ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಪ್ರವೇಶಾತಿ ಪ್ರಕಟ

Posted By:

ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ 2017-18ನೇ ಸಾಲಿನ ಪ್ರವೇಶಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಜೂನ್ 12 ರ ಒಳಗೆ ಅರ್ಜಿ ಸಲ್ಲಿಸಬೇಕಾಗಿ ಸೂಚಿಸಲಾಗಿದೆ.

ಕೋರ್ಸ್ ವಿವರ

  • ಬಿ.ಎ. ಎಲ್. ಎಲ್. ಬಿ (ಆನರ್ಸ್): ಅವಧಿ ಐದು ವರ್ಷ
  • ಬಿ.ಬಿ.ಎ ಎಲ್. ಎಲ್. ಬಿ (ಆನರ್ಸ): ಅವಧಿ ಐದು ವರ್ಷ

ಕನಿಷ್ಠ ವಿದ್ಯಾರ್ಹತೆ

ಎರಡು ವರ್ಷದ ಪಿಯುಸಿ ಅಥವಾ ತತ್ಸಮಾನದಲ್ಲಿ ಒಟ್ಟು 45% (ಇತರೆ ಹಿಂದುಳಿದ ವರ್ಗ 42% ಪ.ಜಾ/ಪ.ಪಂ ೪೦%) ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

ಕಾನೂನು ವಿಶ್ವವಿದ್ಯಾಲಯ ಪ್ರವೇಶಾತಿ ಪ್ರಕಟ

ವಯೋಮಿತಿ

  • ಸಾಮಾನ್ಯ ವರ್ಗದ ವಿದ್ಯಾರ್ಥಿಗೆ ಗರಿಷ್ಠ 20 ವರ್ಷ (ದಿನಾಂಕ 15-05-1997 ರಂದು ಅಥವಾ ನಂತರ ಜನಿಸಿರಬೇಕು)
  • ಪ.ಜಾ/ಪ.ಪಂ ಮತ್ತು ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಗರಿಷ್ಠ 22 ವರ್ಷ (ದಿನಾಂಕ 15-05-1997 ರಂದು ಅಥವಾ ನಂತರ ಜನಿಸಿರಬೇಕು)

ಆಯ್ಕೆ ವಿಧಾನ

  • ವಿದ್ಯಾರ್ಥಿಯು ಗ್ರಹಿಕೆಯ ಕೌಶಲ್ಯ, ಸಂವಹನ, ಅಂಕಗಣಿತದ ಜ್ಞಾನ, ಕಾನೂನು ಅಧ್ಯಯನದ ಕುರಿತು ಹೊಂದಿರುವ ಆಸಕ್ತಿಯನ್ನು ನಿರ್ಧರಿಸಲು ರೂಪಿಸಲಾದ ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.
  • ಮೀಸಲಾತಿಯಲ್ಲಿ ಸರ್ಕಾರದ ನಿಯಮ ಪಾಲಿಸಲಾಗುತ್ತದೆ.

ಅರ್ಜಿ ಸಲ್ಲಿಕೆ

ಅರ್ಜಿ ನಮೂನೆಗಳನ್ನು ಕಾನೂನು ಶಾಲೆಯ ಕಛೇರಿ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ನವನಗರ ಹುಬ್ಬಳ್ಳಿ ಇವರಿಂದ ಪಡೆಯಬಹುದು ಅಥವಾ ವಿಶ್ವವಿದ್ಯಾಲಯದ ವೆಬ್ಸೈಟ್ www.kslu.ac.in ನಿಂದ ಪಡೆದುಕೊಳ್ಳಬಹುದು.

ಭರ್ತಿ ಮಾಡಿದ ಅರ್ಜಿಗಳನ್ನು ನಿರ್ದೇಶಕರು, ಕಾನೂನು ಶಾಲೆ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ನವನಗರ, ಹುಬ್ಬಳ್ಳಿ-25 ಇವರಿಗೆ ಸಲ್ಲಿಸಬಹುದು.

ಅರ್ಜಿ ಶುಲ್ಕ

ಅರ್ಜಿಯ ಮೊತ್ತ ರೂ.500/- (ಪ.ಜಾ/ಪ.ಪಂ ಮತ್ತು ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ರೂ.250/-) ಗಳನ್ನು ಹಣಕಾಸು ಅಧಿಕಾರಿಗಳು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ ಇವರ ಹೆಸರಿನಲ್ಲಿ ಡಿ.ಡಿ ಅಥವಾ ಚಲನ್ ಮೂಲಕ ಪಾವತಿಸಬಹುದು.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 12-06-2017
  • ಪ್ರವೇಶ ಪರೀಕ್ಷೆಯ ದಿನಾಂಕ: 13-06-2017 ಬೆಳಿಗ್ಗೆ 11:00 ಗಂಟೆಗೆ

ಸೌಲಭ್ಯಗಳು

ಪರಿಣಿತ ಪ್ರಾಧ್ಯಪಕ ವರ್ಗ, ಮನುಪಾತ್ರ, ವೆಸ್ಟ್ ಲಾ ಮತ್ತ ಹೀನ್, ಆನ್-ಲೈನ್ ಮಾಹಿತಿ ಭಂಡಾರದ ಉಚಿತ ಉಪಯೋಗಕ್ಕೆ ಅವಕಾಶ, ಮುಕ್ತ ಅಂತರ್ಜಾಲ ಸೌಲಭ್ಯ, ಸುಸಜ್ಜಿತ ಹಾಗೂ ವಿದ್ಯಾರ್ಥಿ ಸ್ನೇಹಿ ಗ್ರಂಥಾಲಯ, ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಅಣುಕು ನ್ಯಾಯಾಲಯ ಹಾಗೂ ವೃತ್ತಿಪರ ಸಮ್ಮೇಳನಗಳಲ್ಲಿ ಭಾಗವಹಿಸುವ ಅವಕಾಶ, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಸುಸಜ್ಜಿತ ವಸತಿ ನಿಲಯ ಸೌಲಭ್ಯ, ಸುಪ್ರಸಿದ್ದ ಶಿಕ್ಷಣ ತಜ್ಞರು ನ್ಯಾಯವಾದಿಗಳು ಹಾಗೂ ಕಾನೂನು ತಜ್ಞರ ವಿಶೇಷ ಉಪ್ಯಾಸಗಳನ್ನು ಆಯೋಜಿಸುವ ಮೂಲಕ ಕಾನೂನು ವೃತ್ತಿಯ ಕೌಶಲ್ಯಗಳನ್ನು ಬೆಳೆಸಲಾಗುತ್ತದೆ. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ವಿಶೇಷ ಪ್ರೋತ್ಸಾಹ, ಪ್ರತಿಷ್ಠಿತ ವೃತ್ತಿಪರ ವೇದಿಕೆಗಳಲ್ಲಿ ಪ್ರತಿನಿಧಿಸುವ ಅವಕಾಶ

ಹೆಚ್ಚಿನ ಮಾಹಿತಿಗಾಗಿ: ದೂರವಾಣಿ ಸಂಖ್ಯೆ: 0836-2222392, 9480912492
ವೆಬ್ಸೈಟ್ ವಿಳಾಸ: www.kslu.ac.in ಗಮನಿಸಿ

English summary
Karnataka State Law University Admission notification for the year 2017-18

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia