ಪ್ರತಿಷ್ಠಿತ ಶಾಲೆ ಸೇರಲು ಸಮಾಜ ಕಲ್ಯಾಣ ಇಲಾಖೆಯಿಂದ ಅರ್ಜಿ ಅಹ್ವಾನ

Posted By:

ನಗರದ ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿಗೇ ಪ್ರವೇಶ ಬಯಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಸಮಾಜ ಕಲ್ಯಾಣ ಇಲಾಖೆಯು ಅರ್ಜಿ ಆಹ್ವಾನಿಸಿದೆ.

ಐದನೇ ತರಗತಿ ಉತ್ತೀರ್ಣಹೊಂದಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಶಾಲಾ ಶುಲ್ಕ ಮತ್ತು ನಿರ್ವಹಣಾ ಶುಲ್ಕವನ್ನು ಸಮಾಜ ಕಲ್ಯಾಣ ಇಲಾಖೆ ಭರಿಸಿಲಿದೆ.

52 ವಿದ್ಯಾರ್ಥಿಗಳಿಗೆ (ಪರಿಶಿಷ್ಟ ಜಾತಿ 40 ಮತ್ತು ಪರಿಶಿಷ್ಟ ವರ್ಗದ 12) ಮಾತ್ರ ಅವಕಾಶವಿದ್ದು ಏಪ್ರಿಲ್ 25 ರ ಒಳಗೆ ಅರ್ಜಿಗಳನ್ನು ನಗರದ ಸ್ಥಳೀಯ ಸಮಾಜ ಕಲ್ಯಾಣ ಇಲಾಖೆ ಕಛೇರಿಗಳಲ್ಲಿ ಸಲ್ಲಿಸಬೇಕು.

ಪ್ರತಿಷ್ಠಿತ ಶಾಲೆ ಸೇರಲು ಅರ್ಜಿ ಅಹ್ವಾನ

ಕರ್ನಾಟಕದ ಜಿಲ್ಲೆಗಳಲ್ಲಿ ಇರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ಶಿಕ್ಷಣ ವ್ಯವಸ್ಥೆ ಕಲ್ಪಿಸಲಾಗಿದ್ದು, ಬೆಂಗಳೂರು ನಗರಕ್ಕೆ ಸೇರಿದ ಕೆಲ ಶಾಲೆಗಳ ಹೆಸರು ಈ ಕೆಳಕಂಡಂತಿದೆ.

ಪ್ರತಿಷ್ಠಿತ ಶಾಲೆಗಳ ಹೆಸರು

ವಿಜಯನಗರದ ದಿ ನ್ಯೂ ಕೇಂಬ್ರಿಡ್ಜ್ ಹೈಸ್ಕೂಲ್, ಮಲ್ಲೇಶ್ವರದ ನಿರ್ಮಲಾ ರಾಣಿ ಹೈಸ್ಕೂಲ್, ಹೊಸೂರು ರಸ್ತೆಯ ಅನೇಕಲ್ ಪಬ್ಲಿಕ್ ಸ್ಕೂಲ್, ಅನೇಕಲ್ ತಾಲ್ಲೂಕಿನ ಗಿಡ್ಡೇನಹಳ್ಳಿಯ ಶ್ರೀ ವೆಂಕಟೇಶ್ವರ ಹೈಸ್ಕೂಲ್, ಕೆಂಗೇರಿಯ ದೊಡ್ಡಬೆಲೆಯ ಬಸವ ರೆಸಿಡೆನ್ಸಿಯಲ್ ಗರ್ಲ್ಸ್ ಸ್ಕೂಲ್, ವಿಜಯನಗರದ ಭಂಟ್ಸ್ ಸಂಘದ ಆರ್.ಎನ್.ಎಸ್ ವಿದ್ಯಾನಿಕೇತನ, ಟಿ.ದಾಸರಹಳ್ಳಿ ಬಡಾವಣೆಯ ಭುವನೇಶ್ವರಿನಗರದ ವಿಜಯಭಾರತಿ ಇಂಗ್ಲಿಷ್ ಪ್ರೈಮರಿ ಸ್ಕೂಲ್, ಮೈಕೋ ಬಡಾವಣೆಯ ಶಾಂತಿನಿಕೇತನ ಟ್ರಸ್ಟ್ ಸ್ಕೂಲ್, ಉತ್ತರಹಳ್ಳಿಯ ಪೂರ್ಣಪ್ರಜ್ಞ ಬಡಾವಣೆಯ ಕಸ್ತೂರ್ ಬಾ ಪಬ್ಲಿಕ್ ಸ್ಕೂಲ್.

ಸಮಾಜ ಕಲ್ಯಾಣ ಇಲಾಖೆ

ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಈ ಇಲಾಖೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ, ವಿದ್ಯಾರ್ಥಿವೇತನ ಮತ್ತು ಇನ್ನಿತರ ಶೈಕ್ಷಣಿಕ ಬೆಳವಣಿಗೆಗೆ ಬೇಕಿರುವ ಆರ್ಥಿಕ ಸಹಾಯವನ್ನು ಮಾಡುತ್ತದೆ.

ಶಿಕ್ಷಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯ ಕೆಲವು ಪ್ರಮುಖ ಯೋಜನೆಗಳು

  • ರಾಜ್ಯ ಸರ್ಕಾರದ ಮ್ಯಾಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ
  • ಭಾರತ ಸರ್ಕಾರದ ಮ್ಯಾಟ್ರಿಕ್ ಪೂರ್ವ ವಿದ್ಯಾರ್ಥಿ ವೇತನದ
  • ಭಾರತ ಸರ್ಕಾರದ ಮ್ಯಾಟ್ರಿಕ್ ನಂತರದ ಮಾಸಿಕ ವಿದ್ಯಾರ್ಥಿ ವೇತನದ
  • ಶಿಕ್ಷಣ ಇಲಾಖೆಯ ಕಾರ್ಯಕ್ರಮದಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ

ಹೆಚ್ಚಿನ ವಿವರಗಳಿಗಾಗಿ ಸಮಾಜ ಕಲ್ಯಾಣ ಇಲಾಖೆ ವೆಬ್ಸೈಟ್ sw.kar.nic.in ಗಮನಿಸಿ

    English summary
    Karnataka social welfare department invites application for class VI students to join prestigious schools
    Please Wait while comments are loading...