ಜವಹಾರ್ ನವೋದಯ ವಿದ್ಯಾಲಯ: ಅರ್ಜಿ ಸಲ್ಲಿಸಲು ಡಿಸೆಂಬರ್ 2 ಕೊನೆಯ ದಿನ

ನವೆಂಬರ್ 25 ರವರೆಗೂ ಇದ್ದ ಕೊನೆಯ ದಿನವನ್ನು ಡಿಸೆಂಬರ್ 2 ರವರೆಗೂ ವಿಸ್ತರಿಸಿದ್ದು, ಐದನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಜವಹಾರ್ ನವೋದಯ ವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಲು ಇನ್ನು ಮೂರು ದಿನ ಮಾತ್ರ ಕಾಲಾವಕಾಶವಿದೆ. ನವೆಂಬರ್ 25 ರವರೆಗೂ ಇದ್ದ ಕೊನೆಯ ದಿನವನ್ನು ಡಿಸೆಂಬರ್ 2 ರವರೆಗೂ ವಿಸ್ತರಿಸಿದ್ದು, ಐದನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಐಸಿಎಸ್ಇ ಅಂಕಮಿತಿ: 10ನೇ ತರಗತಿಗೆ ಶೇ.33, 12ನೇ ತರಗತಿಗೆ ಶೇ.35ಐಸಿಎಸ್ಇ ಅಂಕಮಿತಿ: 10ನೇ ತರಗತಿಗೆ ಶೇ.33, 12ನೇ ತರಗತಿಗೆ ಶೇ.35

ಐದನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಶಾಲಾ ಮುಖ್ಯೋಪಾಧ್ಯಾಯರಿಂದ ಭರ್ತಿ ಮಾಡಿದ ಅರ್ಜಿಗಳನ್ನು ಸಾಮಾನ್ಯ ಸೇವಾ ಕೇಂದ್ರದಲ್ಲಿ ಸಲ್ಲಿಸುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಮ್ಯಾಟ್-2017 ಪರೀಕ್ಷೆ: ಅರ್ಜಿ ಸಲ್ಲಿಸಲು ಡಿಸೆಂಬರ್ 1 ಕೊನೆಯ ದಿನಮ್ಯಾಟ್-2017 ಪರೀಕ್ಷೆ: ಅರ್ಜಿ ಸಲ್ಲಿಸಲು ಡಿಸೆಂಬರ್ 1 ಕೊನೆಯ ದಿನ

ಜವಹಾರ್ ನವೋದಯ ವಿದ್ಯಾಲಯ ಪ್ರವೇಶಾತಿ

ಅರ್ಜಿ ಸಲ್ಲಿಸುವ ವಿಧಾನ

  • ನವೋದಯ ಶಾಲೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
  • ಸಾಮಾನ್ಯ ಸೇವಾ ಕೇಂದ್ರ (ಸಿ ಎಸ್ ಸಿ) ಯಿಂದ ಪ್ರಮಾಣಪತ್ರ ತೆಗೆದುಕೊಂಡು, ಆ ಪ್ರಮಾಣಪತ್ರವನ್ನು ಶಾಲೆಯ ಮುಖ್ಯೋಪಾದ್ಯಾಯರಿಂದ ಭರ್ತಿ ಮಾಡಿಸಿಕೊಂಡು ಶಾಲೆಯ ಮೊಹರು ಮತ್ತು ಸಹಿಯನ್ನು ಹೊಂದಿರಬೇಕು.
  • ಮುಖ್ಯೋಪಾದ್ಯಾಯರು ದಾಖಲಾತಿ ಪರೀಕ್ಷಿಸಿ ಸಹಿ ಹಾಕಿದ ಮೇಲೆ ಸಿ.ಎಸ್.ಸಿ ಗೆ ಹೋಗಿ ಅರ್ಜಿಯನ್ನು ಅನ್-ಲೈನ್ ನಲ್ಲಿ ತುಂಬಬೇಕು.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-12-2017
  • ಪ್ರವೇಶ ಪರೀಕ್ಷೆ ನಡೆಯುವ ದಿನಾಂಕ: 10-02-2018

ಅರ್ಹತೆ

  • ವಿದ್ಯಾರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರಬೇಕು.
  • ವಿದ್ಯಾರ್ಥಿಯು 9-13ನೇ ವಯೋಮಿತಿಯಲ್ಲಿರಬೇಕು.
  • 3,4 ಮತ್ತು 5ನೇ ತರಗತಿಯನ್ನು ಗ್ರಾಮೀಣ ಪ್ರದೇಶದಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಗ್ರಾಮೀಣ ಮೀಸರಾತಿಯಲ್ಲಿ ಪರಿಗಣಿಸಲ್ಪಡುತ್ತಾರೆ.
  • ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಮೊದಲ ಭಾರಿಗೆ ಮಾತ್ರ ಪಾಲ್ಗೊಳ್ಳಬೇಕು.

ಪ್ರವೇಶ ಪರೀಕ್ಷೆ

21 ಭಾಷೆಗಳ ಪೈಕಿ ಯಾವುದಾದರೂ ಒಂದು ಭಾಷಾ ಮಾಧ್ಯಮದಲ್ಲಿ ಪರೀಕ್ಷೆಯನ್ನು ಬರೆಯಬಹುದಾಗಿದೆ. ಪ್ರವೇಶ ಪರೀಕ್ಷೆಯು ಎರಡು ಗಂಟೆಗಳ ಅವಧಿಯದ್ದಾಗಿದ್ದು, ಒಟ್ಟು ಮೂರು ವಿಭಾಗಗಳನ್ನು ಒಳಗೊಂಡಿರುತ್ತದೆ.

100 ಅಂಕಗಳ ಪ್ರಶ್ನೆ ಪತ್ರಿಕೆ ಇದಾಗಿದ್ದು, ಮಾನಸಿಕ ಸಾಮರ್ಥ್ಯ ಪರೀಕ್ಷೆಗೆ 50 ಅಂಕ, ಗಣಿತ ಮತ್ತು ಭಾಷಾ ಪರೀಕ್ಷೆಗೆ ತಲಾ 25 ಅಂಕಗಳನ್ನು ನಿಗದಿಪಡಿಸಲಾಗಿದೆ. ತಪ್ಪು ಉತ್ತರಗಳಿಗೆ ಅಂಕಗಳನ್ನು ಕಳೆಯುವುದಿಲ್ಲ. ಮರು ಮೌಲ್ಯಮಾಪನ, ಮರು ಎಣಿಕೆಗೆ ಅವಕಾಶ ಇರುವುದಿಲ್ಲ.

ನವೋದಯ ವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವ ಮಕ್ಕಳಿಗೆ ತ್ರಿಭಾಷಾ ಮಾಧ್ಯಮದಲ್ಲಿ ವ್ಯಾಸಂಗ ಮಾಡುವ ಅವಕಾಶ ಕಲ್ಪಿಸಿಕೊಡಲಾಗಿದ್ದು6 ರಿಂದ 12ನೇ ತರಗತಿವರೆಗೆ ನವೋದಯ ವಿದ್ಯಾಲಯಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ.

ನವೋದಯ ವಿದ್ಯಾಲಯಗಳಲ್ಲಿ 8ನೇ ತರಗತಿವರೆಗೆ ಬೋಧನಾ ಮಾಧ್ಯಮವು ಮಾತೃ ಭಾಷೆ ಅಥವಾ ಪ್ರಾದೇಶಿಕ ಭಾಷೆಯಾಗಿರುತ್ತದೆ. ನಂತರದ ತರಗತಿಗಳಲ್ಲಿ ಗಣಿತ ಮತ್ತು ವಿಜ್ಞಾನವನ್ನು ಆಂಗ್ಲಭಾಷೆಯಲ್ಲಿ, ಸಮಾಜಶಾಸ್ತ್ರ ವಿಷಯಗಳನ್ನು ಹಿಂದಿಯಲ್ಲಿ ಬೋಧಿಸಲಾಗುತ್ತದೆ.

ಈ ಶಾಲೆಗಳಲ್ಲಿ ಬಾಲಕ, ಬಾಲಕಿಯರಿಗೆ ಪ್ರತ್ಯೇಕವಾದ ವಸತಿ ನಿಲಯಗಳಿದ್ದು, ಅನುಭವಿ ಶಿಕ್ಷಕರು, ಮಾಹಿತಿ ತಂತ್ರಜ್ಞಾನ, ಇಂಟರ್ನೆಟ್, ವಿಸ್ಯಾಟ್, ಎಜುಸ್ಯಾಟ್ ಜೊತೆಗೆ ಶಿಕ್ಷಣೇತರ ಚಟುವಟಿಕೆಗಳಾದ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆ, ಯೋಗ, ವ್ಯಕ್ತಿತ್ವ ವಿಕಸನ ಇತ್ಯಾದಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ಮುಖ್ಯವಾಗಿ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಾನತೆ ಮತ್ತು ಸಾಮಾಜಿಕ ನ್ಯಾಯದೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
Navodaya Vidyalaya Samiti admissions 2018, The last date for uploading online application in the office of Common Service Centre is 2nd December 2017.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X