KSOU Admission 2020 : ವಿದ್ಯಾರ್ಥಿನಿಯರಿಗೆ ಶೇ.25ರಷ್ಟು ಶುಲ್ಕ ವಿನಾಯಿತಿ ನೀಡಲು ಮುಂದಾದ ಕೆಎಸ್ಒಯು

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪ್ರವೇಶಾತಿಯಲ್ಲಿ ವಿದ್ಯಾರ್ಥಿನಿಯರಿ ಶೇ.25ರಷ್ಟು ಶುಲ್ಕ ಕಡಿತ

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 2020-21ನೇ ಶೈಕ್ಷಣಿಕ ಸಾಲಿಗೆ ವಿವಿಧ ಕೋರ್ಸ್ ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ.

 

ಆಸಕ್ತ ವಿದ್ಯಾರ್ಥಿಗಳು ಪ್ರಥಮ ಬಿ.ಎ., ಬಿ.ಕಾಂ., ಬಿ.ಎಲ್.ಐ.ಎಸ್ಸಿ. ಹಾಗೂ ಪ್ರಥಮ ಎಂ.ಎ., (ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ಇತಿಹಾಸ, ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ಅಧ್ಯಯನ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಸಾರ್ವಜನಿಕ ಆಡಳಿತ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ) ಹಾಗೂ ಎಂ.ಕಾಂ., ಎಂ.ಎಲ್.ಐ.ಎಸ್ಸಿ. ಎಂ.ಎಸ್ಸಿ ವಿಷಯಗಳಿಗೆ ಪ್ರವೇಶ ಪಡೆಯಬಹುದಾಗಿದೆ.

ಈ ಭಾರಿ ವಿಶೇಷವಾಗಿ ಬಿ.ಪಿ.ಎಲ್. ಕಾರ್ಡ್ ಅನ್ನು ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ಶೇ. 25ರಷ್ಟು ವಿನಾಯಿತಿ ನೀಡಲಾಗಿದೆ. ವಿದ್ಯಾರ್ಥಿಗಳು ದಂಡರಹಿತವಾಗಿ ಪ್ರವೇಶ ಪಡೆಯಲು ಅಕ್ಟೋಬರ್ 10,2020 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ 08472-265868, ಪ್ರಾದೇಶಿಕ ನಿರ್ದೇಶಕರ ಮೊಬೈಲ್ ಸಂಖ್ಯೆ 9916783555 ಹಾಗೂ www.ksoumysuru.ac.in ವೆಬ್‌ಸೈಟ್ ಚೆಕ್ ಮಾಡಿಕೊಳ್ಳಬಹುದು.

For Quick Alerts
ALLOW NOTIFICATIONS  
For Daily Alerts

English summary
KSOU giving 25% discount to girl students who have BPL card for admissions.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X