NCERT Diploma Course : ಮಾರ್ಗದರ್ಶನ ಮತ್ತು ಸಮಾಲೋಚನೆಯಲ್ಲಿ ಡಿಪ್ಲೋಮಾ ಪ್ರವೇಶಾತಿಗೆ ಅರ್ಜಿ ಆಹ್ವಾನ

ಎನ್‌ಸಿಇಆರ್‌ಟಿ ಮಾರ್ಗದರ್ಶನ ಮತ್ತು ಸಮಾಲೋಚನೆ ಡಿಪ್ಲೋಮಾ ಕೋರ್ಸ್ ಗೆ ಅರ್ಜಿ ಆಹ್ವಾನ

ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಮಾರ್ಗದರ್ಶನ ಮತ್ತು ಸಮಾಲೋಚನೆಯಲ್ಲಿ ಡಿಪ್ಲೊಮಾ ಕೋರ್ಸ್‌ಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು NCERT ನ ಅಧಿಕೃತ ವೆಬ್‌ಸೈಟ್ ncert.nic.in ಗೆ ಭೇಟಿ ನೀಡಿ ನವೆಂಬರ್ 5,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಮಾರ್ಗದರ್ಶನ ಮತ್ತು ಸಮಾಲೋಚನೆಯ ಡಿಪ್ಲೊಮಾ ಕೋರ್ಸ್ ಒಂದು ವರ್ಷದ ಅವಧಿಯ ಕೋರ್ಸ್ ಇದಾಗಿದೆ. ಜನವರಿ ತಿಂಗಳಿನಿಂದ ಆರಂಭವಾಗಿ ಡಿಸೆಂಬರ್ 2022ರ ವೇಳೆಗೆ ಈ ಕೋರ್ಸ್ ಅಂತ್ಯಗೊಳ್ಳಲಿದೆ. ಕೋರ್ಸ್ ಅನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದೆ. ಅವುಗಳಲ್ಲಿ ಮೊದಲ ಆರು ತಿಂಗಳ ಕಲಿಕೆ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಮಾರ್ಗದರ್ಶನ ಮತ್ತು ಸಮಾಲೋಚನೆಯಲ್ಲಿ ಡಿಪ್ಲೊಮಾ ಕೋರ್ಸ್‌ಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು NCERT ನ ಅಧಿಕೃತ ವೆಬ್‌ಸೈಟ್ ncert.nic.in ಗೆ ಭೇಟಿ ನೀಡಿ ನವೆಂಬರ್ 5,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಮಾರ್ಗದರ್ಶನ ಮತ್ತು ಸಮಾಲೋಚನೆಯ ಡಿಪ್ಲೊಮಾ ಕೋರ್ಸ್ ಒಂದು ವರ್ಷದ ಅವಧಿಯ ಕೋರ್ಸ್ ಇದಾಗಿದೆ. ಜನವರಿ ತಿಂಗಳಿನಿಂದ ಆರಂಭವಾಗಿ ಡಿಸೆಂಬರ್ಯು ದೂರ ಶಿಕ್ಷಣದ ಮೂಲಕ ಸ್ವಯಂ-ಕಲಿಕೆಯಾಗಿರುತ್ತದೆ. ಎರಡನೇ ಹಂತವು 'ತೀವ್ರ ಅಭ್ಯಾಸ' ಕಲಿಕೆಯಾಗಿರುತ್ತದೆ ಮತ್ತು ಇದು ಮೂರು ತಿಂಗಳ ಕಾಲ ಅಧ್ಯಯನ ಕೇಂದ್ರದಲ್ಲಿ ಪೂರ್ಣ ಸಮಯದ ಸಂಪರ್ಕ ಕಾರ್ಯಕ್ರಮವಾಗಿರುತ್ತದೆ. ಕೊನೆಯ ಹಂತವು ಅಭ್ಯರ್ಥಿಯ ತವರೂರು ಅಥವಾ ಕೆಲಸದ ಸ್ಥಳದಲ್ಲಿ ಮೂರು ತಿಂಗಳ ಅವಧಿಯಲ್ಲಿ ಇಂಟರ್ನ್‌ಶಿಪ್ ಆಗಿರುತ್ತದೆ.

"ಕೋರ್ಸ್‌ನ ವಿವರಗಳು, ಅರ್ಹತಾ ಪರಿಸ್ಥಿತಿಗಳು, ಕೋರ್ಸ್ ಶುಲ್ಕ ಮತ್ತು ಅರ್ಜಿ ನಮೂನೆಯು www.ncert.nic.in ನಲ್ಲಿ ಲಭ್ಯವಿದೆ. ಲಭ್ಯತೆಯ ಮಾನದಂಡ, ಆಯ್ಕೆ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಕೋರ್ಸ್‌ಗೆ ಪ್ರವೇಶವನ್ನು ಮಾಡಲಾಗುತ್ತದೆ. ಈ ಪ್ರಕ್ರಿಯೆಯು ನವದೆಹಲಿಯ NCERT (DEPFE) ಮತ್ತು ಪ್ರಾದೇಶಿಕ ಶಿಕ್ಷಣ ಸಂಸ್ಥೆಗಳಲ್ಲಿ ಡಿಸೆಂಬರ್ 2021 ರಲ್ಲಿ ನಡೆಯಲಿದೆ ಎಂದು ಎನ್‌ಸಿಇಆರ್‌ಟಿ ಪ್ರಕಟಣೆಯಲ್ಲಿ ಹೇಳಿದೆ.

ಶಿಕ್ಷಕರು,KVS, NVS, ರಾಜ್ಯ ಶಿಕ್ಷಣ ಇಲಾಖೆಗಳು ಮತ್ತು NGO ಗಳ ಪ್ರಮುಖ ಸಿಬ್ಬಂದಿಗೆ ಈ ಡಿಪ್ಲೊಮಾ ಕೋರ್ಸ್ ಅನ್ನು ದೂರ ಶಿಕ್ಷಣ ಮತ್ತು ಮುಖಾಮುಖಿ ವಿಧಾನಗಳಲ್ಲಿ ನೀಡಲಾಗುತ್ತದೆ.

NCERT ಡಿಪ್ಲೊಮಾ ಕೋರ್ಸ್ ಶುಲ್ಕ :

ಕೋರ್ಸ್‌ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗಿನಂತೆ ವರ್ಗವಾರು ಶುಲ್ಕವನ್ನು ಪಾವತಿಸಬೇಕಾಗುತ್ತದೆ:

ಕೇಂದ್ರ ಧನಸಹಾಯ ಪಡೆದ ಸಂಸ್ಥೆಗಳಲ್ಲಿ ಅಭ್ಯರ್ಥಿಗಳು 19,500/- ರೂ ಪಾವತಿಸಬೇಕಿರುತ್ತದೆ.

ರಾಜ್ಯ/ಕೇಂದ್ರಾಡಳಿತ ವಿಭಾಗಗಳಲ್ಲಿ ಅಭ್ಯರ್ಥಿಗಳು 6,000/-ರೂ ಶುಲ್ಕವನ್ನು ಪಾವತಿಸಬೇಕಿರುತ್ತದೆ.

ಖಾಸಗಿ ಅಭ್ಯರ್ಥಿಗಳು 30,000/-ರೂ ಶುಲ್ಕವನ್ನು ಪಾವತಿಸಬೇಕು.

ಅರ್ಜಿ ಸಲ್ಲಿಕೆ:

ಅರ್ಜಿ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿರುತ್ತದೆ. ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಶುಲ್ಕವನ್ನು ಪಾವತಿಸುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ಅಧಿಕೃತ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
NCERT invites application for diploma course in guidance and counselling.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X