ಕುವೆಂಪು ವಿಶ್ವವಿದ್ಯಾನಿಲಯ ದೂರ ಶಿಕ್ಷಣ ಪ್ರವೇಶಾತಿ 2017-18

Posted By:

ಕುವೆಂಪು ವಿಶ್ವವಿದ್ಯಾನಿಲಯ ದೂರ ಶಿಕ್ಷಣ ನಿರ್ದೇಶನಾಲಯದ 2017-18ನೇ ಸಾಲಿನ ಸ್ನಾತಕ/ಸ್ನಾತಕೋತ್ತರ/ಪಿಜಿ ಡಿಪ್ಲೊಮಾ ಪದವಿಗಳ ಪ್ರವೇಶಕ್ಕಾಗಿ ನಿಗದಿತ ನಮೂನೆಯಲ್ಲಿ ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

CIPET-APDDRL ಉಚಿತ ವೃತ್ತಿಪರ ತರಬೇತಿ ಮತ್ತು ಉದ್ಯೋಗಾವಕಾಶ

ಕುವೆಂಪು ವಿಶ್ವವಿದ್ಯಾನಿಲಯದ ಭೌಗೋಳಿಕ ವ್ಯಾಪ್ತಿಯ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಪ್ರವೇಶ ಅರ್ಜಿಗಳನ್ನು ಆನ್-ಲೈನ್ ಮೂಲಕ ಮಾತ್ರ ಸಲ್ಲಿಸಬಹುದಾಗಿದೆ.

ಕುವೆಂಪು ವಿಶ್ವವಿದ್ಯಾನಿಲಯ ದೂರ ಶಿಕ್ಷಣ

ಸ್ನಾತಕೋತ್ತರ ಪದವಿಗಳ ವಿಷಯ (ಎರಡು ವರ್ಷಗಳು): ಎಂ.ಎ ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ, ಉರ್ದು, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಶಿಕ್ಷಣ, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ

ಎಂ,ಎಸ್ಸಿ ವಿಷಯಗಳು (ಎರಡು ವರ್ಷಗಳು): ಗಣಿತಶಾಸ್ತ್ರ, ಭೌತಶಾಸ್ತ್ರ, ರಾಸಾಯನಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ

ಸ್ನಾತಕ ಪದವಿಗಳು (3 ವರ್ಷಗಳು): ಬಿ.ಎ, ಬಿ.ಕಾಂ, ಬಿಬಿಎ, ಬಿಎಸ್ಸಿ.

ಸ್ನಾತಕೋತ್ತರ ಡಿಪ್ಲೊಮಾ (1 ವರ್ಷ): ಕನ್ನಡ ಕಂಪ್ಯೂಟರ್, ಕನ್ನಡ ಪತ್ರಿಕೋದ್ಯಮ, ಹ್ಯೂಮನ್ ರಿಸೋರ್ಸ್ ಮ್ಯಾನೇಜ್ಮೆಂಟ್, ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್.

ವಾಣಿಜ್ಯ ವಿಷಯ (ಎರಡು ವರ್ಷಗಳು): ಎಂ.ಕಾಂ, ಎಲ್ಎಲ್ಎಂ, ಎಂಬಿಎ

ಎಂಎಲ್ಐಸಿ (1 ವರ್ಷ)

ಬಿಎಲ್ಐಸಿ (1 ವರ್ಷ)

ದೇಶ/ವಿದೇಶದ ಯಾವುದೇ ಭಾಗಗಳಿಂದ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಈ ಕೆಳಕಂಡ ಸ್ಥಳಗಳಲ್ಲಿ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

  • ದೂರ ಶಿಕ್ಷಣ ನಿರ್ದೇಶನಾಲಯ ಕಛೇರಿ, ಕುವೆಂಪು ವಿಶ್ವವಿದ್ಯಾನಿಲಯ, ಜ್ಞಾನ ಸಹ್ಯಾದ್ರಿ, ಶಂಕರಘಟ್ಟ-577451, ಶಿವಮೊಗ್ಗ ಜಿಲ್ಲೆ
  • ಕುವೆಂಪು ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕಛೇರಿ, ,ಸ್ನಾತಕೋತ್ತರ ಕೇಂದ್ರ, ಐ.ಡಿ.ಎಸ್.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣ, ಜ್ಯೋತಿ ನಗರ, ಚಿಕ್ಕಮಗಳೂರು-577102
  • ಕುವೆಂಪು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ, ಕಡೂರು-577548

ಪ್ರವೇಶ ಅರ್ಜಿಗಳನ್ನು ಆನ್-ಲೈನ್ ಮೂಲಕ ಮಾತ್ರ ಸಲ್ಲಿಸಬಹುದಾಗಿದೆ.

ಅಧ್ಯಯನ ಸಾಮಾಗ್ರಿ, ಪ್ರಾಕ್ಟಿಕಲ್ ರೆಕಾರ್ಡ್ಸ್, ಅಸೈನ್ಮೆಂಟ್ ಪುಸ್ತಕಗಳನ್ನು ಸಂಬಂಧಪಟ್ಟ ಕೋರ್ಸ್ ಗೆ ಪ್ರವೇಶ ಪಡೆದ ದಿನವೇ ನಿರ್ದೇಶನಾಲಯದಿಂದ ವಿತರಿಸಲಾಗುವುದು.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: 08282-256450,256246

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Kuvempu University invites online applications for distance education admissions for 2017-18.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia