ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದಿಂದ ಪ್ರವೇಶ ಪ್ರಕಟಣೆ

Posted By:

ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದಿಂದ ಪ್ರವೇಶ ಪ್ರಕಟಣೆ. 2017-18 ನೇ ಸಾಲಿಗೆ ಸಾಮಾನ್ಯ ವಿಧಾನದ ಕೋರ್ಸುಗಳ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಗೂ ಫಲಿತಾಂಶ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಸೇರಿದಂತೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಆನ್ಲೈನ್ ಮೂಲಕ ಅರ್ಜಿ

ಮೆರಿಟ್ ಆಧಾರದಲ್ಲಿ ಪ್ರವೇಶಾತಿ

ಪೋಸ್ಟ್ ಗ್ರ್ಯಾಜುಯೆಟ್ ಕೋರ್ಸುಗಳು

ಉರ್ದು, ಇಂಗ್ಲಿಷ್, ಹಿಂದಿ, ಭಾಷಾಂತರ ಅಧ್ಯಯನ, ಅರೇಬಿಕ್, ಪರ್ಷಿಯನ್, ಮಹಿಳಾ ಅಧ್ಯಯನ, ಸಾರ್ವಜನಿಕ ಆಡಳಿತ, ರಾಜಕೀಯ ವಿಜ್ಞಾನ, ಸಾಮಾಜಿಕ ಕಾರ್ಯ, ಇಸ್ಲಾಮಿಕ್ ಅಧ್ಯಯನ, ಇತಿಹಾಸ, ಅರ್ಥಶಾಸ್ತ್ರ, ಸಮಾಜ ಶಾಸ್ತ್ರ, ಎಂ.ಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಎಂ.ಕಾಂ ಮತ್ತು ಎಂ.ಎಸ್ಸಿ (ಗಣಿತ)

ಅಂಡರ್ ಗ್ರ್ಯಾಜುಯೆಟ್ ಕೋರ್ಸುಗಳು

ಬಿ.ಎ, ಬಿ.ಕಾಂ , ಬಿ,ಎಸ್ಸಿ, (ದೈಹಿಕ ವಿಜ್ಞಾನ-ಎಂ.ಪಿ.ಎಸ್ಸಿ) ಮತ್ತು ಬಿ.ಎಸ್ಸಿ (ಜೀವ ವಿಜ್ಞಾನ -ಜೆಡ್ ಬಿಸಿ), ಅಂಡರ್ ಗ್ರ್ಯಾಜುಯೆಟ್ (ಬಿ.ಕಾಂ/ಬಿ.ಎಸ್ಸಿ).

ಪಾಲಿಟೆಕ್ನಿಕ್ ಕೋರ್ಸುಗಳಿಗೆ ಪ್ರವೇಶ ಪಡೆಯಲು ಮದರಸಗಳಿಂದ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬ್ರಿಜ್ ಕೋರ್ಸುಗಳು

ಪ್ಯಾರಾ ಮೆಡಿಕಲ್ ಡಿಪ್ಲೋಮಾ ಮತ್ತು ಸೆರ್ಟಿಫಿಕೇಟ್ಗಳು: ಡಯಾಲಿಸಿಸ್ ಟೆಕ್ನಿಷಿಯನ್ ಡಿಪ್ಲೋಮಾ, ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಷಿಯನ್ ಡಿಪ್ಲೋಮಾ, ಡಯಾಲಿಸಿಸ್ ಟೆಕ್ನಿಷಿಯನ್ ಸೆರ್ಟಿಫಿಕೇಟ್, ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಷಿಯನ್ ಸೆರ್ಟಿಫಿಕೇಟ್ ಮತ್ತು ಐಟಿಐ ವಿದ್ಯಾರ್ಥಿಗಳಿಗೆ, ಪಾಲಿಟೆಕ್ನಿಕ್ಗಳಿಗೆ ಲ್ಯಾಟರಲ್ ಪ್ರವೇಶ, ಉರ್ದು, ಹಿಂದಿ, ಅರೇಬಿಕ್, ಪರ್ಷಿಯನ್ ಮತ್ತು ಇಸ್ಲಾಮಿಕ್ ಅಧ್ಯಯನಗಳಿಗಾಗಿ ಅರೆಕಾಲಿಕ/ ಏಕಕಾಲಿಕ ಡಿಪ್ಲೋಮಾ ಕೋರ್ಸುಗಳು.

ಪ್ರವೇಶ ಪರೀಕ್ಷೆ ಆಧಾರದಲ್ಲಿ ಪ್ರವೇಶಾತಿ

ಪಿಹೆಚ್.ಡಿ ಕಾರ್ಯಕ್ರಮಗಳು: ಉರ್ದು, ಇಂಗ್ಲಿಷ್, ಹಿಂದಿ, ಭಾಷಾಂತರ ಅಧ್ಯಯನ, ಅರೇಬಿಕ್, ಪರ್ಷಿಯನ್, ಮಹಿಳಾ ಅಧ್ಯಯನ, ಸಾರ್ವಜನಿಕ ಆಢಳಿತ, ರಾಜಕೀಯ ವಿಜ್ಞಾನ, ಸಾಮಾಜಿಕ ಕಾರ್ಯ, ಇಸ್ಲಾಮಿಕ್ ಅಧ್ಯಯನ, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಶಿಕ್ಷಣ, ನಿರ್ವಹಣೆ, ವಾಣಿಜ್ಯ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಗಣಕಯಂತ್ರ ವಿಜ್ಞಾನ, ಗಣಿತ ಮತ್ತು ಪ್ರಾಣಿಶಾಸ್ತ್ರ.
ಎಂಫಿಲ್ ಕಾರ್ಯಕ್ರಮಗಳು: ಉರ್ದು, ಇಂಗ್ಲಿಷ್, ಪರ್ಷಿಯನ್, ಮಹಿಳಾ ಅಧ್ಯಯನ, ಸಾರ್ವಜನಿಕ ಆಢಳಿತ, ಶಿಕ್ಷಣ ಮತ್ತು ನಿರ್ವಹಣೆ.
ಪಿಜಿ ಕಾರ್ಯಕ್ರಮಗಳು: ಎಂಬಿಎ, ಎಂಸಿಎ, ಎಂಟೆಕ್(ಕಂಪ್ಯೂಟರ್ ಸೈನ್ಸ್) ಮತ್ತು ಎಂ.ಎಡ್.
ಯುಜಿ ಕಾರ್ಯಕ್ರಮಗಳು: ಬಿ.ಎಡ್ ಮತ್ತು ಬಿ.ಟೆಕ್ (ಕಂಪ್ಯೂಟರ್ ಸೈನ್ಸ್)
ವೃತ್ತಿಪರ ಡಿಪ್ಲೊಮಾಗಳು: ಎಲಿಮೆಂಟರಿ ಎಜುಕೇಶನ್ ಡಿಪ್ಲೋಮ, ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮ, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಡಿಪ್ಲೋಮ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ಡಿಪ್ಲೋಮ ಮತ್ತು ಮಾಹಿತಿ ತಂತ್ರಜ್ಞಾನ ಡಿಪ್ಲೋಮ.

ಸೂಚನೆ

1. ಎಲ್ಲಾ ಅರ್ಜಿದಾರರು ತಮ್ಮ 10 ನೇ/12 ನೇ/ ಪದವಿ ಹಂತದಲ್ಲಿ ಉರ್ದು ಭಾಷೆಯನ್ನು ಒಂದು ವಿಷಯ/ ಭಾಷೆ/ ಮಾಧ್ಯಮವನ್ನಾಗಿ ಪಡೆದು ಉತ್ತೀರ್ಣರಾಗಿರತಕ್ಕದ್ದು, ಎಲ್ಲಾ ಕಾರ್ಯಕ್ರಮಗಳನ್ನು ಉರ್ದು ಮಾಧ್ಯಮದಲ್ಲಿಯೇ ನೀಡಲಾಗುತ್ತದೆ.
2. ನಿರ್ದಿಷ್ಟವಾಗಿ ಉಲ್ಲೇಕಿಸದೆ ಇದ್ದಲ್ಲಿ ಎಲ್ಲಾ ಕಾರ್ಯಕ್ರಮಗಳಿಗೆ ಎಂಎಎನ್ಯು ವಿಶ್ವವಿದ್ಯಾಲಯದ ಹೈದರಾಬಾದ್ ಪ್ರಧಾನ ಕಚೇರಿಯಲ್ಲಿಯೇ ಪ್ರವೇಶ ನೀಡಲಾಗುತ್ತದೆ.
3. ಲಖ್ನೌ ದಲ್ಲಿರುವ ಸ್ಯಾಟೆಲೈಟ್ ಕ್ಯಾಂಪಸ್ನಲ್ಲಿಯೂ ಕೂಡ ಉರ್ದು, ಪರ್ಷಿಯನ್, ಇಂಗ್ಲಿಷ್ ಮತ್ತು ಅರೇಬಿಕ್ ವಿಷಯಗಳಲ್ಲಿ ಪಿಜಿ ಮತ್ತು ಪಿಹೆಚ್.ಡಿ ಕಾರ್ಯಕ್ರಮಗಳಿಗೆ ಪ್ರವೇಶ ನೀಡಲಾಗುತ್ತದೆ.
4. ಶ್ರೀನಗರ (ಜಮ್ಮು-ಕಾಶ್ಮೀರ)ದಲ್ಲಿರುವ ಸ್ಯಾಟೆಲೈಟ್ ಕ್ಯಾಂಪಸ್ನಲ್ಲಿಯೂ ಇಸ್ಲಾಮಿಕ್ ಅಧ್ಯಯನ, ಅರ್ಥಶಾಸ್ತ್ರ, ಉರ್ದು, ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಪಿಜಿ ಮತ್ತು ಪಿಹೆಚ್.ಡಿ ಕಾರ್ಯಕ್ರಮಗಳಿಗೆ ಪ್ರವೇಶ ನೀಡಲಾಗುತ್ತದೆ.
5. ಭೋಪಾಲ್, ಶ್ರೀನಗರ ಮತ್ತು ದರ್ಭಾಂಗ್, ಬಿಹಾರಗಳಲ್ಲಿರುವ ಸಿಟಿಇಗಳಲ್ಲಿ ಕೂಡ ಎಂ.ಎಡ್ ಮತ್ತು ಪಿಹೆಚ್.ಡಿ ಕಾರ್ಯಕ್ರಮಗಳಿಗೆ ಪ್ರವೇಶ ನೀಡಲಾಗುತ್ತದೆ.
6 .ಶ್ರೀನಗರ, ದರ್ಭಾಂಗ್, ಭೋಪಾಲ್, ಅಸನ್ಸೋಲ್, ಔರಂಗಾಬಾದ್, ಸಂಭಲ್, ನೂಹ್, ಮತ್ತು ಕರ್ನಾಟಕದಲ್ಲಿಯೂ ಸಿಇಟಿಗಳಲ್ಲಿ ಕೂಡ ಬಿ.ಎಡ್ ಕಾರ್ಯಕ್ರಮಕ್ಕೆ ಪ್ರವೇಶ ನೀಡಲಾಗುತ್ತದೆ.
7. ಕರ್ನಾಟಕದ ಬೆಂಗಳೂರು ಮತ್ತು ಬಿಹಾರದ ದರ್ಭಾಂಗ್ ಗಳ, ಪಾಲಿಟೆಕ್ನಿಕ್ ಗಳಲ್ಲಿಯೂ ಕೂಡ ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮ, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ಕಾರ್ಯಕ್ರಮಗಳಿಗೆ ಪ್ರವೇಶ ನೀಡಲಾಗುತ್ತದೆ.
ಅರೆಕಾಲಿಕ/ಏಕಕಾಲಿಕ ಕಾರ್ಯಕ್ರಮಗಳ ವಿವರಗಳಿಗಾಗಿ ಅಥವಾ ಇನ್ನಿತರ ಹೆಚ್ಚಿನ ಮಾಹಿತಿಗಾಗಿ http://www.manuu.ac.in/

ಅರ್ಜಿ ಸಲ್ಲಿಸುವ ವಿಧಾನ

ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಮಾತ್ರ ಅವಕಾಶ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

ಎಲ್ಲಾ ಪಿಹೆಚ್.ಡಿ/ಎಂ.ಫಿಲ್, ಬಿಟೆಕ್/ಎಂ.ಟೆಕ್/ಎಂಸಿಎ/ಎಂಬಿಎ/ಡಿಇಎಲ್ಎಡ್/ಬಿಎಡ್/ಎಂಎಡ್, ಪಾಲಿಟೆಕ್ನಿಕ್ ಕಾರ್ಯಕ್ರಮಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05 -05-2017
ಎಲ್ಲಾ ಮೆರಿಟ್ ಆಧಾರಿತ ಯುಜಿ/ಪಿಜಿ/ಪ್ಯಾರಾ ಮೆಡಿಕಲ್ ಕಾರ್ಯಕ್ರಮಗಳು/ ಬ್ರಿಜ್ ಕೋರ್ಸುಗಳ ಪ್ರವೇಶ ಮತ್ತು ಲ್ಯಾಟರಲ್ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 09 -05 -2017

ಹೆಚ್ಚಿನ ಮಾಹಿತಿಗಾಗಿ http://www.manuu.ac.in/ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ.

English summary
Maulana Azad National Urdu University Admissions for the academic year 2017-18

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia