ಪ್ಯಾರಾಮೆಡಿಕಲ್ ಕೋರ್ಸ್: ವಾಕ್ ಇನ್ ಇಂಟರ್ವ್ಯೂ

Posted By:

ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್ ನಲ್ಲಿ 2017-18 ರ ಶೈಕ್ಷಣಿಕ ಸಾಲಿನ ಅರೆ ವೈದ್ಯಕೀಯ ಕೋರ್ಸುಗಳಿಗೆ ದಾಖಲಾಗಲು ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.

ದಿನಾಂಕ 28-10-2017 ಹಾಗು 30-10-2017 ರಂದು ನೇರ ಸಂದರ್ಶನ ನಡೆಯುತ್ತಿದ್ದು ಅರ್ಹ ಅಭ್ಯರ್ಥಿಗಳು ನೇರವಾಗಿ ಆಸ್ಪತ್ರೆಯ ಅಧೀಕ್ಷಕರು ಸಾರ್ವಜನಿಕ ಆಸ್ಪತ್ರೆ, ಜಯನಗರ ಇವರನ್ನು ಬೆಳಗ್ಗೆ 10.00 ಗಂಟೆಯಿಂದ ಸಂಜೆ 4.00 ರವರೆಗೆ ನೇರ ಸಂದರ್ಶನಕ್ಕೆ ಭೇಟಿ ನೀಡಬಹುದು.

ದ್ವಿತೀಯ ಪಿಯುಸಿ: ಪರೀಕ್ಷಾ ಶುಲ್ಕ ಸಂದಾಯ ಮಾಡಲು ದಿನಾಂಕ ವಿಸ್ತರಣೆ

ಪ್ಯಾರಾಮೆಡಿಕಲ್ ಕೋರ್ಸ್ ಪ್ರವೇಶಾತಿ

ಕೋರ್ಸ್ ಮತ್ತು ಖಾಲಿ ಸೀಟುಗಳ ವಿವರ

  1. ಡಿಪ್ಲೋಮ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ -02 ಸೀಟು (ಎಸ್.ಸಿ-01, ಒಬಿಸಿ-01)
  2. ಡಿಪ್ಲೋಮ ಇನ್ ಮೆಡಿಕಲ್ ಎಕ್ಸ್ ರೇ ಟೆಕ್ನಾಲಜಿ-07ಸೀಟು (ಜಿಎಂ-03 , ಎಸ್.ಸಿ-01, ಒಬಿಸಿ-02, ಹೈ-ಕ ಜಿಎಂ-01)
  3. ಡಿಪ್ಲೋಮ ಇನ್ ಹೆಲ್ತ್ ಇನ್ಸ್ಪೆಕ್ಟರ್ -07ಸೀಟು (ಜಿಎಂ-01 , ಎಸ್.ಸಿ-01,ಎಸ್.ಟಿ-01, ಒಬಿಸಿ-03, ಹೈ-ಕ ಜಿಎಂ-01)
  4. ಡಿಪ್ಲೋಮ ಇನ್ ಮೆಡಿಕಲ್ ರೆಕಾರ್ಡ್ಸ್ ಟೆಕ್ನಾಲಜಿ-12ಸೀಟು (ಜಿಎಂ-05 , ಎಸ್.ಸಿ-02,ಎಸ್.ಟಿ-01, ಒಬಿಸಿ-03, ಹೈ-ಕ ಜಿಎಂ-01)
  5. ಡಿಪ್ಲೋಮ ಇನ್ ಡಯಾಲಿಸಿಸ್ ಟೆಕ್ನಾಲಜಿ--01ಸೀಟು (ಜಿಎಂ-01)
  6. ಡಿಪ್ಲೋಮ ಇನ್ ಆಪರೇಷನ್ ಥಿಯೇಟರ್ ಟೆಕ್ನಾಲಜಿ-06ಸೀಟು (ಜಿಎಂ-02 , ಎಸ್.ಸಿ-01,ಎಸ್.ಟಿ-01, ಒಬಿಸಿ-01, ಹೈ-ಕ ಜಿಎಂ-01)
  7. ಡಿಪ್ಲೋಮ ಇನ್ ಆಪ್ತಾಲ್ಮಿಕ್ ಟೆಕ್ನಾಲಜಿ-06ಸೀಟು (ಜಿಎಂ-02 , ಎಸ್.ಸಿ-01,ಎಸ್.ಟಿ-01, ಒಬಿಸಿ-01, ಹೈ-ಕ ಜಿಎಂ-01)

ವಿದ್ಯಾರ್ಹತೆ

ಕ್ರಮ ಸಂಖ್ಯೆ 4 ಅನ್ನು ಹೊರತುಪಡಿಸಿ ಉಳಿದ ಎಲ್ಲ ಕೋರ್ಸ್ಗಳಿಗೆ ಪಿಯುಸಿ (ವಿಜ್ಞಾನ)/ ತತ್ಸಮಾನ ಪರೀಕ್ಷೆ (ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ) ವಿಷಯಗಳಲ್ಲಿ ಅಥವಾ ಎಸ್.ಎಸ್.ಎಲ್.ಸಿ/ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

ಕ್ರಮ ಸಂಖ್ಯೆ 4 ರ ಕೋರ್ಸಿಗೆ ಪಿಯುಸಿ (ಸೈನ್ಸ್, ಕಾಮರ್ಸ್, ಆರ್ಟ್ಸ್)/ ತತ್ಸಮಾನ ವಿದ್ಯಾರ್ಹತೆ ಅಥವಾ ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದವರು ಆಂಗ್ಲ ಕಿರಿಯ ಬೆರಳಚ್ಚು ಅಥವಾ ಬೇಸಿಕ್ ಕಂಪ್ಯೂಟರ್ ತರಬೇತಿ ಹೊಂದಿರಬೇಕು.

ಅರ್ಜಿದಾರರು ಕನಿಷ್ಠ 07 ವರ್ಷಗಳು ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮಾಡಿರಬೇಕು.

ನೇರ ಸಂದರ್ಶನಕ್ಕೆ ಹಾಜರಾಗುವ ಸಮಯದಲ್ಲಿ ಎಲ್ಲ ಅಗತ್ಯ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ತರತಕ್ಕದ್ದು.

ಕೋರ್ಸಿನ ಅವಧಿ: ಪಿಯುಸಿ ಅಭ್ಯರ್ಥಿಗಳಿಗೆ 2 ವರ್ಷಗಳು ಮತ್ತು ಎಸ್.ಎಸ್.ಎಲ್.ಸಿ ಅಭ್ಯರ್ಥಿಗಳಿಗೆ 3 ವರ್ಷಗಳು.

ದ್ವಿತೀಯ ಪಿಯುಸಿ : ವಾರ್ಷಿಕ ಪರೀಕ್ಷೆ 2018ರ ತಾತ್ಕಾಲಿಕ ವೇಳಾ ಪಟ್ಟಿ

ವಯೋಮಿತಿ

ದಿನಾಂಕ 30-10-2017 ಕ್ಕೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷಗಳು. ಪ.ಜಾ/ಪ.ಪಂ ಅಭ್ಯರ್ಥಿಗಳಿಗೆ 40 ವರ್ಷಗಳು ಮೀರಿರಬಾರದು.

ಅಭ್ಯರ್ಥಿಗಳ ಆಯ್ಕೆ

ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಮತ್ತು ಪ್ರವರ್ಗಗಳ ಆಧಾರದ ಮೇರೆಗೆ ಆಯ್ಕೆ ಮಾಡಲಾಗುವುದು.

English summary
Bangalore institute of paramedical sciences invites walk in interview from eligible candidates for the admissions of 2017-18 academic year courses.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia