ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (KIIT) University-ದಾಖಲಾತಿ ಪ್ರಾರಂಭ

Posted By: Vinaykumar

ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (KIIT) University- ಭುವನೇಶ್ವರ, ಪದವಿ ಶಿಕ್ಷಣ ಅರ್ಜಿಗಳನ್ನು ಆಹ್ವಾನಿಸಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

KIITEE 2017 ಪರೀಕ್ಷೆ

ಬ್ಯಾಚುಲರ್ ಆಫ್ ಟೆಕ್ನಾಲಜಿ (ಬಿಟೆಕ್, ಮೂರು ವರ್ಷ ಕಾಲಾವಧಿಗೆ), ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಐದು ವರ್ಷಗಳ ಅವಧಿಯ (BArch),  ಮಾಸ್ಟರ್ ಆಫ್ ಟೆಕ್ನಾಲಜಿ (MTech), ಡ್ಯುಯಲ್ ಪದವಿ ಬಿಟೆಕ್ + MTech ಮತ್ತು ಉಭಯ ಪದವಿ ಬಿಟೆಕ್ + ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಟೆಕ್ + ಮ್ಯಾನೇಜ್) ಕೋರ್ಸ್ ಗಳಿಗೆ  ಪ್ರವೇಶ ಬಯಸುವವರಿಗೆ ಮತ್ತು ಲ್ಯಾಟರಲ್ ಎಂಟ್ರಿ ಬಯಸುವ ಅಭ್ಯರ್ಥಿಗಳಿಗೆ 2017 ನೇ ಸಾಲಿನ ಶೈಕ್ಷಣಿಕ ವರ್ಷದ ದಾಖಲಾತಿಗೆ ಆಹ್ವಾನ ನೀಡಲಾಗಿದೆ.

ಕಳಿಂಗ ವಿಶ್ವವಿದ್ಯಾಲಯವು ಶಿಕ್ಷಣ ಮತ್ತು ಸಂಶೋದನೆಯಲ್ಲಿ ಅತ್ಯಂತ ಮುಂಚೂಣಿಯಲ್ಲಿರುವ ವಿಶ್ವವಿದ್ಯಾಲಯ.ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುವ ಉದ್ದೇಶದಿಂದ ಈ ಶಿಕ್ಷಣ ಸಂಸ್ಥೆ ಸ್ಥಾಪಿಸಲಾಗಿದ್ದು ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ವಿಶಾಲ ಕ್ಯಾಂಪಸ್ ಹೊಂದಿದ್ದು , ತಾಂತ್ರಿಕ ಶಿಕ್ಷಣಕ್ಕೆ ಬೇಕಾದ ಎಲ್ಲ ಮೂಲ ಸೌಕರ್ಯಗಳನ್ನು ಹೊಂದಿದೆ, ಅಲ್ಲದೆ ಉಚಿತ ವೈಫೈ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಕಲಿಯಲು ಸಹಕಾರಿಯಾಗಿದೆ. ಮಲ್ಟಿಮೀಡಿಯಾ ತರಗತಿ ಕೊಠಡಿಗಳು, ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯ ಹಾಗು ಅಚ್ಚುಕಟ್ಟಾದ ಕ್ಯಾಂಟೀನ್ ವ್ಯವಸ್ಥೆ ಇಲ್ಲಿ ವಿದ್ಯೆಯನ್ನು ಹರಸಿ ಬಂದವರಿಗೆ ಕಲಿಯಲು ಉತ್ತಮ ಪರಿಸರ ನಿರ್ಮಾಣ ಮಾಡಿದೆ. ಆಸಕ್ತ ವಿದ್ಯಾರ್ಥಿಗಳು ಮಾರ್ಚ್ 31,2017 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಹತೆ

ಬಿ ಟೆಕ್ ಮತ್ತು ಡ್ಯುಯಲ್ ಪದವಿ ಬಯಸುವವರು
ಮಾನ್ಯತೆ ಹೊಂದಿದ ಶಿಕ್ಷಣ ಸಂಸ್ಥೆಯಿಂದ ಇಂಟರ್ಮೀಡಿಯೇಟ್ ಅಥವಾ 12 ನೇ ತರಗತಿಗೆ ಸಮಾನವಾದ ಶಿಕ್ಷಣದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ಶೇ.60 ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿರಬೇಕು.

