ಕುವೆಂಪು ವಿವಿ ದೂರಶಿಕ್ಷಣ ಪ್ರವೇಶಾತಿ

Posted By:

ಕುವೆಂಪು ವಿವಿ ದೂರಶಿಕ್ಷಣ ನಿರ್ದೇಶನಾಲಯದ ಪ್ರವೇಶಾತಿಗೆ ನಿಗದಿ ಪಡಿಸಿದ್ದ ದಿನಾಂಕವನ್ನು ವಿಸ್ತರಿಸಿದೆ. 2016-17 ನೇ ಶೈಕ್ಷಣಿಕ ಸಾಲಿನ ವಿಶ್ವವಿದ್ಯಾಲಯದ ಭೌಗೋಳಿಕ ವ್ಯಾಪ್ತಿಯೊಳಗೆ ಪ್ರಥಮ ವರ್ಷದ ಆನ್-ಲೈನ್ ಪ್ರವೇಶಾತಿಗಾಗಿ ಅರ್ಜಿಗಳನ್ನು ಆಹ್ಚಾನಿಸಲಾಗಿತ್ತು.

ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಅವಕಾಶವಿದ್ದು ಆಸಕ್ತರು ದಿನಾಂಕ 28 -04 -2017 ರವರೆಗೂ ಅರ್ಜಿಗಳನ್ನು ಸಲ್ಲಿಸಹುದಾಗಿದೆ (ದಂಡ ಶುಲ್ಕ ಸಹಿತ).

ಪದವಿಗಳಾದ ಬಿಎ, ಬಿ.ಕಾಂ, ಬಿಬಿಎ, ಬಿಎಸ್ಸಿ. ಎಂಎ ಪದವಿಗಳಾದ ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ, ಉರ್ದು, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಸಾಸ್ತ್ರ, ಶಿಕ್ಷಣ, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ. ಎಂಎಸ್ಸಿ ಪದವಿಗಳಾದ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ.ಪಿಜಿಡಿಪ್ಲೊಮಾ ಕೋರ್ಸುಗಳಿಗೂ ಅವಕಾಶವಿದೆ.

ದೂರಶಿಕ್ಷಣ ಪ್ರವೇಶಾತಿ

ಅಧಿಸೂಚನೆಯಂತೆ ದಂಡ ಶುಲ್ಕ ರಹಿತವಾಗಿ ಅರ್ಜಿ ಸಲ್ಲಿಸಲು 28-02-2017 ಕೊನೆಯ ದಿನ

  • ದಂಡ ಶುಲ್ಕ ರೂ.200 ರಂತೆ ಅರ್ಜಿ ಸಲ್ಲಿಸಲು 31-03-2017
  • ದಂಡ ಶುಲ್ಕ ರೂ.400 ರಂತೆ ಅರ್ಜಿ ಸಲ್ಲಿಸಲು 28-04-2017

ಅರ್ಜಿ ಶುಲ್ಕ ದಿನಾಂಕ ವಿಸ್ತರಣೆ

ದ್ವಿತೀಯ ಮತ್ತು ತೃತೀಯ ವರ್ಷದ ವಿವಿಧ ಪದವಿಗಳಿಗೆ ಪ್ರವೇಶ ಪಡೆಯಲು ಕೊನೆಯ ದಿನಾಂಕವನ್ನು ರೂ.400 /- ದಂಡ ಶುಲ್ಕದೊಂದಿಗೆ 20 -03 -2017 ಕ್ಕೆ ನಿಗದಿಪಡಿಸಲಾಗಿತ್ತು. ಮಾನ್ಯ ಕುಲಸಚಿವರ ಅನುಮೋದನೆ ಮೇರೆಗೆ ದೂರ ಶಿಕ್ಷಣ ನಿರ್ದೇಶನಾಲಯದ ದ್ವಿತೀಯ ಹಾಗೂ ತೃತೀಯ ವರ್ಷದ ವಿವಿಧ ಪದವಿಗಳಿಗೆ ಪ್ರವೇಶ ಪಡೆಯುವ ಕೊನೆಯ ದಿನಾಂಕವನ್ನು ರೂ.400 /- ದಂಡ ಶುಲ್ಕದೊಂದಿಗೆ ದಿನಾಂಕ 10-04-2017 ರವೆರೆಗೆ ವಿಸ್ತರಿಸಲಾಗಿದೆ.

ಕುವೆಂಪು ವಿಶ್ವವಿದ್ಯಾನಿಲಯ 

ಕರ್ನಾಟಕ ರಾಜ್ಯದಲ್ಲಿರುವ ವಿಶ್ವವಿದ್ಯಾನಿಲಯಗಳಲ್ಲಿ ಒಂದು. ಇದರ ಧ್ಯೇಯವಾಕ್ಯ ವಿಶ್ವಮಾನವ ಪರಿಕಲ್ಪನೆಯನ್ನು ಒಳಗೊಂಡಿದೆ. ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಠಿ ಎಂಬ ಮಾತುಗಳೊಂದಿಗೆ ಲಾಂಛನವನ್ನು ಮಾಡಲಾಗಿದೆ.

ದೂರ ಶಿಕ್ಷಣ ಸೇವೆ

2003 ನೇ ಇಸವಿಯಿಂದ ದೂರು ಶಿಕ್ಷಣ ಸೇವೆ ಆರಂಭಿಸಿದ್ದು ಇಲ್ಲಿಯವರೆಗೂ ಸಾವಿರಾರು ವಿದ್ಯಾರ್ಥಿಗಳಿಗೆ ದೂರ ಶಿಕ್ಷಣ ಮೂಲಕ ಶಿಕ್ಷಣ ನೀಡುತ್ತಾ ಬಂದಿದೆ. ಪದವಿ, ಸ್ನಾತಕ ಪದವಿ ಮತ್ತು ಡಿಪ್ಲೊಮಾ ಕೋರ್ಸುಗಳಲ್ಲಿ ಶಿಕ್ಷಣವನ್ನು ಕಲ್ಪಿಸಲಾಗುತ್ತಿದೆ.

ಹೆಚ್ಚಿನ ಮಾಹಿತಿಗಾಗಿ www.kuvempuuniversitydde.org ಗಮನಿಸಿ

English summary
KUVEMPU UNIVERSITY DISTANCE EDUCATION ADMISSION DATE EXTENSION NOTIFICATION FOR THE YEAR 2016-2017

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia