ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಪ್ರವೇಶಾತಿ

Posted By:

ಗದಗಿನ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ 2017 -18 ನೇ ಸಾಲಿಗೆ ವಿವಿಧ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಐದು ವಿವಿಧ ವಿಷಯಗಳ ಸ್ನಾತಕೋತ್ತರ ವಿಷಯಗಳಿಗೆ ಪ್ರವೇಶಾತಿ ನೀಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸ್ನಾತಕೋತ್ತರ ಪದವಿ ಪ್ರವೇಶಾತಿ

ಅರ್ಜಿ ಸಲ್ಲಿಕೆ
ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ವಿಶ್ವವಿದ್ಯಾಲಯದ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ನಿಗದಿತ ದಿನಾಂಕದೊಳಗೆ ಕಛೇರಿಗೆ ಸಲ್ಲಿಸಲು ಸೂಚಿಸಲಾಗಿದೆ.

ಕೋರ್ಸ್ ವಿವರ

ಎಂ.ಬಿ.ಎಗ್ರಾಮೀಣ ನಿರ್ವಹಣೆ
ಎಂ.ಎಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಎಂ.ಎಸ್ಸಿಜಿಯೋಇನ್ಫರ್ಮೇಟಿಕ್ಸ್
ಎಂ.ಎಸ್.ಡಬ್ಲ್ಯೂಗ್ರಾಮೀಣ ಪುನರ್ ನಿರ್ಮಾಣ
ಎಂ.ಎಂ.ಎಸ್ಕೌಶಲ್ಯ ಮತ್ತು ಉದ್ಯಮ ಶೀಲತೆ ಅಭಿವೃದ್ಧಿ (ಮಾಸ್ಟರ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್)

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.200/-
  • ಪ.ಜಾ/ಪ.ಪಂ/ಪ್ರ-1/ ವಿಕಲಚೇತನ ಅಭ್ಯರ್ಥಿಗಳಿಗೆ ರೂ.100/-
  • ಆನ್-ಲೈನ್ ಅಥವಾ ಆಫ್-ಲೈನ್ ಮೂಲಕ ಸಂದಾಯ ಮಾಡಿದ ಮೂಲ ಶುಲ್ಕದ ರಶೀದಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.

ಭರ್ತಿ ಮಾಡಿದ ಅರ್ಜಿಗಳ ಜೊತೆಗೆ ಪೂರಕ ದಾಖಲೆಗಳನ್ನು ಲಗತ್ತಿಸಿ ಅಭ್ಯರ್ಥಿಗಳು ನೇರವಾಗಿ ಅಥವಾ ನೋಂದಾಯಿತ ಅಂಚೆಯ ಮೂಲಕ ಕಲಸಚಿವರು , ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಜನರಲ್ ಕಾರ್ಯಪ್ಪ ಸರ್ಕಲ್, ಗದಗ-582101 ಇವರಿಗೆ ಕಳುಹಿಸತಕ್ಕದ್ದು.

ಸೂಚನೆ

ಎಂಬಿಎ-ಗ್ರಾಮೀಣ ನಿರ್ವಹಣೆ ಕೋರ್ಸಿಗೆ ಕೆಇಎ ಯಿಂದ ಬಂದ ಅಭ್ಯರ್ಥಿಗಳನ್ನು ಆಯ್ಕೆಮಾಡಿಕೊಳ್ಳಲಾಗುವುದು. ಖಾಲಿ ಉಳಿದ ಸೀಟುಗಳನ್ನು ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ ಮೂಲಕ ತುಂಬಿಕೊಳ್ಳಲಾಗುವುದು.

ಹೆಚ್ಚಿನ ಮಾಹಿತಿಗಾಗಿ ksrdpru.in ಗಮನಿಸಿ

English summary
Karnataka State Rural Development and Panchayat Raj University, Gadag invited applications for the admissions of post graduation course for the academic year 2017-18

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia