ಎನ್ ಡಿ ಆರ್ ಐ ಡಿಪ್ಲೊಮಾ ಮತ್ತು ಪಿಹೆಚ್.ಡಿ ಪ್ರವೇಶಕ್ಕೆ ಅರ್ಜಿ ಆಹ್ವಾನ

Posted By:

ಐಸಿಎಆರ್-ನ್ಯಾಷನಲ್ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್ (ಎನ್ ಡಿ ಆರ್ ಐ) ಸ್ವಾಯುತ್ತ ವಿಶ್ವವಿದ್ಯಾಲಯ, ಕರ್ನಾಲ. 2017 -18 ಸಾಲಿನ ಡಿಪ್ಲೊಮಾ (ಡೈರಿ ಟೆಕ್ನಾಲಜಿ), ಡಿಪ್ಲೊಮಾ (ಅನಿಮಲ್ ಹಸ್ಬೆಂಡರಿ ಮತ್ತು ಡೈರಿಯಿಂಗ್) ಮತ್ತು ಪಿಹೆಚ್.ಡಿ ಕಾರ್ಯಕ್ರಮಗಳ ಪ್ರವೇಶಕ್ಕಾಗಿ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

28-05-2017 ರಂದು ಕರ್ನಾಲ, ದೆಹಲಿ, ಬೆಂಗಳೂರು, ಮುಂಬೈ ಮತ್ತು ಕೋಲ್ಕತ್ತ ಕೇಂದ್ರಗಳಲ್ಲಿ ಆನ್-ಲೈನ್ ಪ್ರವೇಶ ಪರೀಕ್ಷೆ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಪ್ರಮುಖ ದಿನಾಂಕಗಳು

 • ಆನ್-ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-05-2017
 • ಪ್ರವೇಶ ಪತ್ರ ದೊರೆಯುವ ದಿನಾಂಕ: 22-05-2017
 • ಪ್ರವೇಶ ಪರೀಕ್ಷೆ ನಡೆಯುವ ದಿನಾಂಕ: 28-05-2017

ಎನ್ ಡಿ ಆರ್ ಐ ಪ್ರವೇಶಾತಿ ಪ್ರಾರಂಭ

  ವಯೋಮಿತಿ

  • ಪಿಹೆಚ್.ಡಿ ಪ್ರವೇಶಕ್ಕೆ : ಕನಿಷ್ಠ 21 ವರ್ಷಗಳನ್ನು ಪೂರೈಸಿರಬೇಕು (31-07-2017 ಕ್ಕೆ ಅನ್ವಯವಾಗುವಂತೆ)
  • ಡಿಪ್ಲೊಮಾ ಪ್ರವೇಶಕ್ಕೆ: ಕನಿಷ್ಠ 17 ಮತ್ತು ಗರಿಷ್ಠ 23 (31-07-2017 ಕ್ಕೆ ಅನ್ವಯವಾಗುವಂತೆ)

  ವಿದ್ಯಾರ್ಹತೆ

  ಪಿಹೆಚ್.ಡಿ

  • ಅಭ್ಯರ್ಥಿಯು ಸಂಬಂಧಪಟ್ಟ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.(ಒಜಿಪಿಎ ಪರಿಗಣಿಸಲಾಗುವುದು)
  • ಸಾಮಾನ್ಯ ಅಭ್ಯರ್ಥಿಗಳು ಮತ್ತು ಒಬಿಸಿ ಅಭ್ಯರ್ಥಿಗಳು ಕನಿಷ್ಟ ಶೇ.60 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರಬೇಕು
  • ಎಸ್.ಸಿ/ಎಸ್.ಸಿ/ಪಿ.ಹೆಚ್ ಅಭ್ಯರ್ಥಿಗಳು ಕನಿಷ್ಟ ಶೇ.50 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಪೂರೈಸಿರಬೇಕು

  ಡಿಪ್ಲೊಮಾ 

  • ಅಭ್ಯರ್ಥಿಗಳು ಹನ್ನೆರಡನೇ ತರಗತಿ ಅಥವಾ ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಪಿಸಿಎಂಬಿ ಸಂಯೋಜನೆಯಲ್ಲಿ ಅಧ್ಯಯನ ಮಾಡಿರಬೇಕು.
  •  ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು ಕನಿಷ್ಟ ಶೇ.50 ಅಂಕಗಳನ್ನು ಪಡೆದಿರಬೇಕು.
  • ಎಸ್.ಸಿ/ಎಸ್.ಸಿ/ಪಿ.ಹೆಚ್ ಅಭ್ಯರ್ಥಿಗಳು ಕನಿಷ್ಟ ಶೇ.40 ಅಂಕಗಳನ್ನು ಪಡೆದಿರಬೇಕು

  ಅರ್ಜಿ ಸಲ್ಲಿಕೆ

  ಅರ್ಜಿಗಳನ್ನು ಆನ್-ಲೈನ್ ಮೂಲಕ ಸಲ್ಲಿಸಲು ಮಾತ್ರ ಅವಕಾಶ ನೀಡಲಾಗಿದ್ದು, ಇನ್ಯಾವುದೇ ಮಾಧ್ಯಮದ ಮೂಲಕ ಸಲ್ಲಿಸುವಂತಿಲ್ಲ.
  ಆನ್ಲೈನ್ ಅರ್ಜಿ ಸಲ್ಲಿಸುವ ವೆಬ್ಸೈಟ್ ವಿಳಾಸ www.ndri.res.in

  ಅರ್ಜಿ ಶುಲ್ಕ

  ಪಿ.ಹೆಚ್.ಡಿ ಪ್ರವೇಶಕ್ಕೆ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.1200/-
  • ಎಸ್.ಸಿ/ಎಸ್.ಸಿ/ಪಿ.ಹೆಚ್ ಅಭ್ಯರ್ಥಿಗಳಿಗೆ ರೂ.600/-

  ಡಿಪ್ಲೊಮಾ ಪ್ರವೇಶಕ್ಕೆ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.800/-
  • ಎಸ್.ಸಿ/ಎಸ್.ಸಿ/ಪಿ.ಹೆಚ್ ಅಭ್ಯರ್ಥಿಗಳಿಗೆ ರೂ.400/-

  ಶುಲ್ಕವನ್ನು ಇ-ಚಲನ್ ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ಸಲ್ಲಿಸಲು ಅವಕಾಶವಿದೆ. ಚಲನ್ ಮೂಲಕ ಪಾವತಿಸುವವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯಾವುದೇ ಶಾಖೆಯಲ್ಲಿ ಶುಲ್ಕ ಪಾವತಿಸಬಹುದಾಗಿದೆ.

  ನ್ಯಾಷನಲ್ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್

  ಬೆಂಗಳೂರಿನಲ್ಲಿ 1923ರಲ್ಲೇ ಪ್ರಾರಂಭಗೊಂಡ ಇಂಪೀರಿಯಲ್ ಇನ್ಸ್ಟಿಟ್ಯೂಟ್ ಆಫ್ ಅನಿಮಲ್ ಹಸ್ಬೆಂಡ್ರಿ, ಸ್ಥಳೀಯ ರಾಸುಗಳ ತಳಿ ಅಭಿವೃದ್ಧಿಯ ಸಂಶೋಧಗೆ ಹೆಸರುವಾಸಿಯಾಗಿತ್ತಲ್ಲದೆ, ಭಾರತದ ಮೊತ್ತಮೊದಲ ಕ್ಷೀರಕ್ಷೇತ್ರವೆಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.

  ಸ್ವಾತಂತ್ರ್ಯದ ನಂತರ ಇದರ ಹೆಸರನ್ನು ನ್ಯಾಷನಲ್ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್ ಎಂದು ಬದಲಾಯಿಸಲಾಯಿತು. ಪ್ರಸ್ತುತ ನ್ಯಾಷನಲ್ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್ ಎಂಬ ಹೆಸರಿನಲ್ಲಿರುವ ಈ ಸಂಸ್ಥೆ ಅಡುಗೊಡಿಯಲ್ಲಿದೆ. ಇದರ ಮುಖ್ಯಕಛೇರಿ ಹರಿಯಾಣದ ಕರ್ನಾಲದಲ್ಲಿದೆ.

  ಇಲ್ಲಿನ ಸಂಶೋಧನೆಯ ವಿಧಾನದ ಬೆಗ್ಗೆ ತಿಳಿಯಲು 1927ರಲ್ಲಿ ಮಹಾತ್ಮ ಗಾಂಧಿಯವರು ಇಲ್ಲಿಗೆ ಕೆಲವು ದಿನಗಳ ಕಾಲ ಬಂದಿದ್ದರಲ್ಲದೆ, ಮದನ ಮೋಹನ್ ಮಾಳವೀಯರ ಜತೆ ಸೇರಿ, ಜಿಲ್ ಎಂಬ ಹಸುವಿನೊಂದಿಗೆ ನಿಂತು ಫೋಟೊ ಸಹ ತೆಗೆಸಿಕೊಂಡಿದ್ದರು. ಈ ಸಂಸ್ಥೆಯ ಸಂದರ್ಶಕರ ಪುಸ್ತಕದಲ್ಲಿ ಗಾಂಧೀಜಿಯವರ ಸಹಿಯನ್ನು ಇಂದಿಗೂ ಕಾಣಬಹುದು.

  ಹೆಚ್ಚಿನ ಮಾಹಿತಿಗಾಗಿ ndri.res.in ಗಮನಿಸಿ

  English summary
  National Dairy Research Institute Admission open for Ph.D and Diploma programme 2017-18

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia