ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆ ಪ್ರವೇಶಾತಿ

Posted By:

ಭಾರತದ ಏಕೈಕ ಮಹಿಳಾ ಸೈನಿಕ ಶಾಲೆ ಎಂಬ ಹೆಗ್ಗಳಿಕೆ ಪಡೆದಿರುವ ಕಿತ್ತೂರು ರಾಣಿ ಚೆನ್ನಮ್ಮ ಸೈನಿಕ ವಸತಿ ಶಾಲೆಯಲ್ಲಿ ಹನ್ನೊಂದನೆ ತರಗತಿಯ (ವಿಜ್ಞಾನ) ಪ್ರವೇಶಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ.

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಇ)ಗೆ ಒಳಪಟ್ಟಿರುವ ಈ ಶಾಲೆಯಲ್ಲಿ ಆರನೇ ತರಗರತಿಯಿಂದ ಹನ್ನೆರಡನೇ ತರಗತಿಯವರೆಗೂ ಅವಕಾಶವಿದೆ. 2017-18 ಸಾಲಿನ ಹನ್ನೊಂದನೆ ತರಗತಿಯ ಪ್ರವೇಶಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದು ಸಿಬಿಎಸ್ಇ ಹತ್ತನೇ ತರಗತಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಬಾಲಕಿಯರು ಅರ್ಜಿ ಸಲ್ಲಿಸಬಹುದಾಗಿದೆ.

ಆಯ್ಕೆ ವಿಧಾನ

ಬಾಲಕಿಯರನ್ನು ಹತ್ತನೇ ತರಗತಿ ಫಲಿತಾಂಶದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು. ಸಿಬಿಎಸ್ಇ ಅಧ್ಯಯನ ಮಾಡಿರುವವರು ಹತ್ತನೇ ತರಗತಿಯಲ್ಲಿ 8.5 ಸಿಜಿಪಿಎ ಅಂಕಗಳೊಂದಿಗೆ ತೇರ್ಗಡೆಹೊಂದಿರಬೇಕು. ಸ್ಟೇಟ್ ಸಿಲ್ಲಬಸ್ ಅಧ್ಯಯನ ಮಾಡಿರುವವರು ಕನಿಷ್ಟ ಶೇ.85 ಅಂಕಗಳಿಂದ ತೇರ್ಗಡೆ ಹೊಂದಿರಬೇಕು.

ಬಾಲಕಿಯರ ಸೈನಿಕ ವಸತಿ ಶಾಲೆ ಪ್ರವೇಶಾತಿ

ಅರ್ಜಿ ಸಲ್ಲಿಕೆ

ಅರ್ಜಿಗಳು ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯ ಕಛೇರಿಯಲ್ಲಿ ದಿನಾಂಕ ೦೨-೦೫-೨೦೧೭ ರಿಂದ ಲಭ್ಯವಿದ್ದು, ಡಿಡಿ ಮೂಲಕ ಪಡೆಯಬಹುದು. ಇಲ್ಲವಾದಲ್ಲಿ ಶಾಲೆಯ ಅಧಿಕೃತ ವೆಬ್ಸೈಟ್ ವಿಳಾಸದ ಮೂಲಕ ಡೌನ್ಲೋಡ್ ಮಾಡಿಕೊಳ್ಳತಕ್ಕದ್ದು.

ಅರ್ಜಿ ಶುಲ್ಕ

ಕಿತ್ತೂರು ಶಾಖೆಯ ಸಿಂಡಿಕೇಟ್/ಕೆನರಾ/ಎಸ್ ಬಿ ಐ/ಕೆವಿಜಿ ಬ್ಯಾಂಕಿನಲ್ಲಿ ಸಲ್ಲುವಂತೆ ರೂ.1000/- ದ ಡಿಡಿಯನ್ನು "Principal KRCRSSG Kittur" ಇವರ ಹೆಸರಿಗೆ ಪಡೆದು ಅರ್ಜಿಯನ್ನು ಪಡೆಯತಕ್ಕದ್ದು.

ಶಾಲೆಯ ಸೌಲಭ್ಯಗಳು

  • ನುರಿತ ಶಿಕ್ಷಕರಿಂದ ಬೋಧನೆ
  • ಹೊಸ ವಿದ್ಯಾರ್ಥಿಗಳಿಗಾಗಿ ಬ್ರಿಡ್ಜ್ ಕೋರ್ಸ್ ನೀಡಲಾಗುವುದು
  • ಪಠ್ಯಕ್ರಮದಂತೆ ಪ್ರತಿ ವಿಷಯಗಳಲ್ಲಿ ಯೂನಿಟ್ ಟೆಸ್ಟ್ ನಡೆಸಲಾಗುವುದು
  • ಡಿಜಿಟಲ್ ಲೈಬ್ರರಿ ವ್ಯವಸ್ಥೆ, ಉನ್ನತ ದರ್ಜೆಯ ಪ್ರಯೋಗಾಲಯ
  • ನೀಟ್, ಸಿಇಟಿ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ
  • ಉತ್ತಮ ವಸತಿ ಮತ್ತು ಊಟದೊಂದಿಗೆ ವೈದ್ಯಕೀಯ ಸೌಲಭ್ಯ
  • ಯಾವುದೇ ಡೊನೇಷನ್ ಇರುವುದಿಲ್ಲ

ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆ

ರಾಜಕೀಯದಲ್ಲಿ ಆಧುನಿಕ ಭರತ ಎಂದೇ ಕರೆಸಿಕೊಂಡಿದ್ದ ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಎಸ್ ಆರ್ ಕಂಠಿ ಅವರ ದೂರದೃಷ್ಟಿಯಿಂದ 1969 ರಲ್ಲಿ ಆರಂಭವಾದ ಈ ಶಾಲೆಯು ಬಾಲಕಿಯರಿಗಾಗಿ ಸೈನಿಕ ಶಿಕ್ಷಣ ನೀಡುವ ಏಕೈಕ ಶಾಲೆಯಾಗಿದೆ. ಬೆಳಗಾವಿಯ ಬೈಲಹೊಂಗಲದಲ್ಲಿ ಇರುವ ಈ ಶಾಲೆಯಲ್ಲಿ ಆರನೇ ತರಗತಿಯಿಂದ ಹನ್ನೆರಡನೇ ತರಗತಿಯವರೆಗೂ ಇಲ್ಲಿ ಶಿಕ್ಷಣಕ್ಕೆ ಅವಕಾಶವಿದ್ದು ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದೆ.

ಹೆಚ್ಚಿನ ಮಾಹಿತಿಗಾಗಿ www.kittursainikschool.org ಗಮನಿಸಿ

English summary
Kittur Rani Channamma Residential Sainik School For Girls admissions open for class XI science stream

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia