ಡಿಪ್ಲೊಮಾ ಇನ್ ನರ್ಸಿಂಗ್ ಅಂಡ್ ಮಿಡ್ ವೈಫರಿ ಪ್ರವೇಶಾತಿ ಪ್ರಾರಂಭ

Posted By:

2017-18 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಡಿಪ್ಲೊಮಾ ಇನ್ ನರ್ಸಿಂಗ್ ಅಂಡ್ ಮಿಡ್ ವೈಫರಿ ಕೋರ್ಸಿನ ಆಯ್ಕೆಗಾಗಿ ಅನ್-ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸರ್ಕಾರಿ ಶುಶ್ರೂಷಾ ಶಾಲೆ ಹಾಗೂ ಖಾಸಗಿ ಶಾಲೆಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳಿಗೆ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು. ಆಗಸ್ಟ್ 04 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. 

ವಿದ್ಯಾರ್ಹತೆ

ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಿಂದ ಶೇ,40 ರ ಸರಾಸರಿಯಲ್ಲಿ ದ್ವಿತೀಯ ಪಿಯುಸಿ ಅಥವಾ 10+2 ಉತ್ತೀರ್ಣರಾಗಿರಬೇಕು. ದ್ವಿತೀಯ ಪಿಯುಸಿಯಲ್ಲಿ ಕಡ್ಡಾಯವಾಗಿ ಇಂಗ್ಲಿಷ್ ಭಾಷೆ ಅಧ್ಯಯಿಸಿರಬೇಕು.

ಡಿಪ್ಲೊಮಾ ಇನ್ ನರ್ಸಿಂಗ್ ಪ್ರವೇಶಾತಿ

ಕೋರ್ಸ್ ಅವಧಿ

ಶುಶ್ರೂಷ ತರಬೇತಿ ಅವಧಿಯು ಮೂರು ವರ್ಷಗಳಾಗಿದ್ದು, ಸರ್ಕಾರಿ ನಿಯಮಗಳ ಪ್ರಕಾರ ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳು ಮಾತ್ರ ಶಿಷ್ಯವೇತನ ಪಡೆಯಲು ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಕೆ

  • ಅರ್ಜಿಗಳನ್ನು ಆನ್-ಲೈನ್ ಮೂಲಕ ಭರ್ತಿ ಮಾಡಿ ಸಲ್ಲಿಸುವುದು.
  • ಅರ್ಜಿಯ ಸಂಖ್ಯೆಯನ್ನು ಯೂಸರ್ ಐಡಿಯಾಗಿ ನಮೂದಿಸುವುದು.
  • ಅಭ್ಯರ್ಥಿಗಳು ಅರ್ಜಿಯಲ್ಲಿ ನಮೂದಿಸಿರುವ ಹುಟ್ಟಿದ ದಿನಾಂಕವನ್ನು ಪಾಸ್ವರ್ಡ್ ಆಗಿ ಬಳಸುವುದು

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ರೂ.250/-
  • ಪ.ಜಾ/ಪ.ಪಂ/ಪ್ರ-1 ರ ಅಭ್ಯರ್ಥಿಗಳಿಗೆ ರೂ.125/-
  • ಶುಲ್ಕವನ್ನು Med.Supt&Deputy Chairman, KSDNER, Banglore ಇವರ ಹೆಸರಿನಲ್ಲಿ ಚಲನ್ ಮೂಲಕ ಯಾವುದೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಭರಿಸತಕ್ಕದ್ದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04/08/2017

ಸೂಚನೆ

ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ ಖಾತರಿ ನೀಡುವುದಿಲ್ಲ. ಸರ್ಕಾರಿ ನರ್ಸಿಂಗ್ ಶಾಲೆಗೆ ಆಯ್ಕೆಯಾಗದ ಸಂದರ್ಭದಲ್ಲಿ ಖಾಸಗಿ ನರ್ಸಿಂಗ್ ಶಾಲೆಗಳಲ್ಲಿನ ಸರ್ಕಾರಿ ಕೋಟಾದಲ್ಲಿ ಆಯ್ಕೆಯಾಗಲು ಇಚ್ಚಿಸುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ನರ್ಸಿಂಗ್ ಶಾಲೆಗಳ ವಿವರಗಳನ್ನು ಕೆ.ಎನ್.ಸಿ ಮಾನ್ಯತೆ ನವೀಕರಣ ಪಡೆದ ನರ್ಸಿಂಗ್ ಶಾಲೆಗಳ ಪಟ್ಟಿ ದೊರೆತ ನಂತರ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು.

ಅಭ್ಯರ್ಥಿಗಳು ಶುಶ್ರೂಷ ತರಬೇತಿಗೆ ಅರ್ಜಿ ಸಲ್ಲಿಸಲಾದ ವೆಬ್ಸೈಟ್ ಅನ್ನು ಗಮನಿಸುತ್ತಿರಬೇಕು. ಕೌನ್ಸಲಿಂಗ್ ಗೆ ಕರೆಪತ್ರಗಳನ್ನು ಕಳುಹಿಸಲಾಗುವುದಿಲ್ಲ. ಅರ್ಹ ಅಭ್ಯರ್ಥಿಗಳ ರ್ಯಾಂಕ್ ಲಿಸ್ಟ್ ಪ್ರಕಟಣೆಯಾದ ನಂತರ ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ಸಂದರರ್ಶನ ಪತ್ರ ಪಡೆಯಬೇಕು.

ಹೆಚ್ಚಿನ ಮಾಹಿತಿಗಾಗಿ www.ksdneb.org ಗಮನಿಸಿ

English summary
Online applications are invited for the admissions of Diploma in Nursing and Midwifery course. Eligible candidates can apply through online before August 4.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia