KVS Admission 2021-22: 1ನೇ ತರಗತಿ ಪ್ರವೇಶಾತಿಗೆ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

ಕೆಂದ್ರೀಯ ವಿದ್ಯಾಲಯದ ಒಂದನೇ ತರಗತಿ ಪ್ರವೇಶಕ್ಕೆ ಸಂಬಂಧಿಸಿದಂತೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 19,2021ರ ಸಂಜೆ 7 ಗಂಟೆಯೊಳಗೆ ಅರ್ಜಿಯನ್ನು ಸಲ್ಲಿಸಬಹುದು.

 
ಕೇಂದ್ರೀಯ ವಿದ್ಯಾಲಯಗಳಲ್ಲಿ 1ನೇ ತರಗತಿ ಪ್ರವೇಶಾತಿಗೆ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

ಪ್ರಮುಖ ದಿನಾಂಕಗಳು:

ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಏಪ್ರಿಲ್ 1,2021
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಏಪ್ರಿಲ್ 19,2021
ಅಭ್ಯರ್ಥಿಗಳ ಮೊದಲ ತಾತ್ಕಾಲಿಕ ಆಯ್ಕೆ ಪಟ್ಟಿ: ಏಪ್ರಿಲ್ 23,2021
ಅಭ್ಯರ್ಥಿಗಳ ಎರಡನೇ ಆಯ್ಕೆ ಪಟ್ಟಿ: ಏಪ್ರಿಲ್ 30,2021
ಅಭ್ಯರ್ಥಿಗಳು ಮೂರನೇ ಆಯ್ಕೆ ಪಟ್ಟಿ: ಮೇ 5,2021

ಅರ್ಜಿ ಸಲ್ಲಿಸಲು http://kvsangathan.nic.in/ ಕ್ಲಿಕ್ ಮಾಡಿ

ಕೇಂದ್ರಿಯ ವಿದ್ಯಾಲಯ:

1963ನೇ ಇಸವಿಯಲ್ಲಿ 'ಸೆಂಟ್ರಲ್ ಸ್ಕೂಲ್ಸ್' ಎಂಬ ಹೆಸರಿನಲ್ಲಿ ಪ್ರಾರಂಭವಾದ ಕೇಂದ್ರ ಸರ್ಕಾರದ ಈ ಶಾಲೆಗಳು ನಂತರದ ದಿನಗಳಲ್ಲಿ ಕೇಂದ್ರಿಯ ವಿದ್ಯಾಲಯ ಎಂಬ ಹೆಸರು ಪಡೆಯಿತು. ವಿದೇಶದಲ್ಲಿ ಮೂರು ಶಾಲೆ ಸೇರಿದಂತೆ ಭಾರತದಲ್ಲಿ ಸಾವಿರಕ್ಕೂ ಹೆಚ್ಚಿನ ಶಾಲೆಗಳಿವೆ. ಎಲ್ಲಾ ಶಾಲೆಗಳು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ)ಯಿಂದ ಗುರುತಿಸಲ್ಪಟ್ಟಿವೆ.ಸಾಮಾನ್ಯವಾಗಿ ದೂರದಲ್ಲಿ ನಿಯೋಜಿತರಾಗಿರುವ ಭಾರತೀಯ ರಕ್ಷಣಾ ಸೇವೆಯ ಸಿಬ್ಬಂದಿಗಳ ಮಕ್ಕಳಿಗೋಸ್ಕರ ಶಿಕ್ಷಣ ನೀಡುವುದು ಈ ಶಾಲೆಗಳ ಉದ್ದೇಶ. ಸೈನ್ಯವು ತನ್ನದೇ ಆದ ಸ್ವಂತ ಆರ್ಮಿ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಿದ ನಂತರ ಕೇಂದ್ರಿಯ ಶಾಲೆಗಳ ಸೇವೆಯನ್ನು ಎಲ್ಲಾ ಕೇಂದ್ರ ಸರ್ಕಾರದ ನೌಕರರಿಗೆ ವಿಸ್ತರಿಸಲಾಯಿತು. ಕೇಂದ್ರಿಯ ವಿದ್ಯಾಲಯ ಶಾಲೆಗಳು ಏಕರೂಪದ ಶಿಕ್ಷಣ ಪದ್ಧತಿ ಅನುಸರಿಸುತ್ತಿದ್ದು , ಎಲ್ಲ ಶಾಲೆಗಳು ಸಿ ಬಿ ಎಸ್ ಇ ಪಠ್ಯ ಕ್ರಮವನ್ನೇ ಅಳವಡಿಸಲಾಗಿದೆ. ಐದು ದಶಕಗಳಿಗೂ ಹೆಚ್ಚು ವರ್ಷಗಳಿಂದ ಶಿಕ್ಷಣ ನೀಡುತ್ತಿರುವ ಕೇಂದ್ರಿಯ ವಿದ್ಯಾಲಯಗಳು ಸರ್ಕಾರೀ ನೌಕರರ ಮಕ್ಕಳಿಗೆ ಶಿಕ್ಷಣದಲ್ಲಿ ಯಾವುದೇ ರೀತಿಯ ಅನಾನುಕೂಲತೆ ಆಗಬಾರದು ಎಂಬ ಉದ್ದೇಶವನ್ನು ಹೊಂದಿವೆ.ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಕೇಂದ್ರಿಯ ವಿದ್ಯಾಲಯ ಸಂಘಟನೆಯ ಅಧ್ಯಕ್ಷರಾಗಿರುತ್ತಾರೆ ಮತ್ತು ಉಪ ಅಧ್ಯಕ್ಷರಾಗಿ ರಾಜ್ಯ MHRD ಸಚಿವರು ಕಾರ್ಯ ನಿರ್ವಹಿಸುತ್ತಾರೆ.

 

ಕೇಂದ್ರಿಯ ವಿಶ್ವವಿದ್ಯಾಲಯದ ಬಗ್ಗೆ ಹೆಚ್ಚು ತಿಳಿಯಲು http://kvsangathan.nic.in/ ವೆಬ್ ಸೈಟ್ ಗಮನಿಸಿ.

For Quick Alerts
ALLOW NOTIFICATIONS  
For Daily Alerts

English summary
Kendriya vidyalayas admission to class 1 for academic year 2021-22 begins from today.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X