National Sports Day : ಸ್ಪೋರ್ಟ್ಸ್ ಅಂದ್ರೆ ಬರೀ ಆಟಗಾರರು ಮಾತ್ರವಲ್ಲ... ಬೇರೆ ಯಾವೆಲ್ಲಾ ಹುದ್ದೆಗಳಿವೆ ಗೊತ್ತಾ?

By Kavya

ಪ್ರತೀ ವರ್ಷ ಆಗಸ್ಟ್‌ 29 ರಂದು ದೇಶದಾದ್ಯಂತ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಗುತ್ತದೆ. ಹಾಕಿ ಆಟಗಾರ ಧ್ಯಾನ್ ಚಂದ್ ಅವರ ಹುಟ್ಟುಹಬ್ಬದ ದಿನದ ಸ್ಮರಣಾರ್ಥವಾಗಿ ಈ ದಿನವನ್ನ ನ್ಯಾಷನಲ್ ಸ್ಪೋರ್ಟ್ಸ್ ಡೇ ಎಂದು ಆಚರಿಸಲಾಗುತ್ತದೆ.

ಸ್ಪೋರ್ಟ್ಸ್ ಅಂದ್ರೆ ಬರೀ ಆಟಗಾರರು ಮಾತ್ರವಲ್ಲ... ಬೇರೆ ಯಾವೆಲ್ಲಾ ಹುದ್ದೆಗಳಿವೆ ಗೊತ್ತಾ?

 

ಈಗಂತೂ ಸ್ಪೋರ್ಟ್ಸ್ ತಾರೆಯರು ಮಿಂಚುತ್ತಿದ್ದಾರೆ. ಯುವಜನತೆಯ ರೋಲ್ ಮಾಡೆಲ್ ಕೂಡಾ ಆಗಿದ್ದಾರೆ. ಹಾಗಾಗಿ ಹಲವಾರು ಮಂದಿ ಸ್ಪೋರ್ಟ್ಸ್ ಇಂಡಸ್ಟ್ರಿಯಲ್ಲಿ ಕೆರಿಯರ್ ರೂಪಿಸಿಕೊಳ್ಳಲು ಕೂಡಾ ಮುಂದಾಗಿದ್ದಾರೆ. ಬರೀ ಕ್ರೀಡಾ ಪಟುವಾಗಿ ಮಾತ್ರವಲ್ಲದೇ ಈ ಇಂಡಸ್ಟ್ರಿಯಲ್ಲಿ ನಿಮಗೆ ಆಸಕ್ತಿ ಇದ್ದರೆ, ಬೇರೆ ಯಾವೆಲ್ಲಾ ಹುದ್ದೆಯನ್ನ ಅಂಲಕರಿಸುವುದರ ಮೂಲಕ ನಿಮ್ಮ ಕೆರಿಯರ್ ರೂಪಿಸಿಕೊಳ್ಳಬಹುದು ಎಂಬ ಮಾಹಿತಿ ಇದೀಗ ಕೆರಿಯರ್ ಇಂಡಿಯಾ ನಿಮಗೆ ನೀಡುತ್ತಿದೆ ಮುಂದಕ್ಕೆ ಓದಿ.

ಸ್ಪೋರ್ಟ್ಸ್ ಇಂಸ್ಟ್ರಕ್ಟರ್:

ಸ್ಪೋರ್ಟ್ಸ್ ಇಂಸ್ಟ್ರಕ್ಟರ್:

ಸ್ಪೋರ್ಟ್ಸ್ ಇಂಸ್ಟ್ರಕ್ಟರ್ ಅವರ ಜಾಬ್ ಪ್ರೊಫೈಲ್ ಏನೆಂದ್ರೆ ಅಭ್ಯರ್ಥಿಗಳಿಗೆ ಅಗತ್ಯವಿರುವ ಸ್ಕಿಲ್ ಬಗ್ಗೆ ತಿಳಿಸಿಕೊಡುವುದು. ಅಭ್ಯರ್ಥಿಗಳ ದೈಹಿಕ ಶಕ್ತಿ ಹೆಚ್ಚಿಸಲು, ಅವರಿಗೆ ಜಿಮ್‌ನಾಸ್ಟಿಕ್ ಸೇರಿದಂತೆ ಹಲವಾರು ದೈಹಿಕ ವ್ಯಾಯಾಮಗಳನ್ನ ಕಲಿಸಿಕೊಡಲಾಗುತ್ತದೆ. ಅಷ್ಟೇ ಅಲ್ಲ ಇವರು ಟೂರ್ನಮೆಂಟ್ಸ್ ಹಾಗೂ ಸ್ಪೋರ್ಟ್ಸ್ ಗೆ ಸಂಬಂಧಪಟ್ಟ ಈವೆಂಟ್ ಗಳನ್ನ ಆಯೋಜಿಸುತ್ತಾರೆ.

ಕೋಚ್:

ಕೋಚ್:

ಟ್ಯಾಲೆಂಟೆಡ್ ಪ್ಲೇಯರ್ ಯಾರು ಎಂದು ಗುರುತಿಸುವುದು ಕೋಚ್ ಮಾಡಬೇಕಾದ ಮೊದಲ ಕೆಲಸ. ಅಭ್ಯರ್ಥಿಗಳಿಗೆ ಗೇಮ್ ಬಗ್ಗೆ ಕಾಂಫಿಡೆಂಟ್ ಬರುವ ತನಕ ಅವರಿಗೆ ಕೋಚಿಂಗ್ ನೀಡುವ ಜವಾಬ್ದಾರಿ ಕೋಚ್ ಅವರದು. ಇವರು ಕ್ರೀಡಾಪಟುಗಳನ್ನ ಅತೀ ಹತ್ತಿರದಿಂದ ಗಮನಿಸುತ್ತಿರಬೇಕು ಹಾಗೂ ತಪ್ಪುಗಳಾದಲ್ಲಿ ಕೂಡಲೇ ಸರಿಪಡಿಸುವ ಹೊಣೆ ಇವರದು. ಸ್ಪೋರ್ಟ್ಸ್ ಗೆ ಸಂಬಂಧಪಟ್ಟ ಈವೆಂಟ್ ಗಳಲ್ಲಿ ಇವರು ಕ್ರೀಡಾಪಟುಗಲಿಗೆ ಗೈಡ್ ಆಗಿರಬೇಕು ಹಾಗೂ ಅವರನ್ನು ಹುರಿದುಂಬಿಸಬೇಕು.

ಅಂಪೈರ್ / ರೆಫ್ರಿ:
 

ಅಂಪೈರ್ / ರೆಫ್ರಿ:

ಕೂಡಾ ಪ್ರತಿಯೊಂದು ಸ್ಪೋರ್ಟ್ಸ್ ನಲ್ಲಿ ಇವರ ರೋಲ್ ಕೂಡಾ ತುಂಬಾ ಮುಖ್ಯ. ಹೌದು ಯಾವುದಾದ್ರೂ ಸ್ಪೋರ್ಟ್ಸ್ ನಡೆಯುತ್ತಿದ್ದರೆ, ಅಲ್ಲಿ ಇವರು ಇರಲೇ ಬೇಕು. ಕ್ರಮ ಪ್ರಕಾರವಾಗಿ ರೂಲ್ಸ್ ಗೆ ಅನುಗುಣವಾಗಿ ಸ್ಪೋರ್ಟ್ ನಡೆಯುವಂತೆ ಇವರು ನೋಡಿಕೊಳ್ಳುತ್ತಾರೆ. ಇವರ ತೀರ್ಮಾನದ ಮೇಲೆ ಯಾವ ತಂಡ ಜಯಗಳಿಸಿತು ಎಂಬ ಫಲಿತಾಂಶ ನೀಡಲಾಗುತ್ತದೆ. ಇನ್ನು ಸ್ಪೋರ್ಟ್ಸ್ ಗೆ ಸಂಬಂಧಪಟ್ಟಂತೆ ಕ್ರೀಡೆ, ಫೀಲ್ಡ್, ಟೈಮಿಂಗ್ಸ್ ಎಲ್ಲಾ ಸೆಟ್ ಮಾಡುವುದು ಇವರ ಕರ್ತವ್ಯವಾಗಿದೆ.

ಸ್ಪೋರ್ಟ್ಸ್ ಕ್ಲಬ್ ಮ್ಯಾನೇಜರ್:

ಸ್ಪೋರ್ಟ್ಸ್ ಕ್ಲಬ್ ಮ್ಯಾನೇಜರ್:

ಈ ಹುದ್ದೆ ನಿಭಾಯಿಸುವವರು ಬರೀ ಸ್ಪೋರ್ಟ್ಸ್ ಮಾತ್ರವಲ್ಲದೇ, ಅಡ್ಮಿನಿಸ್ಟ್ರೇಟೀವ್ ಡ್ಯೂಟಿಗಳನ್ನ ಕೂಡಾ ನೋಡಿಕೊಳ್ಳಬೇಕಾಗುತ್ತದೆ. ಅಡ್ಮಿನಿಸ್ಟ್ರೇಟಿವ್ ಡ್ಯೂಟೀಸ್ ಎಂದ್ರೆ ಸ್ಪೋರ್ಟ್ಸ್ ಫೆಸಿಲಿಟಿ ಬಗ್ಗೆ ಇವರು ಗಣನೆಗೆ ತೆಗೆದುಕೊಳ್ಳಬೇಕು. ಫಿಸಿಕಲ್ ಇಂಸ್ಟ್ರಕ್ಟರ್ ಮತ್ತು ಥೆರಪಿಸ್ಟ್ ಒಳಗೊಂಡ ಸ್ಟಾಫ್ ಸಪೋರ್ಟ್ ಸೇರಿದಂತೆ ಇವರು ಪ್ರತಿಯೊಬ್ಬ ಕ್ರೀಡಾ ಪಟು ಜತೆ ಟಚ್ ಅಲ್ಲಿ ಇರಬೇಕು.

ಸ್ಪೋರ್ಟ್ಸ್ ಜರ್ನಲಿಸ್ಟ್:

ಸ್ಪೋರ್ಟ್ಸ್ ಜರ್ನಲಿಸ್ಟ್:

ಮೀಡಿಯಾ ಕಂಪನಿಯಲ್ಲಿಯೂ ಸ್ಪೋರ್ಟ್ಸ್ ಗೆ ಸಂಬಂಧಪಟ್ಟಂತೆ ಹುದ್ದೆಗಳಿವೆ. ಈ ಹುದ್ದೆ, ಸ್ಪೋರ್ಟ್ಸ್ ಬಗ್ಗೆ ಫೀಚರ್ ರೈಟಿಂಗ್, ನ್ಯೂಸ್, ಕ್ರೀಡಾ ಪಟುಗಳ ಇಂಟರ್ವ್ಯೂ ಮಾಡುವುದು ಮುಂತಾದ ಡ್ಯೂಟಿಸ್ ಗಳನ್ನ ಒಳಗೊಂಡಿದೆ.

ಫೋಟೋ ಜರ್ನಲಿಸ್ಟ್:

ಫೋಟೋ ಜರ್ನಲಿಸ್ಟ್:

ಮೀಡಿಯಾ ಕಂಪನಿಗಳ ಜತೆ ಸ್ಪೋರ್ಟ್ಸ್ ಕಂಪನಿ ಫೋಟೋಗ್ರಾಫರ್ಸ್ ಗಳನ್ನ ಕೂಡಾ ನೇಮಕಮಾಡಿಕೊಳ್ಳುತ್ತದೆ. ಟೀಂ ಮತ್ತು ಮೀಡಿಯಾ ಕಂಪನಿಗಳಿಗೆ ಹೊಂದಿಕೊಂಡಂತೆ ಫೋಟೋ ಜರ್ನಲಿಸ್ಟ್ ಗಳ ವೇತನ ನಿಗಧಿ ಪಡಿಸಿರುತ್ತಾರೆ.

ಪಬ್ಲಿಕ್ ರಿಲೇಶನ್ ಮ್ಯಾನೇಜರ್:

ಪಬ್ಲಿಕ್ ರಿಲೇಶನ್ ಮ್ಯಾನೇಜರ್:

ಕ್ರೀಡಾಪಟುಗಳ ಇಮೇಜ್ ಕೆಡದಂತೆ ಹಾಗೂ ಅವರ ಕೇರ್ ತೆಗೆದುಕೊಳ್ಳುವುದು ಇವರ ಕೆಲಸವಾಗಿದೆ. ಟೀಂ ಗೆ ಪಬ್ಲಿಕ್ ರಿಲೇಶನ್ ಮ್ಯಾನೇಜರ್ ಆಗಿ ಆಯ್ಕೆಯಾದ್ರೆ ಅವರು ಆ ಟೀಂನ ಕೇರ್ ಟೇಕರ್ ಆಗಿರುತ್ತಾರೆ. ಫೇಸಿಲಿಟಿ ಸೇರಿದಂತೆ ಟೀಂಗೆ ಏನು ಬೇಕು ಏನು ಬೇಡ ಎಂಬುವುದನ್ನ ಇವರು ನಿರ್ಧರಿಸುತ್ತಾರೆ. ಇವಿಷ್ಟೇ ಅಲ್ಲದೇ ಫಿಸಿಕಲ್ ಥೆರಪಿಸ್ಟ್ ಹಾಗೂ ಸ್ಪೋರ್ಟ್ಸ ಸೈಕಾಲಾಜಿಸ್ಟ್ ಸೇರಿದಂತೆ ಇನ್ನೂ ಅನೇಕ ಹುದ್ದೆಗಳಲ್ಲಿ ನೀವು ಕೆರಿಯರ್ ರೂಪಿಸಿಕೊಳ್ಳಬಹುದು.

For Quick Alerts
ALLOW NOTIFICATIONS  
For Daily Alerts

English summary
National Sports Day, which is observed on August 29 every year, is celebrated across the country to commemorate the birth anniversary of the legendary hockey player Dhyan Chand. When sports players are hailed as heroes across the world, many youngsters consider this as their full-time career and start planning the same accordingly.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more