ಕಾನೂನು ವಿಶ್ವವಿದ್ಯಾಲಯದಲ್ಲಿ ಒಂದು ವರ್ಷದ ಎಲ್ ಎಲ್ ಎಂ ಕೋರ್ಸ್ ಗೆ ಪ್ರವೇಶ

Posted By:

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿಯಲ್ಲಿ ಸಂವಿಧಾನ ಮತ್ತು ಆಡಳಿತಾತ್ಮಕ ಕಾನೂನು ಮತ್ತು ಔದ್ಯೋಗಿಕ ಮತ್ತು ವಾಣಿಜ್ಯ ಕಾನೂನು ವಿಷಯಗಳಲ್ಲಿ ಒಂದು ವರ್ಷದ ಎಲ್ ಎಲ್ ಎಂ ಕೋರ್ಸ್ ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಕೆಳಗಿನ ಸಂಸ್ಥೆಗಳಲ್ಲಿ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನುಆಹ್ವಾನಿಸಲಾಗಿದೆ.

  • ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆ, ನವನಗರ ಹುಬ್ಬಳ್ಳಿ.
  • ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ, ಮಂಗಳೂರು.
  • ಕೆಎಲ್ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯ, ಬೆಂಗಳೂರು.

 ಒಂದು ವರ್ಷದ ಎಲ್ ಎಲ್ ಎಂ ಕೋರ್ಸ್ ಗೆ ಪ್ರವೇಶ

ಒಂದು ವರ್ಷದ ಎಲ್ ಎಲ್ ಎಂ ಕೋರ್ಸ್ ಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಕಾನೂನು ಪದವಿಯಲ್ಲಇ ಕನಿಷ್ಠ 45% ರಷ್ಟು ಅಂಕಗಳನ್ನು ಪಡೆದಿರಬೇಕು. (ಪ.ಜಾ ಮತ್ತು ಪ.ಪಂ ಅಭ್ಯರ್ಥಿಗಳು ಶೇ.40 ಅಂಕಗಳನ್ನು ಪಡೆದಿರಬೇಕು).

ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ಸಹ ಪ್ರವೇಶ ಪರೀಕ್ಷೆಗೆ ಕುಳಿತುಕೊಳ್ಳಬಹುದಾಗಿದೆ.

ಕನಿಷ್ಠ ವಿದ್ಯಾರ್ಹತೆ ಹೊಂದಿದ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ಹಾಗೂ ಮೌಖಿಕ ಪರೀಕ್ಷೆಯ ಮೂಲಕ ಆಯ್ಕೆಮಾಡಿಕೊಳ್ಳಲಾಗುವುದು. ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಬೋಧನೆ/ಸಂಶೋಧನೆಯಲ್ಲಿ ಇರುವ ಆಸಕ್ತಿ, ಕಾನೂನು ವಿಷಯಗಳಲ್ಲಿ ಜ್ಞಾನ ಇವೇ ಮುಂತಾದವುಗಳನ್ನು ಪರೀಕ್ಷಿಸಲಾಗುವುದು.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.500/-
  • ಪ.ಜಾ.ಪ.ಪಂ ಹಾಗೂ ಪ್ರ-1 ರ ಅಭ್ಯರ್ಥಿಗಳಿಗೆ ರೂ.250/-
  • ಡಿ.ಡಿಯನ್ನು ಹಣಕಾಸು ಅಧಿಕಾರಿಗಳ ಹೆಸರಿನಲ್ಲಿ ಪಾವತಿಸತಕ್ಕದ್ದು.

ಅರ್ಜಿ ಸಲ್ಲಿಕೆ

ಅರ್ಜಿಯ ನಮೂನೆಗಳನ್ನು ವಿಶ್ವವಿದ್ಯಾಲಯದ ಅಂತರ್ಜಾಲ ತಾಣದಿಂದ ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ಕಾನೂನು ಶಾಲೆಯ ಕಚೇರಿಯಿಂದ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ, ಮಂಗಳೂರು ಮತ್ತು ಪ್ರಾಚಾರ್ಯರು, ಕೆ.ಎಲ್.ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯ, ಬೆಂಗಳೂರು. ಇವರಿಂದ ಪಡೆಯಬಹುದಾಗಿದೆ.

ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ: 17-08-2017 ರೊಳಗೆ ನಿರ್ದೇಶಕರು, ಕಾನೂನು ಶಾಲೆ, ಕ.ರಾ.ಕಾ.ವಿ ಹುಬ್ಬಳ್ಳಿ ಇವರಿಗೆ ಸಲ್ಲಿಸಬೇಕು.

ಪ್ರವೇಶಾತಿ ಪರೀಕ್ಷೆ

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ ದಿನಾಂಕ 18-08-2017 ರಂದು ಬೆಳಗ್ಗೆ 9:00 ಗಂಟೆಯಿಂದ 11:30 ಗಂಟೆಯವರೆಗೆ ಲಿಖಿತ ಪರೀಕ್ಷೆಯನ್ನು ಹಾಗೂ 12:00 ಗಂಟೆಯ ನಂತರ ಮೌಖಿಕ ಪರೀಕ್ಷೆಯನ್ನು ನಡೆಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ www.kslu.ac.in ಗಮನಿಸಿ

English summary
Karnataka state law university, Hubballi invites applications from the eligible candidates for admissions to one year LLM course.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia