ಸೈನಿಕ ಶಾಲೆಗೆ ಪ್ರವೇಶಾತಿ ಆರಂಭಗೊಂಡಿದ್ದು, ಪ್ರವೇಶಾತಿ ಬಯಸುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಡಿಸೆಂಬರ್ 6,2019ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಸೈನಿಕ ಶಾಲೆ ಸೊಸೈಟಿಯು ಹೆಣ್ಣು ಮಕ್ಕಳಿಗೆ ಪ್ರವೇಶಾತಿ ನೀಡಲು ನವೆಂಬರ್ 26,2019ರಿಂದ ಆನ್‌ಲೈನ್ ಅಪ್ಲಿಕೇಶನ್ ಪೋರ್ಟಲ್ ಅನ್ನು ಪುನಃ ತೆರೆದಿದೆ.
ಎಲ್ಲೆಲ್ಲಿ ಪ್ರವೇಶಾತಿ ಪಡೆಯಬಹುದು?:
ಕರ್ನಾಟಕದ ಬಿಜಾಪುರ ಮತ್ತು ಕೊಡಗು, ಮಹಾರಾಷ್ಟ್ರದ ಚಂದ್ರಾಪುರ, ಉತ್ತರಖಂಡದ ಗೋರಕಲ್, ಆಂದ್ರಪ್ರದೇಶದ ಕಲಿಕಿರಿ ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಪ್ರವೇಶಾತಿಯನ್ನು ಪಡೆಯಬಹುದು.
ಅರ್ಹತಾ ಪರೀಕ್ಷೆಯ ಮೂಲಕ ಪ್ರವೇಶಾತಿ:
ಸೈನಿಕ ಶಾಲೆಯಲ್ಲಿ 6 ರಿಂದ 9ನೆಯ ತರಗತಿಯ ವರೆಗೆ ಪ್ರವೇಶಾತಿ ಪಡೆಯುವ ಅವಕಾಶವಿದ್ದು, ಇದಕ್ಕಾಗಿ ಭಾರತದಾದ್ಯಂತ ಅರ್ಹತಾ ಪರೀಕ್ಷೆ (AISSEE)ಯನ್ನು ನಡೆಸಲಾಗುವುದು. AISSEE 2020ರ ಅರ್ಹತಾ ಪ್ರವೇಶ ಪರೀಕ್ಷೆಯು ಇದೇ ಜನವರಿ 5, 2020 ರಂದು ನಡೆಯಲಿದ್ದು, ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿನಿಯರು ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ.
ವಯೋಮಿತಿ ಎಷ್ಟಿರಬೇಕು?:
6ನೇ ತರಗತಿಗೆ ಪ್ರವೇಶಾತಿ ಬಯಸುವ ವಿದ್ಯಾರ್ಥಿನಿಯು 10 ರಿಂದ 12 ವರ್ಷದೊಳಗಿರಬೇಕು ಮತ್ತು 9 ನೇ ತರಗತಿಗೆ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿನಿಯು 13 ರಿಂದ 15 ವರ್ಷದೊಳಗಿರಬೇಕು.
ರಿಜಿಸ್ಟ್ರೇಷನ್ ಶುಲ್ಕ:
AISSEE 2020 ರ ಪ್ರವೇಶಾತಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಮತ್ತು ರಕ್ಷಣಾ ವಿಭಾಗದ ವಿದ್ಯಾರ್ಥಿಗಳು 400/-ರೂ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು 250/-ರೂ ರಿಜಿಸ್ಟ್ರೇಷನ್ ಶುಲ್ಕವನ್ನು ಪಾವತಿಸಬೇಕಿರುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ:
ಸೈನಿಕ ಶಾಲೆಗೆ ಸೇರ ಬಯಸುವ ವಿದ್ಯಾರ್ಥಿನಿಯು AISSEE 2020ರ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ https://www.sainikschooladmission.in/index.html ಗೆ ಭೇಟಿ ನೀಡಿ ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ರಿಜಿಸ್ಟ್ರೇಶನ್ ಶುಲ್ಕ ಪಾವತಿಸುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಪರೀಕ್ಷೆಯ ವಿವರ:
ಪ್ರವೇಶ ಪರೀಕ್ಷೆಯು OMR ಆಧಾರಿತವಾಗಿರುತ್ತದೆ. ಪರೀಕ್ಷೆಯಲ್ಲಿ ಆಯ್ಕೆಗೊಂಡ ವಿದ್ಯಾರ್ಥಿನಿಯು ಪ್ರವೇಶಾತಿ ಪಡೆಯಬಹುದು.
ಆನ್‌ಲೈನ್ ಮೂಲಕ ನೇಕರವಾಗಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.