ಬಿ ಟೆಕ್ ಪದವಿಗೆ ಲ್ಯಾಟರಲ್ ಎಂಟ್ರಿ ಬಯಸುವವರು
ಶಿಕ್ಷಣ ಇಲಾಖೆ ಮಾನ್ಯತೆ ಹೊಂದಿದ ಶಿಕ್ಷಣ ಸಂಸ್ಥೆಯಿಂದ ಶೇ.೬೦ ಅಂಕಗಳೊಂದಿಗೆ ಇಂಜಿನಿಯರಿಂಗ್ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.

ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಬಯಸುವವರು
ಶಿಕ್ಷಣ ಇಲಾಖೆ ಮಾನ್ಯತೆ ಹೊಂದಿದ ಶಿಕ್ಷಣ ಸಂಸ್ಥೆಯಿಂದ ಇಂಟರ್ಮೀಡಿಯೇಟ್ ಹೊಂದುವುದರ ಜೊತೆಗೆ ನವದೆಹಲಿಯ ಆರ್ಕಿಟೆಕ್ಚರ್ ಮಂಡಳಿಯಿಂದ ಆಯೋಜಿಸುವ ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ (NATA) ತೇರ್ಗಡೆ ಹೊಂದಿರಬೇಕಾಗುತ್ತದೆ.

ಆಯ್ಕೆ ವಿಧಾನ

ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ ಇಂಟಾನ್ಸ್ ಎಕ್ಸಾಮಿನೇಷನ್ (KIITEE 2017) ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ

ಕೆ ಐ ಐ ಟಿ ಅಧಿಕೃತ ವೆಬ್ ಸೈಟ್ ವಿಳಾಸ http://www.kiit.ac.in/ ಗೆ ಲಾಗ್ ಆನ್ ಆಗಿ.
ಕೇಳಿರುವ ಮಾಹಿತಿ ಪ್ರಕಾರ ನೋಂದಣಿ ಫಾರ್ಮ್ ತುಂಬಿಸಿ.
"submit " ಬಟನ್ ಒತ್ತಿ
ಮುಂದಿನ ಪ್ರಕ್ರಿಯೆಗೆ ಸಹಾಯವಾಗಲು ಸೇವ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ

ಆಯ್ಕೆ ವಿಧಾನ

ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ ಇಂಟಾನ್ಸ್ ಎಕ್ಸಾಮಿನೇಷನ್ (KIITEE 2017) ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

ಸೂಚನೆ

ಆನ್ಲೈನ್ ಅಪ್ಲಿಕೇಶನ್ ನ ಹಾರ್ಡ್ ಕಾಪಿಯನ್ನು "The Director, Admissions, KIIT University, Koel Campus, Bhubaneswar - 751024, Odisha, India" ಇವರಿಗೆ ಕಳುಹಿಸಿ.

ದಿನಾಂಕಗಳು

ಮಾರ್ಚ್ 31 , 2017. ಸಂಪೂರ್ಣ ಭರ್ತಿ ಮಾಡಿದ ಅರ್ಜಿಗಳನ್ನು ತೆಗೆದುಕೊಳ್ಳಲು ಕೊನೆಯ ದಿನಾಂಕ.
ಏಪ್ರಿಲ್ 14 ರಿಂದ ಏಪ್ರಿಲ್ 23, 2017, ಪರೀಕ್ಷೆ ನಡೆಯುವ ದಿನಾಂಕ
ಮೇ 05, 2017, ಫಲಿತಾಂಶ ಬಿಡುಗಡೆ

English summary
KIIT University Opens Admissions for Its Degree Courses

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia