ಕಿದ್ವಾಯಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ನಲ್ಲಿ ಹೆಲ್ತ್ ಸೈನ್ಸ್ ಕೋರ್ಸುಗಳಿಗೆ ಅರ್ಜಿ ಆಹ್ವಾನ

Posted By:

ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ನಲ್ಲಿ 2017-18 ನೇ ಸಾಲಿನ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನಿಯಮಿತ ಸೀಟುಗಳು ಮಾತ್ರ ಇದ್ದು ಮೆರಿಟ್ ಆಧಾರದ ಮೇಲೆ ಸಂದರ್ಶನದ ಮೂಲಕ ಸೀಟು ಹಂಚಿಕೆ ಮಾಡಲಾಗುವುದು.ಆಸಕ್ತರು ಜುಲೈ 15 ರೊಳಗೆ ಅರ್ಜಿಗಳನ್ನು ಕಚೇರಿ ವಿಳಾಸಕ್ಕೆ ತಲುಪಿಸತಕ್ಕದ್ದು.

ಎಂ.ಎಸ್ಸಿ ಕೋರ್ಸ್ ವಿವರ

 • ಎಂ.ಎಸ್ಸಿ-ರೇಡಿಯೇಷನ್ ಫಿಸಿಕ್ಸ್-05 ಸೀಟುಗಳು
 • ಎಂ.ಎಸ್ಸಿ-ಇಮೇಜಿಂಗ್ ಟೆಕ್ನಾಲಜಿ-10 ಸೀಟುಗಳು

ಹೆಲ್ತ್ ಸೈನ್ಸ್ ಕೋರ್ಸುಗಳಿಗೆ ಅರ್ಜಿ ಆಹ್ವಾನ

  ಬಿ.ಎಸ್ಸಿ ಕೋರ್ಸ್ ವಿವರ

  • ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ-10 ಸೀಟುಗಳು (ಲ್ಯಾಟರಲ್ ಎಂಟ್ರಿ 1)
  • ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ- 10 ಸೀಟುಗಳು (ಲ್ಯಾಟರಲ್ ಎಂಟ್ರಿ 1)
  • ರೇಡಿಯೋಥೆರಪಿ ಟೆಕ್ನಾಲಜಿ- 10 ಸೀಟುಗಳು
  • ಆಪರೇಷನ್ ಥಿಯೇಟರ್ ಟೆಕ್ನಾಲಜಿ- 10 ಸೀಟುಗಳು (ಲ್ಯಾಟರಲ್ ಎಂಟ್ರಿ 2)
  • ಅನಸ್ಥೇಷಿಯ ಟೆಕ್ನಾಲಜಿ- 10 ಸೀಟುಗಳು (ಲ್ಯಾಟರಲ್ ಎಂಟ್ರಿ 1)

  ಅರ್ಜಿ ಸಲ್ಲಿಕೆ

  ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ ಜುಲೈ 15 ರೊಳಗೆ ಕಾಲೇಜಿನ ನಿರ್ದೇಶಕರಿಗೆ ತಲುಪಿಸುವಂತೆ ಸೂಚಿಸಲಾಗಿದೆ.

  ಅರ್ಜಿ ಶುಲ್ಕ

  ಎಂ.ಎಸ್ಸಿ ಕೋರ್ಸ್: ರೂ.500/-
  ಬಿ.ಎಸ್ಸಿ ಕೋರ್ಸ್: ರೂ.400/-

  ವಿದ್ಯಾರ್ಹತೆ

  • ಎಂ.ಎಸ್ಸಿ ಕೋರ್ಸ್ ಗಾಗಿ ಸಂಬಂಧಪಟ್ಟ ವಿಷಯದಲ್ಲಿ ಪದವಿ ಪೂರೈಸಿರಬೇಕು.
  • ಬಿ.ಎಸ್ಸಿ ಕೋರ್ಸ್ ಸೇರ ಬಯಸುವವರು ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಅಥವಾ ಹನ್ನೆರಡನೇ ತರಗತಿ ತೇರ್ಗಡೆ ಹೊಂದಿರಬೇಕು ಅಥವಾ ಎಸ್ ಎಸ್ ಎಲ್ ಸಿ ನಂತರ ಸಂಬಂಧಪಟ್ಟ ವಿಷಯದಲ್ಲಿ 3 ವರ್ಷದ ಡಿಪ್ಲೊಮಾ ಪದವಿ ಗಳಿಸಿರಬೇಕು.
  • ಇಮೇಜ್ ಟೆಕ್ನಾಲಜಿ ಸೇರ ಬಯಸುವವರು ಪಿಯುಸಿಯಲ್ಲಿ ಕಡ್ಡಾಯವಾಗಿ ಗಣಿತ ಅಭ್ಯಾಸ ಮಾಡಿರಬೇಕು.ಉಳಿದ ಬಿ.ಎಸ್ಸಿ ಕೋರ್ಸಿಗೆ ಪಿಯುಸಿ/ಡಿಪ್ಲೊಮಾ ಮುಗಿಸಿರಬೇಕು

  ಬಿ.ಎಸ್ಸಿ ಕೋರ್ಸ್ ಅವಧಿಯು ಮೂರು ವರ್ಷವಿದ್ದು ಕೋರ್ಸ್ ಮುಗಿದ ನಂತರ ಆರು ತಿಂಗಳ ಇಂಟರ್ನಷಿಪ್ ಇರುತ್ತದೆ. ಇಂಟರ್ನಷಿಪ್ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಮಾಸಿಕೆ 10 ಸಾವಿರ ಸ್ಟೈಪಂಡ್ ನೀಡಲಾಗುವುದು.

  ಪ್ರಮುಖ ದಿನಾಂಕಗಳು

  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-07-2017
  ಎಂ.ಎಸ್ಸಿ ಕೋರ್ಸ್ ಸಂದರ್ಶನ ನಡೆಯುವ ದಿನಾಂಕ: 20-07-2017
  ಬಿ.ಎಸ್ಸಿ ಕೋರ್ಸ್ ಸಂದರ್ಶನ ನಡೆಯುವ ದಿನಾಂಕ: 21-07-2017

  ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

  English summary
  Kidwai cancer institute invites applications for admission to the post graduate and undergraduate courses for the academic year 2017-18.

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia