ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಪ್ರವೇಶಾತಿ ಪ್ರಾರಂಭ

Posted By:

ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ 2017-2020 ಸಾಲಿಗೆ ಮೂರು ವರ್ಷದ ಡ್ರಾಮ (ಪೂರ್ಣಕಾಲಿಕ) ಡಿಪ್ಲೊಮಾ ತರಗತಿಗಳಿಗೆ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದೆ.

ಎನ್.ಎಸ್.ಡಿ ಎಂದೇ ಹೆಸರುವಾಸಿಯಾದ ರಾಷ್ಟ್ರೀಯ ನಾಟಕ ಶಾಲೆಯು ಸ್ವಾಯತ್ತತೆಯ ಸಂಸ್ಥೆಯಾಗಿದ್ದು, ಸಚಿವಾಲಯ ಸಂಸ್ಕೃತಿಯ ಅಡಿಯಲ್ಲಿ 1959 ರಲ್ಲಿ ಸ್ಥಾಪಿಸಲಾಗಿದೆ. ಇದೊಂದು ರಂಗ ತರಬೇತಿ ಸಂಸ್ಥೆಯಾಗಿದ್ದು ಸ್ವಾಯತ್ತತೆಯ ವಿಶ್ವವಿದ್ಯಾನಿಲಯದ ಸ್ಥಾನಮಾನವನ್ನು ಹೊಂದಿದೆ. ಇದನ್ನು ಸಂಗೀತ ನಾಟಕ ಅಕಾಡೆಮಿಯಾಗಿ ಸ್ಥಾಪಿಸಲಾಗಿದೆ. ಸಂಸ್ಥೆಯು, ವಿದ್ಯಾರ್ಥಿಗಳಿಗೆ ಯೋಜಿತ ಪಠ್ಯಕ್ರಮದ ಸಹಾಯದಿಂದ ಚೆನ್ನಾಗಿ ರಂಗಭೂಮಿ ತರಬೇತಿ ನೀಡುತ್ತದೆ.ರಂಗಭೂಮಿಗೆ ಸಂಬಂಧಿಸಿದ ಪ್ರತಿಯೊಂದು ಅಂಶವನ್ನು ಜಾಗರೂಕತೆಯಿಂದ ಈ ಶಾಲೆಯಲ್ಲಿ ಕಲಿಸಲಾಗುತ್ತದೆ.

ಪ್ರಸಕ್ತ ಸಾಲಿನ ತರಗತಿಗಳು ಜುಲೈ 17 , 2017 ರಿಂದ ಆರಂಭವಾಗಲಿದ್ದು ವೃತ್ತಿಪರ ರಂಗಶಿಕ್ಷಣ ನೀಡುವ ಉದ್ದೇಶ ಹೊಂದಿದೆ.

ಎನ್ ಎಸ್ ಡಿ ಪ್ರವೇಶಾತಿ ಪ್ರಾರಂಭ

ಬೋಧನಾ ಮಾಧ್ಯಮ: ಇಂಗ್ಲಿಷ್/ ಹಿಂದಿ

ಅರ್ಹತೆ

 • ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದಾದರು ಪದವಿ ಹೊಂದಿರಬೇಕು
 • ಕನಿಷ್ಠ ಆರು ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರಬೇಕು
 • ಹಿಂದಿ ಮತ್ತು ಇಂಗ್ಲಿಷ್ ಭಾಷಾ ಜ್ಞಾನ ಹೊಂದಿರಬೇಕು
 • ಮೂವರು ರಂಗತಜ್ಞರಿಂದ ಶಿಫಾರಸ್ಸು ಪಡೆಯತಕ್ಕದ್ದು
 • ರಂಗಭೂಮಿ ಅನುಭವದ ದಾಖಲೆಗಳನ್ನು ನೀಡಬೇಕು

ವಯೋಮಿತಿ

ಕನಿಷ್ಠ 18 ವರ್ಷ ಮತ್ತು ದಿನಾಂಕ 1-07-2017 ಕ್ಕೆ 30 ವರ್ಷ ಮೀರಿರಬಾರದು.
(ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.)

