ನೀನಾಸಮ್ ಡಿಪ್ಲೊಮಾ ಇನ್ ಥಿಯೇಟರ್ ಆರ್ಟ್ಸ್ ಶಿಕ್ಷಣಕ್ಕೆ ಪ್ರಕಟಣೆ

ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯತೆ ಪಡೆದಿರುವ ನೀನಾಸಮ್ ರಂಗಶಿಕ್ಷಣ ಕೇಂದ್ರ 2017-18ನೇ ಸಾಲಿನ ಶಿಕ್ಷಣಕ್ಕೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತದೆ.

ಪ್ರವೇಶಕ್ಕೆ ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. ಇರಬೇಕು. ಪದವೀಧರರಿಗೆ ಆದ್ಯತೆ ಇರುತ್ತದೆ. ರಂಗಭೂಮಿಯಲ್ಲಿ ಆಸಕ್ತಿಯಿದ್ದು, ಸ್ವಲ್ಪಮಟ್ಟಿನ ಅನುಭವ ಇರಬೇಕಾದ್ದು ಅಗತ್ಯ.

ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಊಟ, ವಸತಿ ವ್ಯವಸ್ಥೆ ಇದ್ದು ಹದಿನೈದು ಮಂದಿಗೆ ವಿದ್ಯಾರ್ಥಿವೇತನ ದೊರೆಯುತ್ತದೆ.

ನೀನಾಸಮ್ ಡಿಪ್ಲೊಮಾ ಪ್ರವೇಶ

 

ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ರಂಗಕಲ್ಪನೆ, ರಂಗ ಇತಿಹಾಸ, ನಾಟಕ ಇತಿಹಾಸ, ರಂಗನಟನೆ, ರಂಗಸಿದ್ಧತೆ, ರಂಗವ್ಯವಸ್ಥೆ ಮುಂತಾಗಿ ವಿಸ್ತಾರವಾದ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಶಿಕ್ಷಣ ನೀಡಲಾಗುತ್ತದೆ. ಕೇಂದ್ರದ ನುರಿತ ಅಧ್ಯಾಪಕರುಗಳಲ್ಲದೆ ಹೊರಗಿನ ತಜ್ಞರನ್ನು ಕರೆಸಿ ಸಾಕಷ್ಟು ಪ್ರಬುದ್ಧ ಶಿಕ್ಷಣ ಕೊಡಲಾಗುತ್ತದೆ. ಒಳ್ಳೆಯ ಗ್ರಂಥ ಭಂಡಾರ ಹಾಗೂ ದೃಶ್ಯಶ್ರವ್ಯ ಪರಿಕರಗಳ ಅನುಕೂಲತೆಯಿದ್ದು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರತಿದಿನ ಸುಮಾರು 12 (07.00 am- 09.30 pm) ಗಂಟೆಗಳಷ್ಟು ಕಾಲ ಅಭ್ಯಾಸದಲ್ಲಿ ತೊಡಗಿರಬೇಕಾಗುತ್ತದೆ.

ಪ್ರಾಸ್ಪೆಕ್ಟಸ್, ಶುಲ್ಕದ ವಿವರ ಮತ್ತು ಪ್ರವೇಶ ಪತ್ರಗಳನ್ನು www.ninasam.org ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ ನಮ್ಮ ಕಛೇರಿಗೆ ಬರೆದು ಅಂಚೆಯಲ್ಲಿ ತರಿಸಿಕೊಳ್ಳಬಹುದು.

ಅರ್ಜಿ ಸಲ್ಲಿಸುವ ವಿಧಾನ

  • ಈ ಜಾಲತಾಣದಲ್ಲಿ ಮೂರು ಪ್ರತ್ಯೇಕ ಕಡತಗಳಲ್ಲಿರುವ ಕೇಂದ್ರದ ಪರಿಚಯ ಪತ್ರ, ಅರ್ಜಿ ಫಾರಂ, ಶುಲ್ಕ ಮತ್ತು ಸಂದರ್ಶನದ ವಿವರಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಿ.
  • ಅಂತರ್ಜಾಲದ ಸಂಪರ್ಕ ಇಲ್ಲದವರು ಕೆಳಗಿರುವ ನೀನಾಸಮ್ ವಿಳಾಸಕ್ಕೆ ಕಾಗದ ಬರೆದು ಉಚಿತವಾಗಿ ಕೇಂದ್ರದ ಪರಿಚಯ ಪತ್ರ, ಅರ್ಜಿ ಫಾರಂ, ಶುಲ್ಕ ಮತ್ತು ಸಂದರ್ಶನದ ವಿವರಗಳು - ಇವನ್ನು ತರಿಸಿಕೊಳ್ಳಬಹುದು.
  • ವಿವರಗಳನ್ನು ಓದಿ ಅರ್ಥ ಮಾಡಿಕೊಂಡು ನೀವು ಅರ್ಜಿ ಸಲ್ಲಿಸಬಹುದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.
  • ಅರ್ಜಿಫಾರಂನ್ನು ಪ್ರಿಂಟ್ ಮಾಡಿಕೊಂಡು ಅದನ್ನು ನಿಮ್ಮದೇ ಹಸ್ತಾಕ್ಷರದಲ್ಲಿ ತುಂಬಿ.
  • ಅದರಲ್ಲಿರುವ ಎಲ್ಲ ಲಗತ್ತುಗಳೊಂದಿಗೆ, ರೂ. 500 ಅರ್ಜಿ ಶುಲ್ಕದ ಡಿಡಿ ಸಮೇತ (ನೀನಾಸಮ್ ರಂಗಶಿಕ್ಷಣ ಕೇಂದ್ರ ಎಂಬ ಹೆಸರಿಗೆ, ಕರ್ನಾಟಕ ಬ್ಯಾಂಕ್ ಹೆಗ್ಗೋಡು ಶಾಖೆ ಅಥವಾ ಬೇರಾವುದೇ ಬ್ಯಾಂಕಿನ ಸಾಗರ ಶಾಖೆಯಲ್ಲಿ ಸಂದಾಯವಾಗುವಂತೆ), ನೀನಾಸಮ್ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ, ಕರ್ನಾಟಕ 577 417 - ಇಲ್ಲಿಗೆ ರಿಜಿಸ್ಟರ್ಡ್ ಅಂಚೆ ಮೂಲಕ ರವಾನಿಸಿ.
  • ಅಂತರ್ಜಾಲದ ಮೂಲಕ ಅಥವಾ ಈಮೈಲ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶ ಇರುವುದಿಲ್ಲ.
  • ಸಂದರ್ಶನಕ್ಕೆ ಪ್ರತ್ಯೇಕ ಕರೆಯೋಲೆ ಕಳಿಸುವುದಿಲ್ಲ; ಜತೆಗಿರುವ ಪತ್ರದಲ್ಲಿ ಸೂಚಿಸಿರುವ ಪ್ರಕಾರ ಸಿದ್ಧತೆ ಮಾಡಿಕೊಂಡು ಸಂದರ್ಶಕ್ಕೆ ಬನ್ನಿ.

ಪ್ರವೇಶ ಪತ್ರವನ್ನು ಭರ್ತಿಮಾಡಿ 17-6-2017 ಶನಿವಾರದ ಒಳಗೆ ನೀನಾಸಮ್ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು, ಸಾಗರ, ಶಿವಮೊಗ್ಗ 577 417 ಈ ವಿಳಾಸಕ್ಕೆ ತಲುಪುವಂತೆ ಕಳಿಸಬೇಕು. ದಿನಾಂಕ 24 ಮತ್ತು 25 ಜೂನ್ 2017 ಶನಿವಾರ ಬೆಳಿಗ್ಗೆಯಿಂದ ನಡೆಯುವ ಆಯ್ಕೆಯ ಸಂದರ್ಶನಕ್ಕೆ ಅಭ್ಯರ್ಥಿಗಳು ತಮ್ಮ ವೆಚ್ಚದಲ್ಲೇ ಹೆಗ್ಗೋಡಿಗೆ ಬಂದು ಹಾಜರಿರಬೇಕು.

 

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Ninasam Theatre Institute at Heggodu calls for applications for the 10 months Diploma in Theatre Arts Course for the year 2017-18.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X