿಶ್ವವಿದ್ಯಾಲಯದ ಮತ್ತೊಂದು ಸಾಧನೆ . ಉದಾರ ಶಾಸ್ತ್ರಗಳಲ್ಲಿ ಮತ್ತು ಅನ್ವಯಿಕ ವಿಜ್ಞಾನ ಬೋಧನ ಮತ್ತು ಸಂಶೋಧನಾ ಒತ್ತು ಪ್ರಮುಖ ಹೆಸರುವಾಸಿಯಾಗಿದೆ.

ಹೆಚ್ಚಿನ ಮಾಹಿತಿಗಾಗಿ www.admissions.jnu.ac.in ಗಮನಿಸಿ

For Quick Alerts
ALLOW NOTIFICATIONS  
For Daily Alerts

English summary
The Jawaharlal Nehru University (JNU) has declared an official notification of the Combined Entrance Examination for Biotechnology programs (CEEB) 2017
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X