ಮಂಗಳೂರು ವಿಶ್ವವಿದ್ಯಾಲಯ ದೂರಶಿಕ್ಷಣದ ಬಿ.ಎಡ್ ಕೋರ್ಸ್ ಪ್ರವೇಶಾತಿ

Posted By:

2017-18 ನೇ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಬಿ.ಎಡ್ (ದೂರಶಿಕ್ಷಣ) ಕೋರ್ಸಿಗೆ ಮಂಗಳೂರು ವಿಶ್ವವಿದ್ಯಾಲಯ ಅರ್ಜಿ ಆಹ್ವಾನಿಸಿದೆ.

ಮಂಗಳೂರು ವಿವಿಯ ಮುಕ್ತ ಹಾಗೂ ದೂರ ಕಲಿಕಾ ಕಾರ್ಯಕ್ರಮಗಳ ಅಡಿಯಲ್ಲಿ ಬ್ಯಾಚುಲರ್ ಆಫ್ ಎಜುಕೇಷನ್ (ಬಿ.ಎಡ್) ಕೋರ್ಸಿಗೆ ನಿಗದಿತ ನಮೂನೆಯಲ್ಲಿ ಪ್ರವೇಶಾತಿ ಆಹ್ಚಾನಿಸಲಾಗಿದೆ.

 ಬಿ.ಎಡ್ ಕೋರ್ಸ್ ಪ್ರವೇಶಾತಿ

ಅರ್ಜಿ ಸಲ್ಲಿಸಲು ಅರ್ಹತೆಗಳು

ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ.50 ಅಂಕಗಳೊಂದಿಗೆ ಸ್ನಾತಕ ಪದವಿ ಅಥವಾ ವಿಜ್ಞಾನ/ಸಮಾಜ ವಿಜ್ಞಾನ/ವಾಣಿಜ್ಯ/ಮಾನವಿಕ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಅಥವಾ ಕನಿಷ್ಠ ಶೇ.55 ಅಂಕಗಳೊಂದಿಗೆ ವಿಜ್ಞಾನ/ಗಣಿತ ವಿಶೇಷ ವಿಷಯದೊಂದಿಗೆ ಇಂಜಿನಿಯರಿಂಗ್/ಟೆಕ್ನಾಲಜಿಯಲ್ಲಿ ಸ್ನಾತಕ ಪದವಿ ಅಥವಾ ಇವುಗಳಿಗೆ ಸಮನಾದ ಪದವಿ ಪಡೆದಿರಬೇಕು.

ಅಭ್ಯರ್ಥಿಗಳು ಸೇವಾನಿರತ ಪ್ರಾಥಮಿಕ ಶಾಲಾ ಅಧ್ಯಾಪಕರಾಗಿದ್ದು, ಈ ಅರ್ಜಿ ಸಲ್ಲಿಸಬೇಕಾದ ದಿನಾಂಕಕ್ಕೆ ಮೊದಲು ಮೇಲೆ ಹೇಳಿದ ಪದವಿಗಳನ್ನು ಪಡೆದಿರಬೇಕು.

ಅಭ್ಯರ್ಥಿಯು ಕಡ್ಡಾಯವಾಗಿ ಎನ್.ಸಿ.ಇ.ಟಿ ಯಿಂದ ಮಾನ್ಯತೆ ಪಡೆದ ಟಿಸಿಎಚ್/ಡಿ.ಎಡ್/ಡಿಎಲ್ಇಡಿ/ಬಿಎಲ್ಇಡಿ ಶಿಕ್ಷಕ ಶಿಕ್ಷಣವನ್ನು ನೇರ ಶಿಕ್ಷಣ ಮಾದರಿಯಲ್ಲಿ ಪೂರ್ಣಗೊಳಿಸಿರಬೇಕು.

ಪ್ರವೇಶಾತಿಯ ಸಂದರ್ಭದಲ್ಲಿ ಅಭ್ಯರ್ಥಿಯು ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರಬೇಕು. ಅವರು ಬಿ.ಎಡ್ ಕೋರ್ಸಿಗೆ ಆಯ್ಕೆಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲಾ ಮುಖ್ಯಸ್ಥರಿಂದ ಸೇವಾ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸಬೇಕು.

ಅಭ್ಯರ್ಥಿಗಳು ತಮ್ಮ ಬಿ.ಎಡ್ ಪ್ರವೇಶಾತಿ ಅರ್ಜಿಗಳನ್ನು ಸೂಕ್ತ ರೀತಿಯಲ್ಲಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸತಕ್ಕದ್ದು.

ಪ.ಜಾ/ಪ.ಪಂ/ಪ್ರ-1/ಅಂಗವಿಕಲ ಅಭ್ಯರ್ಥಿಗಳಿಗೆ ಶೇ.೫ ಅಂಕಗಳ ರಿಯಾಯಿತಿ ಇದ್ದು ಉಳಿದ ವರ್ಗಗಳಿಗೆ ರಾಜ್ಯ ಸರ್ಕಾರದ ನಿಯಮಗು ಅನ್ವಯವಾಗುತ್ತವೆ.

ಸ್ನಾತಕ ಪದವಿ ಇಲ್ಲದೆ ಸ್ನಾತಕೋತ್ತರ ಪದವಿ ಉಳ್ಳವರು ಬಿ.ಎಡ್ ಪ್ರವೇಶಾತಿಗೆ ಅರ್ಹರಲ್ಲ.

ಆಯ್ಕೆ ಪ್ರಕ್ರಿಯೆ

ವಿಶ್ವವಿದ್ಯಾನಿಲಯವು ನಡೆಸುವ ಸಾಮಾನ್ಯ ಅರ್ಹತಾ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳ ಮೇಲೆ ಮೀಸಲಾತಿಯ ಸೀಟ್ ಮ್ಯಾಟ್ರಿಕ್ಸ್ ಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಶುಲ್ಕ

ಪ್ರವೇಶಾತಿ ಅರ್ಜಿಗಳನ್ನು ಮತ್ತು ಮಾಹಿತಿ ಕೈಪಿಡಿಯ ಶುಲ್ಕ ರೂ.1000/-

ಶುಲ್ಕವನ್ನು ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ' ಹಣಕಾಸು ಅಧಿಕಾರಿಗಳು, ಮಂಗಳೂರು ವಿವಿ, ಮಂಗಳೂರು' ಇವರ ಹೆಸರಿನಲ್ಲಿ ಪಡೆಯುವುದು.

ಅರ್ಜಿ ಸಲ್ಲಿಸುವ ವಿಳಾಸ

ಸಂಪೂರ್ಣವಾಗಿ ಭರ್ತಿಗೊಳಿಸಿದ ಅರ್ಜಿಗಳನ್ನು ನಿರ್ದೇಶಕರು, ದೂರಶಿಕ್ಷಣ ಕೇಂದ್ರ, ಮಂಗಳೂರು ವಿವಿ, ವಾಣಿಜ್ಯ ಸಂಕೀರ್ಣ, ಮಂಗಳಗಂಗೋತ್ರಿ, ಮಂಗಳೂರು-574199

ಪ್ರಮುಖ ದಿನಾಂಕಗಳು

  • ದಂಡ ಶುಲ್ಕವಿಲ್ಲದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-09-2017
  • ರೂ.500/- ದಂಡ ಶುಲ್ಕದೊಂದಿಗೆ ಸಲ್ಲಿಸಲು ಕೊನೆಯ ದಿನಾಂಕ: 16-10-2017 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:0824-2287824/2287400
ಹೆಚ್ಚಿನ ವಿವರಗಳಿಗಾಗಿ ವೆಬ್ಸೈಟ್ ವಿಳಾಸ www.mangaloreuniversity.ac.in ಗಮನಿಸಿ

English summary
Mangalore university distance education centre invites applications for the 2017-18 B.Ed course from the eligible candidates

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia