ಕುವೆಂಪು ವಿಶ್ವವಿದ್ಯಾನಿಲಯ 2019-20ನೇ ಸಾಲಿನ ದೂರ ಶಿಕ್ಷಣ ಪ್ರವೇಶಾತಿಗೆ ಅರ್ಜಿ ಆಹ್ವಾನ

ಕುವೆಂಪು ವಿಶ್ವವಿದ್ಯಾನಿಲಯ ದೂರ ಶಿಕ್ಷಣ ನಿರ್ದೇಶನಾಲಯದ 2019-20ನೇ ಸಾಲಿನ ಸ್ನಾತಕ/ಸ್ನಾತಕೋತ್ತರ/ಪಿಜಿ ಡಿಪ್ಲೊಮಾ ಪದವಿಗಳ ಪ್ರವೇಶಕ್ಕಾಗಿ ನಿಗದಿತ ನಮೂನೆಯಲ್ಲಿ ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣ  ಪ್ರವೇಶಾತಿಗೆ ಅರ್ಜಿ ಆಹ್ವಾನ

 

ಕುವೆಂಪು ವಿಶ್ವವಿದ್ಯಾನಿಲಯದ ಭೌಗೋಳಿಕ ವ್ಯಾಪ್ತಿಯ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಪ್ರವೇಶ ಅರ್ಜಿಗಳನ್ನು ಆನ್-ಲೈನ್ ಮೂಲಕ ಮಾತ್ರ ಸಲ್ಲಿಸಬಹುದಾಗಿದೆ. ದೂರಶಿಕ್ಷಣದ ಮೂಲಕ ಲಭ್ಯವಿರುವ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ವಿವರ ಇಲ್ಲಿದೆ.

ಸ್ನಾತಕೋತ್ತರ ಪದವಿಗಳ ವಿಷಯ (ಎರಡು ವರ್ಷಗಳು):

ಎಂ.ಎ ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ, ಉರ್ದು, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಶಿಕ್ಷಣ, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ

ಎಂ.ಎಸ್ಸಿ ವಿಷಯಗಳು (ಎರಡು ವರ್ಷಗಳು):

ಗಣಿತಶಾಸ್ತ್ರ, ಭೌತಶಾಸ್ತ್ರ, ರಾಸಾಯನಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ,ಜೈವಿಕ ತಂತ್ರಜ್ಞಾನ,ಪರಿಸರ ವಿಜ್ಞಾನ

ಸ್ನಾತಕ ಪದವಿಗಳು (3 ವರ್ಷಗಳು):

ಬಿ.ಎ,ಬಿ.ಕಾಂ, ಬಿಬಿಎ, ಬಿ.ಎಸ್ಸಿ, ಬಿ.ಎಲ್‌.ಐ.ಎಸ್ಸಿ (1 ವರ್ಷ)

ಸ್ನಾತಕೋತ್ತರ ಡಿಪ್ಲೊಮಾ (1 ವರ್ಷ):

ಕನ್ನಡ ಕಂಪ್ಯೂಟರ್, ಕನ್ನಡ ಪತ್ರಿಕೋದ್ಯಮ, ಹ್ಯೂಮನ್ ರಿಸೋರ್ಸ್ ಮ್ಯಾನೇಜ್ಮೆಂಟ್, ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್, ಟೂರಿಸಂ ಮತ್ತು ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್, ಇಂಡಸ್ಟ್ರೀಯಲ್ ಸೇಫ್ಟಿ

ವಾಣಿಜ್ಯ ವಿಷಯ (ಎರಡು ವರ್ಷಗಳು):

ಎಂ.ಕಾಂ, ಎಂಬಿಎ, ಎಂ.ಎಲ್.ಐ.ಎಸ್ಸಿ (1 ವರ್ಷ)

ದೇಶ/ವಿದೇಶದ ಯಾವುದೇ ಭಾಗಗಳಿಂದ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಈ ಕೆಳಕಂಡ ಸ್ಥಳಗಳಲ್ಲಿ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

* ದೂರ ಶಿಕ್ಷಣ ನಿರ್ದೇಶನಾಲಯ ಕಛೇರಿ, ಕುವೆಂಪು ವಿಶ್ವವಿದ್ಯಾನಿಲಯ, ಜ್ಞಾನ ಸಹ್ಯಾದ್ರಿ, ಶಂಕರಘಟ್ಟ-577451, ಶಿವಮೊಗ್ಗ ಜಿಲ್ಲೆ

* ಕುವೆಂಪು ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕಛೇರಿ, ,ಸ್ನಾತಕೋತ್ತರ ಕೇಂದ್ರ, ಐ.ಡಿ.ಎಸ್.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣ, ಜ್ಯೋತಿ ನಗರ, ಚಿಕ್ಕಮಗಳೂರು-577102

* ಕುವೆಂಪು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ, ಕಡೂರು-577548

ಅರ್ಜಿ ಸಲ್ಲಿಸಲು ಕೊನೆಯ ದಿನ: 10/7/2019

ವಿಳಂಬ ಶುಲ್ಕ 200/-ರೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನ:10/8/2019

ವಿಳಂಬ ಶುಲ್ಕ 400/-ರೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನ: 31/8/2019

 

ಮಂಗಳೂರು ವಿಶ್ವವಿದ್ಯಾನಿಲಯ 2019-20ನೇ ಸಾಲಿನ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಅರ್ಜಿ ಆಹ್ವಾನ

ಅಧ್ಯಯನ ಸಾಮಾಗ್ರಿ, ಪ್ರಾಕ್ಟಿಕಲ್ ರೆಕಾರ್ಡ್ಸ್, ಅಸೈನ್ಮೆಂಟ್ ಪುಸ್ತಕಗಳನ್ನು ಸಂಬಂಧಪಟ್ಟ ಕೋರ್ಸ್ ಗೆ ಪ್ರವೇಶ ಪಡೆದ ದಿನವೇ ನಿರ್ದೇಶನಾಲಯದಿಂದ ವಿತರಿಸಲಾಗುವುದು. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: 08282-256450,256246 ಮತ್ತು ಅಭ್ಯರ್ಥಿಗಳು ಕುವೆಂಪು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ ಅಥವಾ ಇಲ್ಲಿ ಕ್ಲಿಕ್ ಮಾಡಿ ಮತ್ತು ಅಭ್ಯರ್ಥಿಗಳು ಪ್ರವೇಶಾತಿಯ ಪ್ರಕಟಣೆಯನ್ನು ವೀಕ್ಷಿಸಲು ಮುಂದೆ ನೋಡಿ.

ಕುವೆಂಪು ವಿಶ್ವವಿದ್ಯಾನಿಲಯ:

ಕರ್ನಾಟಕ ರಾಜ್ಯದಲ್ಲಿರುವ ವಿಶ್ವವಿದ್ಯಾನಿಲಯಗಳಲ್ಲಿ ಒಂದು. ಇದರ ಧ್ಯೇಯವಾಕ್ಯ ವಿಶ್ವಮಾನವ ಪರಿಕಲ್ಪನೆಯನ್ನು ಒಳಗೊಂಡಿದೆ. ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಠಿ ಎಂಬ ಮಾತುಗಳೊಂದಿಗೆ ಲಾಂಛನವನ್ನು ಮಾಡಲಾಗಿದೆ.

ದೂರ ಶಿಕ್ಷಣ ಸೇವೆ :

2003 ನೇ ಇಸವಿಯಿಂದ ದೂರು ಶಿಕ್ಷಣ ಸೇವೆ ಆರಂಭಿಸಿದ್ದು ಇಲ್ಲಿಯವರೆಗೂ ಸಾವಿರಾರು ವಿದ್ಯಾರ್ಥಿಗಳಿಗೆ ದೂರ ಶಿಕ್ಷಣ ಮೂಲಕ ಶಿಕ್ಷಣ ನೀಡುತ್ತಾ ಬಂದಿದೆ. ಪದವಿ, ಸ್ನಾತಕ ಪದವಿ ಮತ್ತು ಡಿಪ್ಲೊಮಾ ಕೋರ್ಸುಗಳಲ್ಲಿ ಶಿಕ್ಷಣವನ್ನು ಕಲ್ಪಿಸಲಾಗುತ್ತಿದೆ.

For Quick Alerts
ALLOW NOTIFICATIONS  
For Daily Alerts

English summary
Kuvempu university 2019-20 distance education admission started and inviting applications for various courses.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X