ಎಸ್ ಆರ್ ಎಂ ವಿವಿ ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಷನ್

Posted By:

ಎಸ್ ಆರ್ ಎಂ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ ಕೋರ್ಸುಗಳ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕಟ್ಟಂಕುಲಾತೂರ್, ರಾಮಪುರಂ, ವಡ್ಲಪಲಾನಿ ಮತ್ತು ಘಾಝಿಯಾಬಾದ್ ಕ್ಯಾಂಪಸ್ ಗಳಲ್ಲಿನ ಎಂಜಿನಿಯರಿಂಗ್ ಸೀಟುಗಳಿಗಾಗಿ ಪ್ರವೇಶ ಪರೀಕ್ಷೆ ನಡೆಯಲಿದೆ.

ಬಿ.ಟೆಕ್ ಕೋರ್ಸುಗಳ ಪ್ರವೇಶಕ್ಕಾಗಿ 2018 ಏ.16 ರಿಂದ 30 ರವರೆಗೆ ಎಸ್ ಆರ್ ಎಂ ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಷನ್ ಇಂಜಿನಿಯರಿಂಗ್ ನಡೆಯಲಿದೆ.

ಎಸ್ ಆರ್ ಎಂ ವಿವಿ ಜೆಇಇಇ

ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು 2018 ರ ಮಾ.31 ಕೊನೆಯ ದಿನ. ಪ್ರವೇಶಕ್ಕೆ ಕಂಪ್ಯೂಟರ್ ಆಧಾರಿತ ಎಸ್ ಆರ್ ಎಂ ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಷನ್ ಇಂಜಿಇಯರಿಂಗ್ ನಡೆಯಲಿದೆ. ಮಿಡಲ್ ಈಸ್ಟ್ ಸೇರಿ ದೇಶದ 130 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಭಾರತೀಯ ಮೂಲದ ಅಥವಾ ಅನಿವಾಸಿ ಭಾರತೀಯರು ಎಸ್ಆರ್ ಎಂಜೆಇಇಇ 2018ಕ್ಕೆ ಅರ್ಜಿ ಸಲ್ಲಿಸಬಹುದು. ಎಸ್ಅರ್ಎಂಜೆಇಇಇ ಯಲ್ಲಿ ಅರ್ಹತೆ ಪಡೆದ ಅನಿವಾಸಿ ಭಾರತೀಯ ವಿದ್ಯಾರ್ಥಿಗಳು 4 ವರ್ಷ ಶೇ.35 ವಿದ್ಯಾರ್ಥಿವೇತನ ಪಡೆಯಲು ಅರ್ಹರಾಗಿರುತ್ತಾರೆ.

ಅಂತರಾಷ್ಟ್ರೀಯ ಪ್ರವೇಶ ವಿಭಾಗದ ಮೂಲಕ ಎಸ್ ಆರ್ ಎಂ ಜೆಇಇಇ ಬರೆಯದೆ ಪೂರ್ಣ ಬೋಧನಾ ಶುಲ್ಕ ಪಾವತಿಸಿ ಯಾವುದೇ ಬಿ.ಟೆಕ್ ಕೋರ್ಸ್ ಪಡೆಯಲು ಅರ್ಹರಾಗಿರುತ್ತಾರೆ.

ಹಲವು ವಿದ್ಯಾರ್ಥಿವೇತನ, ಸಂಶೋಧನಾ ಸಹಾಯವನ್ನು ವಿವಿ ನೀಡುತ್ತಿದೆ. ಎಸ್ ಆರ್ ಎಂ ಜೆ ಇಇಇ ಟಾಪರ್ ಗೆ ಶೇ.100 ಟ್ಯೂಷನ್ ಶುಲ್ಕ ಮರುಪಾವತಿಯೂ ಸಿಗಲಿದೆ.

English summary
Online Applications invited from eligible candidates for SRMJEEE - 2018 Admission To B.Tech In SRM University Chennai.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia