ಸೈನಿಕ ಶಾಲೆ ಕೊಡಗು: 6 ಮತ್ತು 9 ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

Posted By:

ವಿದ್ಯಾರ್ಥಿಗಳನ್ನು ರಾಷ್ಟ್ರೀಯ ರಕ್ಷಣಾ ಅಕಾಡೆಮಿ/ ಭಾರತೀಯ ನೌಕಾ ಅಕಾಡೆಮಿಗೆ ಸೇರಲು ಶೈಕ್ಷಣಿಕವಾಗಿ ಮತ್ತು ದೈಹಿಕವಾಗಿ ತರಬೇತುಗೊಳಿಸುವ ಉದ್ದೇಶದಿಂದ 2018-19ನೇ ಸಾಲಿನ 6 ಮತ್ತು 9ನೇ ತರಗತಿ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ.

ವಯೋಮಿತಿ

  • 6ನೇ ತರಗತಿ:02 ಜುಲೈ 2007 ರಿಂದ 01 ಜುಲೈ 2008 ರೊಳಗೆ ಅಭ್ಯರ್ಥಿಗಳು ಜನಿಸಿರಬೇಕು.
  • 9ನೇ ತರಗತಿ: 02 ಜುಲೈ 2004 ರಿಂದ 01 ಜುಲೈ 2005 ರೊಳಗೆ ಅಭ್ಯರ್ಥಿಗಳು ಜನಿಸಿರಬೇಕು, ಅಲ್ಲದೆ ಮಾನ್ಯತೆ ಪಡೆದ ಶಾಲೆಯಲ್ಲಿ 8ನೇ ತರಗತಿ ಅಭ್ಯಾಸ ಮಾಡುತ್ತಿರಬೇಕು.

ಪಠ್ಯಕ್ರಮ: 10+02 (ಸಿಬಿಎಸ್ಇ-ವಿಜ್ಞಾನ ವಿಭಾಗ)

ಕೊಡಗು ಸೈನಿಕ ಶಾಲೆ ಪ್ರವೇಶಾತಿ

ದಾಖಲಾತಿ ವಿಧಾನ

ಅಖಿಲ ಭಾರತಮಟ್ಟದ ಸೈನಿಕ ಶಾಲಾ ಪ್ರವೇಶ ಪರೀಕ್ಷೆ, ,ಮೌಖಿಕ ಸಂದರ್ಶನ ಮತ್ತು ವೈದ್ಯಕೀಯ ತಪಾಸಣೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

6 ಮತ್ತು 9ನೇ ತರಗತಿಯ ಪ್ರಶ್ನೆಪತ್ರಿಕೆಗಳು ಕ್ರಮವಾಗಿ 5ನೇ ಹಾಗೂ 8ನೇ ತರಗತಿಯ ಸಿಬಿಎಸ್ಇ ಪಠ್ಯಕ್ರಮ ಆಧಾರದಲ್ಲಿರುತ್ತದೆ.

ಪರೀಕ್ಷಾ ದಿನಾಂಕ: 07-01-2018

ಪರೀಕ್ಷಾ ಕೇಂದ್ರ

  • ಸೈನಿಕ ಶಾಲೆ ಕೊಡಗು- 6ನೇ ಹಾಗೂ 9ನೇ ತರಗತಿ
  • ಬೆಂಗಳೂರು: 6ನೇ ತರಗತಿ ಮಾತ್ರ

ಖಾಲಿ ಇರುವ ಅಂದಾಜು ಸೀಟುಗಳು: 6ನೇ ತರಗತಿಗೆ: 80-100, 9ನೇ ತರಗತಿಗೆ 10-20 ಸೀಟುಗಳು

ವಿದ್ಯಾರ್ಥಿವೇತನ

ಉತ್ತಮ ಶ್ರೇಣಿ/ಆದಾಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿವೇತನವನ್ನು ಹಾಗೂ ಪ.ಜಾ/ಪ.ಪಂ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು.

ಅರ್ಜಿ ಸಲ್ಲಿಕೆ

ಶಾಲೆಯ ವೆಬ್ಸೈಟ್ ವಿಳಾಸದಿಂದ ಅರ್ಜಿಯನ್ನು ಡೌನ್ಲೋಡ್ ಮಾಡಬಹುದು ಅಥವಾ ಶಾಲೆಯಿಂದ ಖುದ್ದಾಗಿ ಪಡೆಯಬಹುದು. ಅಕ್ಟೋಬರ್ 16 ರಿಂದ ನವೆಂಬರ್ 30 ರವರೆಗೂ ಅರ್ಜಿಗಳು ಲಭ್ಯವಿರುತ್ತದೆ.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ರಕ್ಷಣಾ ಇಲಾಖೆಯವರಿಗೆ ರೂ.500/-
  • ಪ.ಜಾ/ಪ.ಪಂ ವಿದ್ಯಾರ್ಥಿಗಳಿಗೆ ರೂ.350/-

ಹೆಚ್ಚಿನ ಮಾಹಿತಿಗಾಗಿ www.sainikschoolkodagu.edu.in ಗಮನಿಸಿ

English summary
Sainik school kodagu invites applications to the admissions to class 6 and 9 for the academic year 2018-19

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia