Online MCA Course : ಮಣಿಪಾಲ್ ವಿಶ್ವವಿದ್ಯಾಲಯದ ಆನ್‌ಲೈನ್ ಎಂಸಿಎ ಕೋರ್ಸ್ ಬಗ್ಗೆ ಫುಲ್ ಡೀಟೇಲ್ಸ್ ಇಲ್ಲಿದೆ

ಈ ಸ್ಪರ್ದಾತ್ಮಕ ಯುಗದಲ್ಲಿ ಆನ್‌ಲೈನ್ ಕೋರ್ಸ್‌ಗಳಿಗೆ ಹೆಚ್ಚು ಬೇಡಿಕೆಯಿದೆ. ಅದರಲ್ಲೂ ವೃತ್ತಿಪರ ಕೋರ್ಸ್‌ಗಳಿಗಂತೂ ಹೆಚ್ಚು ಮನ್ನಣೆಯಿದ್ದು, ಅವುಗಳಲ್ಲಿ 'ಕಂಪ್ಯೂಟರ್ ಅಪ್ಲಿಕೇಶನ್ ಕೋರ್ಸ್' ಕೂಡ ಹೆಚ್ಚು ಬೇಡಿಕೆಯಲ್ಲಿದೆ.

ಆನ್‌ಲೈನ್ ಎಂಸಿಎ ಕೋರ್ಸ್ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ

ಎಂಸಿಎ ಕೋರ್ಸ್ ಅನ್ನು ಸಾಮಾನ್ಯ ಮತ್ತು ಆನ್‌ಲೈನ್ ಮೋಡ್ ಮೂಲಕವೂ ಮಾಡಬಹುದು. ಆನ್‌ಲೈನ್ ಎಂಸಿಎ ಕೋರ್ಸ್‌ಗಳನ್ನು ನೀಡುವ ಅನೇಕ ವಿಶ್ವವಿದ್ಯಾಲಯಗಳಿವೆ. ಆದರೆ ಮಣಿಪಾಲ್ ವಿಶ್ವವಿದ್ಯಾಲಯವು ದೂರಶಿಕ್ಷಣ ಮೂಲಕ ಅತ್ಯುತ್ತಮ ಆನ್‌ಲೈನ್ ಎಂಸಿಎ ಕಂಪ್ಯೂಟರ್ ಅಪ್ಲಿಕೇಶನ್ ಪದವಿಯನ್ನು ಒದಗಿಸುತ್ತಿದೆ. 2 ವರ್ಷಗಳ ಅವಧಿಯ ಸ್ನಾತಕೋತ್ತರ ಕೋರ್ಸ್ ಇದಾಗಿದೆ. ಆನ್‌ಲೈನ್ ಎಂಸಿಎ ಕೋರ್ಸ್, ಇದೊಂದು ಸ್ನಾತಕೋತ್ತರ ಪದವಿ ಕೋರ್ಸ್ ಆಗಿದ್ದು ಇದನ್ನು ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಪದವಿ ಪಡೆದ ನಂತರ ಅಧ್ಯಯನ ಮಾಡಬಹುದು.

ಮಣಿಪಾಲ್ ವಿಶ್ವವಿದ್ಯಾಲಯ ಜೈಪುರದಿಂದ ಆನ್‌ಲೈನ್ MCA ಯೊಂದಿಗೆ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನವನ್ನು ಮರುರೂಪಿಸಿಕೊಳ್ಳಬಹುದು. ನೀವು ಎಲ್ಲಿಂದಲಾದರೂ ಲೈವ್ ಮತ್ತು ರೆಕಾರ್ಡ್ ಮಾಡಿದ ತರಗತಿಗಳಿಗೆ ಹಾಜರಾಗಬಹುದು. ಮಣಿಪಾಲ್ ವಿಶ್ವವಿದ್ಯಾಲಯದಿಂದ ಆನ್‌ಲೈನ್ ಎಂಸಿಎ ಕೋರ್ಸ್‌ಗೆ ಪ್ರವೇಶ ಪಡೆಯುವ ಮೊದಲು, ಅದರ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿದುಕೊಳ್ಳಿ.

ಆನ್‌ಲೈನ್ ಎಂಸಿಎ ಕೋರ್ಸ್ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ

ಮಣಿಪಾಲ್ ವಿಶ್ವವಿದ್ಯಾಲಯ ಆನ್‌ಲೈನ್ ಎಂಸಿಎ ಕೋರ್ಸ್ :

ಮಣಿಪಾಲ್ ವಿಶ್ವವಿದ್ಯಾಲಯ ಆನ್‌ಲೈನ್ ಎಂಸಿಎ ಕೋರ್ಸ್ ಅನ್ನು ಯುಜಿ ನಂತರ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಪಿಜಿ ಮಾಡಲು ಬಯಸುವ, ಆದರೆ ನಿಯಮಿತ ತರಗತಿಗಳನ್ನು ತೆಗೆದುಕೊಳ್ಳಲು ಸಮಯವಿಲ್ಲದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಆನ್‌ಲೈನ್ ಎಂಸಿಎ ಕೋರ್ಸ್ ಎರಡು ವರ್ಷಗಳದ್ದಾಗಿದ್ದು, ನಾಲ್ಕು ಸೆಮಿಸ್ಟರ್‌ಗಳಾಗಿ ವಿಂಗಡಿಸಲಾಗಿದೆ. ಇದಕ್ಕಾಗಿ ವಿದ್ಯಾರ್ಥಿಗಳು ಪ್ರತಿ ಸೆಮಿಸ್ಟರ್‌ಗೆ ಸುಮಾರು 38 ಸಾವಿರ ರೂಪಾಯಿ ಶುಲ್ಕವನ್ನು ಠೇವಣಿ ಮಾಡಬೇಕಾಗುತ್ತದೆ. ಈ ಕೋರ್ಸ್‌ನ ಒಟ್ಟು ಶುಲ್ಕ ಒಂದು ಲಕ್ಷದ ಐವತ್ತು ಸಾವಿರ ರೂಪಾಯಿಗಳು. ಈ ಕೋರ್ಸ್ ಮಾಡಿದ ನಂತರ ಇನ್ಫೋಸಿಸ್, ಟಿಸಿಎಸ್ ಮತ್ತು ವಿಪ್ರೋ ಸೇರಿದಂತೆ ವಿವಿಧ ಕಂಪನಿಗಳಲ್ಲಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು. ಆರಂಭದಲ್ಲಿ ಅಭ್ಯರ್ಥಿಗಳು ವಾರ್ಷಿಕ 5 ರಿಂದ 10 ಲಕ್ಷದವರೆಗೆ ವೇತನವನ್ನು ಪಡೆಯಬಹುದು. ಅನುಭವಿಗಳಿಗೆ ವಾರ್ಷಿಕ 10 ಲಕ್ಷದಿಂದ 20 ಲಕ್ಷದವರೆಗೆ ವೇತನ ಸಿಗುತ್ತದೆ. ಮಣಿಪಾಲ್ ವಿಶ್ವವಿದ್ಯಾಲಯದಿಂದ ಆನ್‌ಲೈನ್ ಎಂಸಿಎ ಕೋರ್ಸ್‌ಗೆ ಅರ್ಹತೆ, ಅರ್ಹತಾ ಮಾನದಂಡಗಳು, ಅರ್ಜಿ ಶುಲ್ಕ ಮತ್ತು ಅರ್ಜಿ ಪ್ರಕ್ರಿಯೆ ಸೇರಿದಂತೆ ಸಂಪೂರ್ಣ ವಿವರಗಳು ಇಲ್ಲಿವೆ.

ಅರ್ಹತಾ ಮಾನದಂಡಗಳು :

ಮಣಿಪಾಲ್ ವಿಶ್ವವಿದ್ಯಾಲಯದ ಆನ್‌ಲೈನ್ ಎಂಸಿಎ ಕೋರ್ಸ್‌ಗೆ ಪ್ರವೇಶಕ್ಕಾಗಿ, ಅರ್ಜಿದಾರರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಹೊಂದಿರಬೇಕು. ಅಸೋಸಿಯೇಶನ್ ಆಫ್ ಇಂಡಿಯನ್ ಯೂನಿವರ್ಸಿಟಿಗಳು (AIU) ಅಥವಾ ಇತರ ಸಮರ್ಥ ಸಂಸ್ಥೆಗಳಿಂದ ಗುರುತಿಸಲ್ಪಟ್ಟ ಸಂಸ್ಥೆಯಿಂದ ಕಂಪ್ಯೂಟರ್ ಅಪ್ಲಿಕೇಶನ್ / ಕಂಪ್ಯೂಟರ್ ಸೈನ್ಸ್ / ಮಾಹಿತಿ ತಂತ್ರಜ್ಞಾನದಲ್ಲಿ ಕನಿಷ್ಠ 50% ಅಂಕಗಳನ್ನು ಹೊಂದಿರಬೇಕು. ಮೀಸಲಾತಿ ವರ್ಗಗಳಿಗೆ 45% ಅಂಕಗಳು ಕಡ್ಡಾಯವಾಗಿದೆ. ಅಭ್ಯರ್ಥಿಗಳು ವಿಜ್ಞಾನ, ವ್ಯವಹಾರ ಆಡಳಿತ, ವ್ಯವಹಾರ ನಿರ್ವಹಣೆ, ಕಲೆ ಮತ್ತು ಮಾನವಿಕತೆ ಮತ್ತು ವಾಣಿಜ್ಯ ಮುಂತಾದ ಇತರ ಸ್ಟ್ರೀಮ್‌ಗಳೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಹೊಂದಿರಬೇಕು. ಅಂತಹ ಅಭ್ಯರ್ಥಿಗಳು ತಮ್ಮ ಸೆಮಿಸ್ಟರ್ 1 ಕೋರ್ಸ್‌ಗಳೊಂದಿಗೆ ಕಂಪ್ಯೂಟರ್ ಮತ್ತು ಐಟಿಯಲ್ಲಿ ಬ್ರಿಡ್ಜ್ ಕೋರ್ಸ್‌ಗೆ ಹಾಜರಾಗಬೇಕು ಮತ್ತು ಪೂರ್ಣಗೊಳಿಸಬೇಕಾಗುತ್ತದೆ.

ಆನ್‌ಲೈನ್ ಎಂಸಿಎ ಕೋರ್ಸ್ ಶುಲ್ಕ :

ಎರಡು ವರ್ಷಗಳವರೆಗೆ ಅರ್ಜಿದಾರರು ರೂ 1,50,000 ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದರಲ್ಲಿ ಅಭ್ಯರ್ಥಿಗಳು ಪ್ರತಿ ಸೆಮಿಸ್ಟರ್‌ಗೆ ರೂ 37,500 ಮತ್ತು ಪರೀಕ್ಷಾ ಶುಲ್ಕ ರೂ 5,000 ಪಾವತಿಸಬೇಕು.

ಆನ್‌ಲೈನ್ ಎಂಸಿಎ ಕೋರ್ಸ್ ಸಿಲಬಸ್:

ಮಣಿಪಾಲ್ ವಿಶ್ವವಿದ್ಯಾಲಯ ಆನ್‌ಲೈನ್ ಎಂಸಿಎ ಕೋರ್ಸ್ ಅನ್ನು ಎರಡು ವರ್ಷಗಳವರೆಗೆ ನಾಲ್ಕು ಸೆಮಿಸ್ಟರ್‌ಗಳಾಗಿ ವಿಂಗಡಿಸಲಾಗಿದ್ದು, ಇದನ್ನು ಗರಿಷ್ಠ 4 ವರ್ಷಗಳಲ್ಲಿ ಪೂರ್ಣಗೊಳಿಸಬಹುದು.

1ನೇ ಸೆಮಿಸ್ಟರ್ ನಲ್ಲಿ ಕಂಪ್ಯೂಟರ್‌ಗಳು ಮತ್ತು ಐಟಿ ಬೇಸಿಕ್, ಸಿ ಪ್ರೋಗ್ರಾಮಿಂಗ್, ಫೌಂಡೇಶನ್ ಮ್ಯಾಥ್ಸ್, ಅಡ್ವಾನ್ಸ್‌ಡ್ ಡೇಟಾಬೇಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಡಿಬಿಎಂಎಸ್), ಕಂಪ್ಯೂಟರ್ ಆರ್ಕಿಟೆಕ್ಚರ್ ಪ್ರಾಕ್ಟಿಕಲ್, ಸಿ ಪ್ರೋಗ್ರಾಮಿಂಗ್ ಪ್ರಾಕ್ಟಿಕಲ್, ಅಡ್ವಾನ್ಸ್‌ಡ್ ಡಿಬಿಎಂಎಸ್ ಪ್ರಾಕ್ಟಿಕಲ್, 2ನೇ ಸೆಮಿಸ್ಟರ್ ನಲ್ಲಿ ಆಪರೇಟಿಂಗ್ ಸಿಸ್ಟಮ್ಸ್, ಅಡ್ವಾನ್ಸ್‌ಡ್ ಡಾಟಾ ಸ್ಟ್ರಕ್ಚರ್ಸ್, ವೆಬ್ ಟೆಕ್ನಾಲಜೀಸ್, ಅಡ್ವಾನ್ಸ್‌ಡ್ ಕಂಪ್ಯೂಟರ್ ನೆಟ್‌ವರ್ಕ್, ಕಮ್ಯುನಿಕೇಶನ್ ಸ್ಕಿಲ್ಸ್, ಪ್ರಾಕ್ಟಿಕಲ್- ಪ್ರಾಯೋಗಿಕ - C++ ಬಳಸಿಕೊಂಡು ಸುಧಾರಿತ ಡೇಟಾ ರಚನೆಗಳು ಪ್ರಾಯೋಗಿಕ - ವೆಬ್ ತಂತ್ರಜ್ಞಾನಗಳು, 3ನೇ ಸೆಮಿಸ್ಟರ್ ನಲ್ಲಿ ಪ್ರಾಬಬಿಲಿಟಿ ಮತ್ತು ಸ್ಟ್ಯಾಟಿಸ್ಟಿಕ್ಸ್, ಪ್ರೋಗ್ರಾಮಿಂಗ್ ಇನ್ ಜಾವಾ, ಅಡ್ವಾನ್ಸ್ ಸಾಫ್ಟ್‌ವೇರ್ ಇಂಜಿನಿಯರಿಂಗ್, ಅನಾಲಿಸಿಸ್ ಮತ್ತು ಡಿಸೈನ್ ಆಫ್ ಅಲ್ಗಾರಿದಮ್ಸ್, ಇಲೆಕ್ಟಿವ್, ಪ್ರಾಕ್ಟಿಕಲ್ - ಜಾವಾ ಪ್ರೋಗ್ರಾಮಿಂಗ್, ಸೆಮಿನಾರ್, 4ನೇ ಸೆಮಿಸ್ಟರ್ ನಲ್ಲಿ ಪ್ರಾಜೆಕ್ಟ್, ಇಲೆಕ್ಟಿವ್
ಇವುಗಳ ಹೊರತಾಗಿ ವಿದ್ಯಾರ್ಥಿಗಳು ಈ ಕೆಳಗಿನ ಯಾವುದೇ ವಿಷಯಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು.

3ನೇ ಸೆಮಿಸ್ಟರ್ ನಲ್ಲಿ ವೈರ್‌ಲೆಸ್ ಮತ್ತು ಮೊಬೈಲ್ ಕಮ್ಯುನಿಕೇಷನ್ಸ್, ಓಪನ್ ಸೋರ್ಸ್ ಡಿಬಿ ಸಿಸ್ಟಮ್ಸ್, ಕ್ರಿಪ್ಟೋಗ್ರಫಿ ಮತ್ತು ನೆಟ್‌ವರ್ಕ್ ಸೆಕ್ಯುರಿಟಿ

4ನೇ ಸೆಮಿಸ್ಟರ್ ನಲ್ಲಿ ಅಡ್ವಾನ್ಸ್‌ಡ್ ವೆಬ್ ಪ್ರೋಗ್ರಾಮಿಂಗ್, ಕ್ಲೌಡ್ ಡಿಬಿ ಸಿಸ್ಟಮ್ಸ್, ಸ್ಟೋರೇಜ್ ಮ್ಯಾನೇಜ್‌ಮೆಂಟ್

ಆನ್‌ಲೈನ್ ಎಂಸಿಎ ಕೋರ್ಸ್ ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ :

ಹಂತ 1. ಮಣಿಪಾಲ್ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ www.onlinemanipal.com ಗೆ ಭೇಟಿ ನೀಡಿ.
ಹಂತ 2. ಮುಖಪುಟದಲ್ಲಿ ಲಾಗಿನ್ ಬಟನ್ ಕ್ಲಿಕ್ ಮಾಡಿ
ಹಂತ 3. ಹೊಸ ಅಭ್ಯರ್ಥಿಗಳು ತಮ್ಮನ್ನು ನೋಂದಾಯಿಸಿಕೊಳ್ಳಬೇಕು
ಹಂತ 4. ಈಗ ನೀವು ಕೋರ್ಸ್ ಅನ್ನು ಆಯ್ಕೆ ಮಾಡಬೇಕು
ಹಂತ 5. ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಠೇವಣಿ ಮಾಡಿ.

ಎಂಸಿಎ ಮಾಡಿದವರ ಜಾಬ್ ರೋಲ್ ಏನಿರತ್ತೆ ?:

ನೆಟ್‌ವರ್ಕ್ ಇಂಜಿನಿಯರ್
ಕ್ವಾಲಿಟಿ ಅನಾಲಿಸ್ಟ್
ಸಾಫ್ಟ್‌ವೇರ್ ಅಪ್ಲಿಕೇಶನ್ ಆರ್ಕಿಟೆಕ್ಟ್
ಪ್ರಾಜೆಕ್ಟ್ ಮ್ಯಾನೇಜರ್
ಸಾಫ್ಟ್‌ವೇರ್ ಕನ್ಸಲ್ಟೆಂಟ್

ಎಂಸಿಎ ನಂತರ ಉದ್ಯೋಗ ನೀಡುವ ಸಂಸ್ಥೆಗಳು :

ಇನ್ಫೋಸಿಸ್
ಟಿಸಿಸ್
ವಿಪ್ರೋ
ಎಚ್‌ಸಿಎಲ್ ಟೆಕ್ನಾಲಜೀಸ್
ಒರಾಕಲ್
ಮೈಕ್ರೋಸಾಫ್ಟ್
ಎಸ್‌ಎಪಿ
ಕಾಗ್ನಿಜೆಂಟ್
ಆಕ್ಸೆಂಚರ್

ಮಣಿಪಾಲ್ ವಿಶ್ವವಿದ್ಯಾಲಯದ ಆನ್‌ಲೈನ್ ಎಂಸಿಎ ಕೋರ್ಸ್ ಅರ್ಹತೆಗಳು, ಶುಲ್ಕ, ಪಠ್ಯಕ್ರಮ ಮತ್ತು ಅರ್ಜಿ ಸಲ್ಲಿಕೆ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
Manipal university invited applications for online MCA course. Here is the details about online MCA course, course details, course fee, job role and application process.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X