ಮೀಸಲಾತಿ

26 ಸೀಟುಗಳಲ್ಲಿ ನಾಲ್ಕು ಸೀಟುಗಳನ್ನು ಎಸ್.ಸಿ ಅಭ್ಯರ್ಥಿಗಳಿಗೆ. ಎರಡು ಸೀಟುಗಳು ಎಸ್.ಟಿ ಅಭ್ಯರ್ಥಿಗಳಿಗೆ ಮತ್ತು ಏಳು ಸೀಟುಗಳು ಒಬಿಸಿ ಅಭ್ಯರ್ಥಿಗಳಿಗೆ ಮೀಸಲು ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳನ್ನು ಪ್ರಾಥಮಿಕ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆಗಳ ಕಾರ್ಯಾಗಾರದ ಮೂಲಕ ಎರಡು ಹಂತಗಳಲ್ಲಿ ಆಯ್ಕೆ ಮಾಡಿಕೊಳ್ಳಲಾಗುವುದು.

ಪರೀಕ್ಷಾ ಕೆಂದ್ರಗಳು ಮತ್ತು ಪರೀಕ್ಷಾ ಕಾರ್ಯಾಗಾರ ನಡೆಯುವ ದಿನಾಂಕ

 • ಗುವಾಹಟಿ : 01-05-2017
 • ಕೋಲ್ಕತ್ತ: 03-05-2017, 04-05-2017
 • ಭುವನೇಶ್ವರ: 06-05-2017
 • ಚೆನ್ನೈ: 08-05-2017
 • ಬೆಂಗಳೂರು: 10-05-2017
 • ಬೋಪಾಲ್: 12-05-2017
 • ಮುಂಬೈ: 14-05-2017
 • ಲಕ್ನೌ: 18-05-2017
 • ಚಂಡೀಗಡ: 20-05-2017
 • ದೆಹಲಿ: 21-05-2017, 24-05-2017

ಅಭ್ಯರ್ಥಿಗಳಿಗೆ ಪ್ರಾಥಮಿಕ ಪರೀಕ್ಷೆಯ ಸ್ಟಡಿ ಮೆಟಿರಿಯಲ್ ಮತ್ತು ಗೈಡ್-ಲೈನ್ ಗಳನ್ನು ವೆಬ್ಸೈಟ್ ಮತ್ತು ಎನ್ ಎಸ್ ಡಿ ವಿವರಣಾ ಪತ್ರ(ಪ್ರಾಸ್ಪೆಕ್ಟಸ್)ದಲ್ಲಿ ನೀಡಲಾಗಿರುತ್ತದೆ.

ಪ್ರಾಥಮಿಕ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಐದು ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಬೇಕು. ಕಾರ್ಯಾಗಾರುವು ಜೂನ್ 10 ಮತ್ತು 14 ರಂದು ನವದೆಹಲಿಯಲ್ಲಿ ನಡೆಯುವುದು. ಅಭ್ಯರ್ಥಿಗಳಿಗೆ ಊಟ, ವಸತಿ ಮತ್ತು ಪ್ರಯಾಣ ಭತ್ಯೆಯನ್ನು ನೀಡಲಾಗುವುದು.

ಅಭ್ಯರ್ಥಿಗಳ ಆಯ್ಕೆಯು ಅವರ ರಂಗಭೂಮಿ ಅನುಭವ ಮತ್ತು ಪ್ರಾಥಮಿಕ ಪರೀಕ್ಷೆಯನ್ನು ಆಧರಿಸಿದ್ದು, ಆಯ್ಕೆಯ ವೇಳೆ ತೀರ್ಪುಗಾರರ ನಿರ್ಧಾರವೇ ಅಂತಿಮ ತೀರ್ಮಾನವಾಗಿರುತ್ತದೆ.

ವಿದ್ಯಾರ್ಥಿ ವೇತನ

ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಿಂಗಳಿಗೆ ರೂ.8000/- ವೇತನ ನೀಡಲಾಗುವುದು.

ದೈಹಿಕ ಸಾಮರ್ಥ್ಯ

ಆಯ್ಕೆಯಾದ ಅಭ್ಯರ್ಥಿಗಳನ್ನು ದೈಹಿಕ ಸಾಮರ್ಥ್ಯದ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಕೆ

 • ಅಭ್ಯರ್ಥಿಗಳು ಆನ್-ಲೈನ್ ಅಥವಾ ಆಫ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ
 • ಆನ್-ಲೈನ್ ಮುಲಕ ಅರ್ಜಿ ಸಲ್ಲಿಸುವವರು ವೆಬ್ಸೈಟ್ ವಿಳಾಸ www.nsd.gov.in ಮೂಲಕ ಅರ್ಜಿಗಳನ್ನು ಡೌನ್ಲೋಡ್ ಮಾಡಿಕೊಂಡು ಅಂಚೆ ಮೂಲಕ ಸಲ್ಲಿಸಬಹುದು. ಅಥವಾ ಆನ್-ಲೈನ್ ಅಡ್ಮಿಷನ್ ಮೂಲಕವೇ ಸಲ್ಲಿಸಬಹುದಾಗಿದೆ.
 • ಆನ್-ಲೈನ್ ಮೂಲಕ ಡೌನ್ಲೋಡ್ ಸಾಧ್ಯವಾಗದೇ ಇದ್ದಲ್ಲಿ ಎನ್ ಎಸ್ ಡಿ ಪುಸ್ತಕ ಮಳಿಗೆಯಲ್ಲಿ ಅರ್ಜಿಗಳನ್ನು ಪಡೆದು ಸಲ್ಲಿಸಬಹುದಾಗಿದೆ.

ಶುಲ್ಕ ವಿಧಾನ

 • ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸುವವರು ರೂ.50 ಅನ್ನು ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದಾಗಿದೆ
 • ಡೌನ್ಲೋಡ್ ಮಾಡಿ ಅಂಚೆ ಮೂಲಕ ಸಲ್ಲಿಸುವವರು 150 ರೂಗಳ ಡಿಡಿ ಮೂಲಕ ಪಾವತಿಸಬಹುದಾಗಿದೆ

ಅರ್ಜಿ ಮತ್ತು ಪ್ರಾಸ್ಪೆಕ್ಟಸ್

ಪ್ರಾಸ್ಪೆಕ್ಟಸ್ ಮತ್ತು ಅರ್ಜಿಯನ್ನು ಅಂಚೆ ಮೂಲಕ ಪಡೆಯಲು 225 ರೂ.ಗಳ ಡಿಡಿಯನ್ನು ದೆಹಲಿಯ ಡೀನ್ ವಿಳಾಸಕ್ಕೆ ಪತ್ರದ ಮೂಲಕ ಕಳುಹಿಸಿ ಪಡೆಯಬಹುದಾಗಿದೆ. ದಿನಾಂಕ 31 -03 -2017 ರ ಒಳಗೆ ಡಿಡಿಯು ಅಂಚೆ ಮೂಲಕ ತಲುಪಿಸತಕ್ಕದ್ದು.

ಡಿಡಿ ಪ್ರಕ್ರಿಯೆ

ನಿಗದಿತ ಶುಲ್ಕದ ಡಿಡಿಯನ್ನು The Director, National School of Drama , New Delhi ಇವರ ಹೆಸರಿಗೆ ಪಡೆಯಬೇಕು.

ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 22-04-2017

ಅರ್ಜಿ ತಲುಪಿಸುವ ವಿಳಾಸ

To Dean, Academic, National School of Drama, Bahawalpur House, Bhagawandas Road, New Delhi-110001

ಹೆಚ್ಚಿನ ವಿವರಗಳಿಗಾಗಿ nsd.gov.in ಗಮನಿಸಿ

English summary
ADMISSION NOTIFICATION FOR THREE YEAR DIPLOMA COURSE IN DRAMATIC ARTS (2017-2020)AT NATIONAL SCHOOL OF DRAMA, NEW DELHI

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia