Karnataka First PUC Admission Start Date: ಆ.13 ರಿಂದ ಪ್ರಥಮ ಪಿಯುಸಿ ದಾಖಲಾತಿ ಪ್ರಕ್ರಿಯೆ ಆರಂಭ

2020-21ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ತರಗತಿಗಳಿಗೆ ದಾಖಲಾತಿ ಪ್ರಕ್ರಿಯೆಗಳನ್ನು ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳು ಆಗಸ್ಟ್ 13,2020 ರಿಂದ ಆರಂಭಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಪ್ರಥಮ ಪಿಯುಸಿ ದಾಖಲಾತಿ ಆ.13ರಿಂದ ಆರಂಭ

ಅರ್ಜಿ ಸಲ್ಲಿಸುವುದು ಹೇಗೆ:

ಕೋವಿಡ್-19ರ ಹಿನ್ನೆಲೆಯಲ್ಲಿ ವೈರಸ್ ಹರಡುವ ಸಾಧ್ಯತೆ ಇರುವುದರಿಂದ, ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ದಾಖಲಾತಿ ಪ್ರಕ್ರಿಯೆಯನ್ನು ಆನ್‌ಲೈನ್ ಮುಖಾಂತರ ಮಾಡಲು ಸೌಲಭ್ಯಗಳಿದ್ದಲ್ಲಿ, ಅಂತಹ ಕಾಲೇಜುಗಳ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಿ ದಾಖಲಾತಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಆನ್‌ಲೈನ್ ವ್ಯವಸ್ಥೆಗಳು ಇಲ್ಲದ ಪದವಿ ಪೂರ್ವ ಕಾಲೇಜುಗಳು ನೇರವಾಗಿ ದಾಖಲಾತಿ ಅರ್ಜಿಗಳನ್ನು ವಿದ್ಯಾರ್ಥಿ/ಪೋಷಕರಿಗೆ ವಿತರಿಸುವ ವ್ಯವಸ್ಥೆಯನ್ನು ಹಲವು ಮುಂಜಾಗ್ರತೆಗಳೊಂದಿಗೆ ಮಾಡಲು ಇಲಾಖೆ ತಿಳಿಸಿದೆ.

ಸೂಚನೆ:

2020-21ನೇ ಸಾಲಿಗೆ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಯವರು ಯಾವುದೇ ಶುಲ್ಕಗಳನ್ನು ಹೆಚ್ಚಿಸದಿರುಲು ಸೂಚಿಸಿದೆ ಹಾಗೂ ಕಾಲೇಜು ಆಡಳಿತ ಮಂಡಳಿಯವರು ಕಳೆದ ಸಾಲಿನಲ್ಲಿ ಪಡೆದ ಶುಲ್ಕಕ್ಕಿಂತ ಕಡಿಮೆ ಶುಲ್ಕವನ್ನು ಪಡೆಯಲು ಇಚ್ಚಿಸಿದ್ದಲ್ಲಿ ಸಂಸ್ಥೆಯವರು ಸ್ವತಂತ್ರವಾಗಿರುತ್ತಾರೆ. ಉಳಿದೆಲ್ಲಾ ಶುಲ್ಕಗಳನ್ನು 2019-20ನೇ ಸಾಲಿನ ಶೈಕ್ಷಣಿಕ ಮತ್ತು ದಾಖಲಾತಿ ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ ಪಡೆಯಲು ಸೂಚಿಸಿದೆ.

ಗಮನಿಸಿ:

ಪ್ರಥಮ ಪಿಯುಸಿ ತರಗತಿಗಳು ಯಾವಾಗ ಪ್ರಾರಂಭವಾಗುವುದು ಎನ್ನುವುದನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ತಥಮ ಪಿಯುಸಿ ದಾಖಲಾತಿ ಪ್ರಕ್ರಿಯೆ ಆರಂಭಿಸುವ ಕುರಿತು ಅಧಿಕೃತ ಸೂಚನೆಯನ್ನು ಓದಲು ಇಚ್ಚಿಸಿದ್ದಲ್ಲಿ ಮುಂದೆ ನೋಡಿ.

For Quick Alerts
ALLOW NOTIFICATIONS  
For Daily Alerts

English summary
Karnataka pre university education department puc admission 2020 notification released. Admission started from august 13.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X