KVS Admission 2022 First Merit List : ಮೆರಿಟ್ ಪಟ್ಟಿ ವೀಕ್ಷಿಸುವುದು ಹೇಗೆ ಇಲ್ಲಿದೆ ಮಾಹಿತಿ

ಕೇಂದ್ರೀಯ ವಿದ್ಯಾಲಯ ಸಂಘಟನೆಯು (KVS) 1 ತರಗತಿ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಮೊದಲ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕೇಂದ್ರೀಯ ವಿದ್ಯಾಲಯದ ಅಧಿಕೃತ ವೆಬ್‌ಸೈಟ್ kvsangathan.nic.in ಗೆ ಭೇಟಿ ನೀಡಿ ಮೆರಿಟ್ ಪಟ್ಟಿಯನ್ನು ವೀಕ್ಷಿಸಬಹುದು.

ಕೇಂದ್ರೀಯ ವಿದ್ಯಾಲಯ ಸಂಘಟನೆ 1ನೇ ತರಗತಿ ಪ್ರವೇಶಾತಿಯ ಮೊದಲ ಮೆರಿಟ್ ಪಟ್ಟಿ ಪ್ರಕಟ

ಕೇಂದ್ರೀಯ ವಿದ್ಯಾಲಯ ಸಂಘಟನೆಯು ಮೇ 6, 2022 ರಂದು ಎರಡನೇ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಲಿದೆ ಮತ್ತು ಮೂರನೇ ಪಟ್ಟಿಯು ಮೇ 10 ರಂದು ಪ್ರಕಟ ಮಾಡಲಿದೆ. ಕಾಯ್ದಿರಿಸದ ಸೀಟುಗಳಿಗೆ ಆದ್ಯತೆಯ ಸೇವಾ ವರ್ಗದ ಪ್ರಕಾರ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯ ಘೋಷಣೆಯನ್ನು ಮೇ 6 ರಿಂದ ಮೇ 17, 2022 ರವರೆಗೆ ಮಾಡಲಾಗುತ್ತದೆ. ಕೇಂದ್ರೀಯ ವಿದ್ಯಾಲಯದಲ್ಲಿ 11ನೇ ತರಗತಿಯನ್ನು ಹೊರತುಪಡಿಸಿ ಎಲ್ಲಾ ತರಗತಿಗಳಿಗೆ ಪ್ರವೇಶ ಪಡೆಯಲು ಜೂನ್ 30,2022 ಕೊನೆಯ ದಿನವಾಗಿರುತ್ತದೆ.

ಕೇಂದ್ರೀಯ ವಿದ್ಯಾಲಯ ಸಂಘಟನೆ 1ನೇ ತರಗತಿ ಪ್ರವೇಶಾತಿಯ ಮೊದಲ ಮೆರಿಟ್ ಪಟ್ಟಿ ಪ್ರಕಟ

KVS 1ನೇ ತರಗತಿ ಪ್ರವೇಶಾತಿ 2022 : ಮೊದಲ ಮೆರಿಟ್ ಪಟ್ಟಿ ವೀಕ್ಷಿಸುವುದು ಹೇಗೆ ?

ಸ್ಟೆಪ್ 1 : ಮೊದಲು ಅಧಿಕೃತ ವೆಬ್‌ಸೈಟ್‌ kvsangathan.nic.in. ಗೆ ಭೇಟಿ ನೀಡಿ
ಸ್ಟೆಪ್ 2 : ಹೋಂ ಪೇಜ್ ನಲ್ಲಿ ಲಭ್ಯವಿರುವ "ಮೊದಲ ಮೆರಿಟ್ ಪಟ್ಟಿ" ಲಿಂಕ್ ಅನ್ನು ಕ್ಲಿಕ್ ಮಾಡಿ.
ಸ್ಟೆಪ್ 3 : ನಂತರ ನಿಮ್ಮ ರಾಜ್ಯ ಮತ್ತು ಕೇಂದ್ರೀಯ ವಿದ್ಯಾಲಯ ಶಾಖೆಯನ್ನು ಆಯ್ಕೆಮಾಡಿ.
ಸ್ಟೆಪ್ 4 : ಮೆರಿಟ್ ಪಟ್ಟಿಯು ಪರದೆಯ ಮೇಲೆ ಮೂಡುತ್ತದೆ.
ಸ್ಟೆಪ್ 5 : ಭವಿಷ್ಯದ ಉಲ್ಲೇಖಕ್ಕಾಗಿ ಪಟ್ಟಿಯನ್ನು ಪರಿಶೀಲಿಸಿ ಮತ್ತು ಡೌನ್‌ಲೋಡ್ ಮಾಡಿ.

KVS ಕ್ಲಾಸ್ 1 ಪ್ರವೇಶ 2022: ಅಗತ್ಯವಿರುವ ದಾಖಲೆಗಳ ಪಟ್ಟಿ :

ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರವೇಶ ಪ್ರಕ್ರಿಯೆಗೆ ಈ ಕೆಳಗಿನ ದಾಖಲೆಗಳು ಬೇಕಾಗುತ್ತವೆ:

* ಜನ್ಮ ಪ್ರಮಾಣಪತ್ರದ ರೂಪದಲ್ಲಿ ವಯಸ್ಸಿನ ಪುರಾವೆಯ ಪ್ರಮಾಣಪತ್ರ
* ನಿವಾಸದ ಪುರಾವೆ
* ಸಮವಸ್ತ್ರ ಧರಿಸಿದ ರಕ್ಷಣಾ ಉದ್ಯೋಗಿಗಳಿಗೆ ನಿವೃತ್ತಿಯ ಪ್ರಮಾಣಪತ್ರ
* ಸಂಸತ್ತಿನ ಸದಸ್ಯರು ಮತ್ತು PSU ಉದ್ಯೋಗಿಗಳ ಮೊಮ್ಮಕ್ಕಳಿಗೆ, ಮಗುವಿನ ಪೋಷಕರಲ್ಲಿ ಒಬ್ಬರೊಂದಿಗಿನ ಸಂಬಂಧದ ಪುರಾವೆ
* KVS ಉದ್ಯೋಗಿಯ ಮೊಮ್ಮಕ್ಕಳಿಗೆ, KVS ಉದ್ಯೋಗಿಯೊಂದಿಗೆ ಮಗುವಿನ ಪೋಷಕರ ಸಂಬಂಧದ ಪುರಾವೆ
* ಅಗತ್ಯವಿದ್ದಲ್ಲಿ ಜಾತಿ ಪ್ರಮಾಣಪತ್ರ
* ಅಗತ್ಯವಿದ್ದಲ್ಲಿ PwD ಪ್ರಮಾಣಪತ್ರಗಳು

ಅಭ್ಯರ್ಥಿಗಳು ನೇರವಾಗಿ ಮೆರಿಟ್ ಪಟ್ಟಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
KVS released first merit list for class 1 admission. Here is how to check and what are the documents required for admission.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X