ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ವಿದ್ಯಾಲಯದಲ್ಲಿ ಡಿಪ್ಲೊಮಾಗೆ ಅವಕಾಶ

Posted By:

ಭಾರತ ಸರ್ಕಾರ ಆಯುಷ್ ಸಚಿವಾಲಯದ ಅಡಿಯಲ್ಲಿನ ಸ್ವಾಯುತ್ತ ಸಂಸ್ಥೆಯಾದ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ವಿದ್ಯಾಲಯದಲ್ಲಿ ಡಿಪ್ಲೊಮಾ ಇನ್ ಯೋಗ ಸೈನ್ಸ್ ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಒಂದು ವರ್ಷ ಅವಧಿಯ (02 ಸೆಮಿಸ್ಟರ್) ಡಿಪ್ಲೊಮಾ ಇನ್ ಯೋಗ ಸೈನ್ಸ್ ಕೋರ್ಸ್ ಗೆ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದ್ದು, ಆಗಸ್ಟ್ 04 ರೊಳಗೆ ಅರ್ಜಿಗಳನ್ನು ಸಲ್ಲಿಸತಕ್ಕದ್ದು.

ಅರ್ಹತೆ

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು ಮತ್ತು ಸರಾಸರಿ ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು. (ಎಸ್.ಸಿ/ಎಸ್.ಟಿ/ಒಬಿಸಿ ಅಭ್ಯರ್ಥಿಗಳಿಗೆ ಶೇ.45)

ವಯೋಮಿತಿ

ದಿನಾಂಕ 01-08-2017 ಕ್ಕೆ 30 ವರ್ಷಕ್ಕಿಂತ ಕಡಿಮೆ ಆಗಿರಬೇಕು. (ಸೂಕ್ತ ವಿಧಾನದಲ್ಲಿ ಡೆಪ್ಯುಟೇಶನ್ ಮೇರೆಗೆ ಕೋರ್ಸ್ ಸೇರ ಬಯಸುವವರಿಗೆ ಹತ್ತು ವರ್ಷಗಳ ಸಡಿಲಿಕೆ ಇರಲಿದೆ)

ಸೀಟುಗಳ ಸಂಖ್ಯೆ

120 (ಸಾಮಾನ್ಯ:60, ಒಬಿಸಿ: 33, ಎಸ್.ಸಿ: 18, ಎಸ್.ಟಿ: 09) ಅಷ್ಟೇ ಅಲ್ಲದೇ ಅಂಡಮಾನ್ ನಿಕೋಬಾರ್ ದ್ವೀಪಗಳು/ಲಕ್ಷ ದ್ವೀಪ(02), ಈಶಾನ್ಯ ರಾಜ್ಯಗಳು(02), ಯುದ್ಧದಲ್ಲಿ ಹುತಾತ್ಮರು (02), ಕ್ರೀಡಾ/ಎನ್ಸಿಸಿ/ಎನ್ಎಸ್ಎಸ್ (02), ವಿದೇಶಿ ವಿದ್ಯಾರ್ಥಿ (02), ಜಮ್ಮು ಮತ್ತು ಕಾಶ್ಮೀರ(01) ಗಳಿಗೆ ಸಂಬಂಧಿತ ಹಾಗೂ ಎಂಡಿಎನ್ಐವೈ ಸಿಬ್ಬಂಧಿ ಕೋಟಾ(01) ಅಡಿಯಲ್ಲಿನ ವಿದ್ಯಾರ್ಥಿಗಳಿಗೆ ವಿಶೇಷ ಪ್ರವರ್ಗದ ಸೀಟುಗಳು ಲಭ್ಯವಿರುತ್ತದೆ. ಭಾರತ ಸರ್ಕಾರದ ನಿಯಮಗಳನ್ವಯ ಮೀಸಲಾತಿ ಅನ್ವಯಯಿಸುತ್ತದೆ.

ಆಯ್ಕೆ

ಅರ್ಹತಾ ಪದವಿ ಮೇಲೆ ಮೆರಿಟ್ ಕಂ ಮೀಸಲಾತಿ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.

ಫೆಲೋಶಿಪ್, ಹಾಸ್ಟೆಲ್ ರಿಯಾಯ್ತಿ ಮತ್ತು ನಗದು ಪುರಸ್ಕಾರ

ಫೆಲೋಶಿಪ್ (04), ಹಾಸ್ಟೆಲ್ ರಿಯಾಯ್ತಿ (ಗರಿಷ್ಠ 24) ಮತ್ತು ನಗದು ಪುರಸ್ಕಾರ (12 ಪ್ರತಿಭಾವಂತ ವಿದ್ಯಾರ್ಥಿಗಳಿಗೆ) ಲಭ್ಯವಿರುತ್ತದೆ.

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಶುಲ್ಕ

  • ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಪ್ ಯೋಗ ಇವರ ಹೆಸರಿಗೆ ನವದೆಹಲಿಯಲ್ಲಿ ಸಂದಾಯವಾಗಬಲ್ಲ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ನಿಂದ ಪಡೆಯಲಾದ ರೂ.500/- ಮೌಲ್ಯದ ಡಿಡಿ/ನಗದು ಮೊತ್ತವನ್ನು 18-07-2017 ರಿಂದ ಯಾವುದೇ ಕೆಲಸದ ದಿನದಂದು ಬೆಳಗ್ಗೆ 10.00 ರಿಂದ ಸಂಜೆ 5.00 ಗಂಟೆಯೊಳಗೆ ಕಚೇರಿಗೆ ಸಲ್ಲಿಸಿ ಅರ್ಜಿ ಫಾರಂ ಮತ್ತು ಅಡ್ಮಿಷನ್ ಬ್ರೋಷರ್ಗಳನ್ನು ಪಡೆದುಕೊಳ್ಳಬಹುದು.
  • ರೂ.600/- ಡಿಡಿ ಮುಖಾಂತರ ಅಂಚೆ ಮೂಲಕವು ಪಡೆಯಬಹುದು.
  • ರೂ.500/- ಡಿಡಿ ಸಲ್ಲಿಸಿ ಆಬ್-ಲೈನ್ ಮೂಲಕವು ಅರ್ಜಿ ಮತ್ತು ಬ್ರೋಷರ್ ಪಡೆಯಬಹುದು.

ಅರ್ಜಿ ಸಲ್ಲಿಕೆ

ಸಂಪೂರ್ಣ ಭರ್ತಿ ಮಾಡಿದ ಅರ್ಜಿಗಳನ್ನು ಎಂಡಿಎನ್ಐವೈ ಕಚೇರಿಗೆ ತಲುಪಿಸುವ ಅಂತಿಮ ದಿನಾಂಕ 04-08-2017 (ಶುಕ್ರವಾರ) ಆಗಿರುತ್ತದೆ.
ಅಂಡಮಾನ್ ನಿಕೋಬಾರ್/ಲಕ್ಷ ದ್ವೀಪ ಹಾಗೂ ಈಶಾನ್ಯ ರಾಜ್ಯಗಳ ಅಭ್ಯರ್ಥಿಗಳಿಗೆ ಅಂತಿಮ ದಿನಾಂಕ 11-08-2017

ಹೆಚ್ಚಿನ ವಿವರಗಳಿಗಾಗಿ ವೆಬ್ಸೈಟ್ ವಿಳಾಸ www.yogamdniy.nic.in ಗಮನಿಸಿ

English summary
Morarji Desai National Institute of Yoga (MDNIY) invites applications for admission to Diploma in Yoga Science (DYSc.)for Graduates, a regular, non -residential course of one year duration (02 Semesters) for the academic year 2017-18.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia